ಶನಿವಾರ, ಮೇ 8, 2021
26 °C

ಸರ್ಪಗಳ ಮಿಲನ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ನಿಡಗುಂದಿಯ ಪ್ರಮುಖ ಜನನಬೀಡ ಪ್ರದೇಶ ವಿರೇಶ ನಗರದಲ್ಲಿ ಶನಿವಾರ ಕಂಡು ಬಂದ ಸರ್ಪಗಳ ಮಿಲನ ಮಹೋತ್ಸವ ಸುಮಾರು ಎರಡು ಗಂಟೆಗಳ ಕಾಲ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿತು.ಸುಮಾರು 10 ಅಡಿ ಉದ್ದದ ಕೆರೆ ಹಾವು ಮತ್ತು ನಾಗರ ಹಾವುಗಳು ಪರಸ್ಪರ ಒಂದಕ್ಕೊಂದು ತಳಕು ಹಾಕಿಕೊಂಡು ಲೊಕದ ಪರಿವೆಯಿಲ್ಲದೇ ಭಾವೋನ್ಮಾದದಲ್ಲಿ ಮುಳುಗಿದ್ದವು.ಶನಿವಾರ ಸಂಜೆ 1.30 ಯಿಂದ 2 ತಾಸು ನಿರಂತರವಾಗಿ ಮಿಲನದಲ್ಲಿ ತೊಡಗಿದ್ದವು. ಪರಸ್ಪರ ಒಂದನ್ನೊಂದು ಮೈಯುಬ್ಬಿಸಿ ನಾ ಮುಂದೆ, ತಾ ಮುಂದೆ ಎಂದು ಮುಗಿಲು ಮುಟ್ಟುವ ರೀತಿಯಲ್ಲಿ ಬಾಲನ್ನು ನೆಲಕ್ಕೆ ಹಚ್ಚಿ, ಇಡೀ ದೇಹವನ್ನು ಬಾನಿನೆಡೆಗೆ ಚಾಚಿ, ಸ್ಪರ್ಶ ಸುಖದಲ್ಲಿ ಮಿಂದೆದ್ದವು.ಈ ಸಂದರ್ಭದಲ್ಲಿ ಅವುಗಳನ್ನು ವೀಕ್ಷಿಸಲು ನೂರಾರು ಜನರು ಸಮಾವೇಶಗೊಂಡಿದ್ದರು. ಅದರ ಪರಿವೆ ಇಲ್ಲದೇ ತಮ್ಮಷ್ಟಕ್ಕೆ ತಾವು ಮಿಲನೋತ್ಸವದಲ್ಲಿ ತೊಡಗಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.