ಜುಬಿನ್ ಮತ್ತು ಶೈನಾ
ನಾವು ಹಣ ನೀಡಿ ಸುಖ– ಸಂತೋಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಹಣದಿಂದ ಸರಕು ಅಥವಾ ವಸ್ತುಗಳನ್ನು ಕೊಂಡು ಸಂತೋಷ ಅನುಭವಿಸಬಹುದು ಎನ್ನುತ್ತಾರೆ ಜುಬಿನ್ ಮತ್ತು ಶೈನಾ.

ಕೇವಲ ಮೂರು ತಿಂಗಳ ಹಿಂದಷ್ಟೇ ಅಣ್ಣ ತಂಗಿ ಜುಬಿನ್ ಮತ್ತು ಶೈನಾ ಕಟ್ಟಿದ ಕಂಪೆನಿ ರೆಡ್ಸ್ಪೋಕ್ಸ್ಸೈಕಲಿಂಗ್. ಜುಬಿನ್ಎಂಜಿನಿಯರಿಂಗ್ ಪದವೀಧರ ಹಾಗೂ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹೋದರಿ ಶೈನಾ ಮಾರ್ಕೆಟಿಂಗ್ ಕಂಪೆನಿಗಳಲ್ಲಿ ಹಲವು ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಸೈಕಲ್ ಡೇ ಕಾರ್ಯಕ್ರಮಗಳ ಸ್ಫೂರ್ತಿಯಿಂದ ಈ ಕಂಪೆನಿಯನ್ನು ತೆರೆಯಲಾಯಿತು. ಬಿಡುವಿನ ಸಮಯದಲ್ಲಿ ದೈಹಿಕ ಕಸರತ್ತಿಗಾಗಿ (ವ್ಯಾಯಾಮ) ಸೈಕಲ್ ತುಳಿಯಬೇಕು ಎನ್ನುವುದೇ ಕಂಪೆನಿಯ ಮುಖ್ಯ ಉದ್ದೇಶ ಎನ್ನುತ್ತಾರೆ ಜುಬಿನ್.

‘ಬೆಳಿಗ್ಗೆ ಅಥವಾ ಸಂಜೆ ತಮಾಷೆಗಾಗಿಯಾದರೂ ಸೈಕಲ್ ತುಳಿದರೆ ವ್ಯಾಯಾಮ ಮಾಡಿದಂತಾಗುವುದಲ್ಲದೆ ಮನಸ್ಸು ಉಲ್ಲಾಸಗೊಳ್ಳುವುದು. ಸದ್ಯ ನಮ್ಮ ಗೆಳೆಯರು ಮತ್ತವರ ಸ್ನೇಹಿತರು ಮಾತ್ರ ಬರುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜಾಹೀರಾತು ನೀಡುತ್ತಿದ್ದೇವೆ’ ಎನ್ನುತ್ತಾರೆ ಶೈನಾ.

ಎಲ್ಲಾ ವಯೋಮಾನದವರು ಬಳಸಬಹುದಾದ ಸುಧಾರಿತ ತಂತ್ರಜ್ಞಾನದ ಸೈಕಲ್ಗಳು ಇವರ ಬಳಿ ಲಭ್ಯವಿವೆ. ವಾರಾಂತ್ಯದಲ್ಲಿ ಸೈಕಲ್ ಸವಾರಿ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರಿನಿಂದ ಹೈದರಾಬಾದ್, ಮುಂಬೈ, ತಿರುವನಂತಪುರ, ಚೆನ್ನೈ ನಗರಗಳಿಗೆ ಐದಾರು ದಿನಗಳಲ್ಲಿ ಸವಾರಿ ಹೊರಡುವ ಯೋಜನೆ ಇದೆ ಎನ್ನುತ್ತಾರೆ ಜುಬಿನ್.

ಸೈಕಲ್ಬಳಸುವುದರಿಂದ ಇಂಧನಕ್ಕೆ ಖರ್ಚುಮಾಡುವ ಹಣವನ್ನು ಉಳಿಸಬಹುದು ಹಾಗೆಯೇ ಪರಿಸರವೂ ಕಲುಷಿತವಾಗುವುದಿಲ್ಲ. ಇದರಿಂದ ಮನಸ್ಸು ಉಲ್ಲಾಸಗೊಂಡು ಅರಳುತ್ತದೆ ಎನ್ನುತ್ತಾರೆ ಜುಬಿನ್. www.redspokescycling.org

ಐವರು ಗೆಳೆಯರು

ಅವರು ಐವರು ಗೆಳೆಯರು. ಒಬೊಬ್ಬರೂ ಒಂದೊಂದು ವ್ಯವಹಾರದಲ್ಲಿ ತೊಡಗಿದ್ದರು. ಅದ್ಯಾಕೋ ಅವರ ವ್ಯಾಪಾರೋದ್ಯಮ ಸರಿಯಾಗಿ ಕೈಹತ್ತುತ್ತಿರಲಿಲ್ಲ. ಎಷ್ಟೇ ವಹಿವಾಟು ನಡೆಸಿದರೂ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಮಾತ್ರ ಅದು ಸಾಲುತ್ತಿತ್ತು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಗೆಳೆಯರು ಒಂದೆಡೆ ಸೇರಿ ಪಾಲುದಾರಿಕೆಯಲ್ಲಿ ‘ಇ–ಕಾಮರ್ಸ್ ಲಾಜಿಸ್ಟಿಕ್’ಸೇವೆ ಆರಂಭಿಸುವ ಬಗ್ಗೆ ಯೋಚಿಸಿದರು. ಕೂಡಲೇ ತಮ್ಮ ತಮ್ಮ ವ್ಯವಹಾರಗಳಿಗೆ ಗುಡ್ಬೈ ಹೇಳಿ ‘ಡೆಲ್ಲಿವರಿ’ ಸರಕು ಸಾಗಣೆ ಕಂಪೆನಿಯನ್ನು ಆರಂಭಿಸಿದರು.

ಇದು ದೆಹಲಿ ಮತ್ತು ಗುರಗಾಂವ್ಮೂಲದ ಐವರು ಗೆಳೆಯರಾದ ಶಾಹಿಲ್, ಮೋಹಿತ್, ಭವೇಶ್, ಸೂರಜ್ ಮತ್ತು ಕಪಿಲ್ಬಾರ್ತಿ ಅವರ ಕತೆ. ಡೆಲ್ಲಿವರಿ ಕಂಪೆನಿ ದೇಶದ 15 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಮಾರು 2500ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಇದು ಸಾಧ್ಯವಾಗಿದ್ದು ಕೇವಲ ಮೂರು ವರ್ಷಗಳ ಶ್ರಮದಲ್ಲಿ.

ಹೌದು, ಆ ಗೆಳೆಯರು ಕಂಪೆನಿ ವ್ಯವಹಾರ ದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು. ಕೆಲಸವನ್ನು ಸಮನಾಗಿ ಹಂಚಿಕೊಂಡು ಮಾಡುತ್ತಿದ್ದರು. ಯಾವುದೇ ಮನಸ್ತಾಪಗಳು ಬರದಂತೆ ಎಚ್ಚರಿಕೆಯಿಂದ ದುಡಿದುದ್ದರ ಫಲವೇ ಇಂದು ಕಂಪೆನಿ ದೊಡ್ಡಮಟ್ಟಕ್ಕೆ ಬೆಳೆಯಲು ಕಾರಣವಾಯಿತು ಎನ್ನುತ್ತಾರೆ ಸೂರಜ್.

ಇದೆಲ್ಲಾ ಸಾಧ್ಯವಾಗಿದ್ದು ಇ–ಕಾಮರ್ಸ್ ಮೂಲಕ ಎನ್ನುತ್ತಾರೆ ಡೆಲ್ಲಿವರಿಯ ಮತ್ತೊಬ್ಬ ಸಂಸ್ಥಾಪಕ ಮೋಹಿತ್. ಗ್ರಾಹಕರು ಆನ್ಲೈನ್ ಮೂಲಕ ಆರ್ಡರ್ ಬುಕ್ ಮಾಡುತ್ತಾರೆ. ನಮ್ಮ ಸಾಗಾಟದ ಹುಡುಗರು ಸರಕಗಳನ್ನು ಜೋಪಾನವಾಗಿ ಅವರು ಹೇಳಿದ ವಿಳಾಸಕ್ಕೆ ತಲುಪಿಸುತ್ತಾರೆ. ಒಂದೇ ವೇಳೆ ವಸ್ತುಗಳು ಹಾಳಾದಲ್ಲಿ ಅವರಿಗೆ ಅದರ ಬೆಲೆಯನ್ನು ನೀಡಲಾಗುತ್ತದೆ ಎನ್ನುತ್ತಾರೆ ಕಪಿಲ್.
ಸಮ ಮನಸ್ಥಿತಿ, ಕೆಲಸದ ಮೇಲಿನ ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮವೇ ಡೆಲ್ಲಿವರಿಯ ಹಿಂದಿರುವ ಯಶಸ್ಸಿನ ಗುಟ್ಟು. www.delhivery.org

ಶ್ರೀವಿದ್ಯಾ ಕುಮಾರ್

ಚೆನ್ನೈ ಮೂಲದ ಯುವತಿ ಶ್ರೀವಿದ್ಯಾ ಕುಮಾರ್ಅವರಿಗೆ ತಾಂತ್ರಿಕ ಶಿಕ್ಷಣದ ಹಿನ್ನೆಲೆ ಇದ್ದರೂ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಲಿಲ್ಲ. ಬದಲಾಗಿ ನೂರಾರು ಕಂಪೆನಿಗಳೇ ತಮ್ಮ ಬಳಿ ಬರುವಂಥ ಅವಕಾಶ ಸೃಷ್ಟಿಸಿಕೊಂಡರು.

ಇದೆಲ್ಲಾ ಸಾಧ್ಯವಾಗಿದ್ದು ಭಿನ್ನ ಆಲೋಚನೆ ಮೂಲಕ. ಅವಕಾಶಕ್ಕಾಗಿ ನಾವು ಕಾಯಬಾರದು, ಬದಲಿಗೆ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು. ಅವರೇ ನಿಜವಾದ ಜಾಣರು ಎನ್ನುತ್ತಾರೆ ಶ್ರೀವಿದ್ಯಾ. ಕಂಪೆನಿಗಳಲ್ಲಿ ಕೆಲಸ ಮಾಡುವ ಮಾನವ ಶಕ್ತಿಗೆ ತರಬೇತಿ ನೀಡುವ ಕಾಯಕದಲ್ಲಿ ಶ್ರೀವಿದ್ಯಾ ನಿರತರಾಗಿದ್ದಾರೆ. 2003ರಲ್ಲಿ ‘ಲರ್ನೊವೇಟರ್’ಎಂಬ ತರಬೇತಿ ಸಂಸ್ಥೆ ಸ್ಥಾಪಿಸಿದರು.

ಕಂಪೆನಿಗಳಲ್ಲಿ ದುಡಿಯುವ ನೌಕರರ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಲು ಲರ್ನೊವೇಟರ್ ತರಬೇತಿ ನೀಡುತ್ತಿದೆ. ಭಾರತ ಮಾತ್ರವಲ್ಲದೆ ಅಮೆರಿಕ, ಯೂರೋಪ್, ಜಪಾನ್, ಆಸ್ಟ್ರೇಲಿಯಾದ ನೂರಾರು ಕಂಪೆನಿಗಳಲ್ಲಿನ ಕೆಲಸಗಾರರಿಗೆ ತರಬೇತಿ ನೀಡುತ್ತಿರುವುದು ಇದರ ಹೆಗ್ಗಳಿಕೆ. ಕಳೆದ ಸಾಲಿನಲ್ಲಿ 60 ದಶಲಕ್ಷ ರೂಪಾಯಿ ವಹಿವಾಟು ನಡೆಸಿದೆ.

ವಿವಿಧ ಸಾಫ್ಟ್ವೇರ್ ಅಪ್ಲಿಕೇಶನ್ಗಳನ್ನು ರೂಪಿಸುತ್ತಿರುವ ಲರ್ನೊವೇಟರ್, ಕಂಪೆನಿಯಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಗೂ ಪರಿಹಾರ ಸೂಚಿಸುತ್ತದೆ. ‘ಸಮಯ ಪಾಲನೆ, ತಂತ್ರಜ್ಞಾನ ಬಳಸುವ ಕ್ರಮದ ಬಗ್ಗೆ ನಮ್ಮ ನೌಕರರಿಗೆ ತರಬೇತಿ ನೀಡಿ ಎಂದು ನೂರಾರು ಕಂಪೆನಿಗಳು ನಮ್ಮ ಬಳಿ ಬರುತ್ತವೆ. ತರಬೇತಿ ಬಳಿಕ ನೌಕರರ ಕಾರ್ಯಕ್ಷಮತೆ ಹೆಚ್ಚಿರುವ ಉದಾಹರಣೆಗಳು ಇವೆ’ ಎನ್ನುತ್ತಾರೆ ಶ್ರೀವಿದ್ಯಾ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಿನ್ನವಾಗಿ ಆಲೋಚಿಸಿದರೆ ಗಟ್ಟಿಯಾಗಿ ನೆಲೆ ನಿಲ್ಲುವುದರ ಜೊತೆಗೆ ಬೇಡಿಕೆಯ ಸೆಲೆಬ್ರಿಟಿಗಳಾಗಬಹುದು ಎಂದು ಶ್ರೀವಿದ್ಯಾ ಸಲಹೆ ನೀಡುತ್ತಾರೆ. www.learnnovators.org

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.