ಶನಿವಾರ, ಮೇ 21, 2022
26 °C

ಸಹಜ ಸ್ಥಿತಿಗೆ ಕಾಸರಗೋಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಭಾನುವಾರ ಕಾಸರಗೋಡಿನ ಮೀಪುಗುರಿಯಲ್ಲಿ ಯುವಕ ಸಾಬಿದ್ ಕೊಲೆ ಪ್ರಕರಣದಿಂದ ಹಿಂಸಾಚಾರಕ್ಕೆ ತಿರುಗಿದ ನಗರ ಸೋಮವಾರ ಸಹಜಸ್ಥಿತಿಗೆ ಮರಳಿದೆ.ಭಾನುವಾರ ಮಧ್ಯಾಹ್ನದ ಬಳಿಕ ಅಂಗಡಿ ಮುಂಗಟ್ಟುಗಳು ಮತ್ತು ವಾಹನ ಸಂಚಾರ ಸ್ಥಗಿತಗೊಂಡು ನಗರದಲ್ಲಿ ಹರತಾಳ ಆಚರಿಸಲಾಗಿತ್ತು. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜು.13ರ ವರೆಗೆ ಕಾಸರಗೋಡು ಮತ್ತು ವಿದ್ಯಾನಗರ ಠಾಣೆಯ  ವ್ಯಾಪ್ತಿಯಲ್ಲಿ  ನಿಷೇಧಾಜ್ಞೆ ವಿಧಿಸಲಾಗಿದೆ. ಸಂಜೆ 6ರಿಂದ ಬೆಳಿಗ್ಗೆ 6ರ ವರೆಗೆ ಬೈಕ್ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ.ಎಡಿಜಿಪಿ ನಗರದಲ್ಲಿ:  ಕೊಲೆ ಪ್ರಕರಣ ಮತ್ತು ನಂತರ ಸಂಭವಿಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ಉತ್ತರ ವಲಯ ಎಡಿಜಿಪಿ ಎನ್.ಶಂಕರ್ ರೆಡ್ಡಿ ಸೋಮವಾರ ಬೆಳಿಗ್ಗೆ ಕಾಸರಗೋಡಿಗೆ ಆಗಮಿಸಿದ್ದಾರೆ.ಜಿಲ್ಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಜತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಚರ್ಚಿಸಿದರು. ಯುವಕ ಇರಿತಕ್ಕೊಳಗಾದ ಸ್ಥಳ ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದರು. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಾರ್ಯಭಾರ ಇರುವ ಕಣ್ಣೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಆರ್.ನಾಯರ್, ಕಾಸರಗೋಡು ಡಿವೈಎಸ್ಪಿ ಮೋಹನಚಂದ್ರನ್ ನೇತೃತ್ವದ ಪೊಲೀಸರು ನಗರದಲ್ಲಿ ಸಕ್ರಿಯರಾಗಿದ್ದಾರೆ. 26 ಕೇಂದ್ರಗಳಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. 10 ಮೊಬೈಲ್ ಪೆಟ್ರೋಲಿಂಗ್ ಯೂನಿಟ್ ಮತ್ತು 12 ಬೈಕ್ ಪೆಟ್ರೋಲಿಂಗ್ ಯೂನಿಟ್‌ಗಳು ಹಾಗೂ 24 ತಾಸುಗಳ ಕಾಲ ನಗರದ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.