ಭಾನುವಾರ, ಮೇ 16, 2021
22 °C

ಸರ್ಕಾರದ ಯೋಜನೆಗೆ ಆಧಾರ ಕಾರ್ಡ್ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: `ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಇನ್ನು ಮುಂದೆ ಆಧಾರ ಕಾರ್ಡ್ ಅವಶ್ಯ~ ಎಂದು ತಹಸೀಲ್ದಾರ್ ಆರ್.ಡಿ. ಉಪ್ಪಿನ ಹೇಳಿದರು.ಇಲ್ಲಿಯ ತಾಯಿ ಪಾರ್ವತಿ ಮಕ್ಕಳಗದಲ್ಲಿ ಗುರುವಾರ ಜರುಗಿದ ಆಧಾರ ಕಾರ್ಡ್ ಗುರುತಿನ ಚೀಟಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

 

`ಮಕ್ಕಳನ್ನು ಶಾಲೆಗೆ ಸೇರಿಸುವುದು, ಪೆನ್ಶನ್ ಪಡೆಯುವುದು ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಆಧಾರ ಕಾರ್ಡ್ ಅವಶ್ಯವಾಗಿದೆ. ಚಿಕ್ಕ ಮಕ್ಕಳು ಒಳಗೊಂಡಂತೆ ಕುಟುಂಬದ ಎಲ್ಲ ಸದಸ್ಯರು ಕೇಂದ್ರಕ್ಕೆ ಆಗಮಿಸಿ ಅರ್ಜಿ ಭರ್ತಿ ಮಾಡಿ ಫೋಟೋ ತೆಗೆಯಿಸಿಕೊಳ್ಳಬೇಕು. ಒಂದು ತಿಂಗಳ ಒಳಗಾಗಿ ಕಾರ್ಡ್‌ಗಳು ನೇರವಾಗಿ ಜನರ ಮನೆಗೆ ತಲುಪುತ್ತವೆ.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1, 4 ಹಾಗೂ ತಾಯಿ ಪಾರ್ವತಿ ಮಕ್ಕಳಗದಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.  ಇಲ್ಲಿ ಒಟ್ಟು 13 ಕಂಪ್ಯೂಟರ್‌ಗಳನ್ನು ಅಳವಡಿಸಿದ್ದು ಸಾರ್ವಜನಿಕರು ಮತದಾನದ ಚೀಟಿ, ಬ್ಯಾಂಕಿನ ಪಾಸ್ ಪುಸ್ತಕ, ಪ್ಯಾನ್‌ಕಾರ್ಡ್, ಎಲ್.ಸಿ ಯಂಥ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಬರಬೇಕು.

 

ಯೋಜನೆ ನಿರಂತರವಾಗಿದ್ದು ಆದಷ್ಟು ಬೇಗನೇ ಎಲ್ಲ ಸಾರ್ವಜನಿಕರು ತಪ್ಪದೆ ಆಧಾರ ಕಾರ್ಡ್ ಪಡೆಯಬೇಕು~ ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ಉಪಾಧ್ಯಕ್ಷ ಯಲ್ಲಪ್ಪಗೌಡ ಉದ್ದನಗೌಡ್ರ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಪುರಸಭೆ ಸದಸ್ಯರಾದ ಎನ್.ಜಿ. ಹೊಂಬಳ, ರಾಜು ಕುಂಬಿ, ವಿ.ಜಿ. ಪಡಗೇರಿ, ಸುನೀಲ ಮಹಾಂತಶೆಟ್ಟರ, ಚಂಪಾವತಿ ಕಲ್ಲಣ್ಣವರ, ಗುರಪ್ಪ ಮುಳಗುಂದ ಸೇರಿದಂತೆ ಮತ್ತಿತರರು ಹಾಜರಿದ್ದರು. ಪುರಸಭೆ ಮುಖ್ಯಾಧಿಕಾರಿ ಆನಂದ ಬದಿ ಸ್ವಾಗತಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.