ಭಾನುವಾರ, ಏಪ್ರಿಲ್ 18, 2021
24 °C

ಸರ್ವರಿಗೂ ಕಾನೂನು ಸಹಾಯಕ್ಕೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅನುಕೂಲ ಸಿಗಬೇಕು. ಇದಕ್ಕೆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಮಾನದಂಡ ಆಗಬಾರದು ಎಂಬ ಕಾರಣಕ್ಕಾಗಿ ಉಚಿತ ಕಾನೂನು ನೆರವು ಯೋಜನೆ ಸರ್ಕಾರ ಜಾರಿಗೆ ತಂದಿದೆ ಎಂದು ಮುಳಬಾಗಲು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಾಬಾಲಯ್ಯ ಹೇಳಿದರು.ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತದ ವತಿಯಿಂದ ಸೊನ್ನವಾಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ನಡೆದ ಕಾನೂನು ಸಾಕ್ಷರತಾ ರಥ ಯಾತ್ರೆಯ ಸಮಾರೋಪ ಹಾಗೂ ಕಾನೂನು ಸಾಕ್ಷರತಾ ಸಮಾರಂಭದಲ್ಲಿ ಅವರು ಮಾತನಾಡಿದರು.ಗ್ರಾಮಗಳಲ್ಲಿ ಪರಿಹರಿಸಬಹುದಾದ ಸಣ್ಣ-ಪುಟ್ಟ ಮನಸ್ತಾಪಗಳಿಗೂ ನ್ಯಾಯಾಲಯದ ಮೆಟ್ಟಿಲೇರುವುದು ಗಮನಿಸಿದರೆ, ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಆತಂಕವಾಗುತ್ತದೆ.ಕುಟುಂಬ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿ ಕಾನೂನು ಸಮಸ್ಯೆಗಳು ಎದುರಾಗುತ್ತಿವೆ. ಸಂಕಷ್ಟದಲ್ಲಿರುವವರು ಕಾನೂನು ನೆರವು ಪಡೆಯಿರಿ. ಕಾನೂನು ಎಂಬುದು ಹುಡುಗಾಟದ ಪುಸ್ತಕವಲ್ಲ, ಅದರ ದುರುಪಯೋಗ ಸಲ್ಲದು ಎಂದರು.ಉದ್ಯೋಗ ಖಾತ್ರಿ ಯೋಜನೆ ಕುರಿತು ಡಾ.ವೆಂಕಟಸ್ವಾಮಿ ಮಾತನಾಡಿದರು. ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಓಂಕಾರ್‌ಮೂರ್ತಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ರಾಜು, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ರಾಜಣ್ಣ, ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟರವಣಪ್ಪ, ವಕೀಲರಾದ ಎಂ.ವರದರೆಡ್ಡಿ,ಎಂ.ವೆಂಕಟರವಣ, ಜಯಪ್ಪ, ಕೆ.ನಾಗರಾಜ್. ಗ್ರಾಮ ಪಂಚಾಯಿತಿ ಸದಸ್ಯರಾದ ಸಂಗಂಡ್ಲಹಳ್ಳಿ ನಾರಾಯಣಪ್ಪ, ಚಿಕ್ಕಬಂಡಹಳ್ಳಿ ಸೀನಪ್ಪ, ಖಾದ್ರಿಪುರ ಶಂಕರಪ್ಪ. ಗುಮ್ಮಳಾಪುರ ಸುಬ್ರಮಣ್ಯಂ, ಮಾಜಿ ಸದಸ್ಯರಾದ ತಿಪ್ಪನ್ನ, ಖಲೀಂಸಾಬ್, ಅಬ್ದುಲ್‌ರಷೀದ್ ಭಾಗವಹಿಸಿದ್ದರು. ವಕೀಲ ಎಂ.ಎಸ್.ಶ್ರೀನಿವಾಸರೆಡ್ಡಿ ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.