ಶನಿವಾರ, ಮೇ 8, 2021
26 °C

ಸರ್ಕಾರಿ ಬೇಸಿಗೆ ಬೇಡ: ಬಯ್ಯಾಪುರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಬದಲಾಗಿರುವ ರಾಜ್ಯ ಸರ್ಕಾರಿ ಕಚೇರಿ ವೇಳೆಗೆ ಸರಿಯಾಗಿ ಶಾಸಕರು ಇಲ್ಲಿಯ ಸಣ್ಣ ನೀರಾವರಿ ಕಚೇರಿಗೆ ಹೋದರೂ ಅಲ್ಲಿ ಅವರನ್ನು ಸ್ವಾಗತಿಸುವುದಕ್ಕೆ ಯಾರೊಬ್ಬ ನೌಕರರೂ ಇಲ್ಲದ ಪ್ರಸಂಗ ಸೋಮವಾರ ಬೆಳಿಗ್ಗೆ ನಡೆಯಿತು.ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರ ಮುಂದೆ ಪ್ರಸ್ತಾಪಿಸಿದ ಬಯ್ಯಾಪುರ, 8.30ರ ಸಮಯದಲ್ಲಿ ಸಣ್ಣ ನೀರಾವರಿ ವಿಭಾಗ ಮತ್ತು ಉಪವಿಭಾಗದ ಕಚೇರಿಗೆ ಹೋದರೆ ಅಲ್ಲಿ `ಡಿ~ದರ್ಜೆ ನೌಕರರು ಸಹ ಇರಲಿಲ್ಲ, ಒಳಗಿನ ಎಲ್ಲ ಬಾಗಿಲುಗಳೂ ಇನ್ನೂ ಮುಚ್ಚಿದ್ದವು ಎಂದರು.

 

ಬರಗಾಲ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಹಗಲು ರಾತ್ರಿಯನ್ನದೇ ಸೇವೆ ಸಲ್ಲಿಸಿದರೂ ಸಮಯ ಸಾಲದಿರುವಾಗ ಅಧಿಕಾರಿಗಳು, ನೌಕರರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಪದ್ಧತಿ ಕೊನೆಗೊಳ್ಳಬೇಕು, ಇತರೆ ಶ್ರಮಜೀವಿಗಳಿಗಿಂತ ರಾಜ್ಯ ಸರ್ಕಾರಿ ನೌಕರರು ಪ್ರತ್ಯೇಕವೇನಲ್ಲ.

 

ಹಾಗಾಗಿ ಎಲ್ಲೆಡೆಯಂತೆ ಕಚೇರಿ ವೇಳೆಯನ್ನು ಇಲ್ಲಿಯೂ ಮುಂದುವರೆಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ಕಾರ್ಯದರ್ಶಿಯವರನ್ನು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.