ಚಿಕ್ಕಮಗಳೂರು: ಶುಶ್ರೂಷಕಿಯರು ಸೇವೆಯಲ್ಲಿ ಸಹನೆ, ಪ್ರೀತಿ ಮೈಗೂಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ರಾಜಪ್ಪ ಸಲಹೆ ನೀಡಿದರು.

ನಗರದ ಆಶ್ರಯ ನರ್ಸಿಂಗ್ ಕಾಲೇಜಿನ ನೂತನ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೇವಾ ಮನೋಭಾವ ಇರುವವರು ಮಾತ್ರ ಈ ವೃತ್ತಿ ನಿರ್ವಹಿಸಲು ಸಾಧ್ಯ ಎಂದು ಹೇಳಿದರು. ರಕ್ತನಿಧಿ ಕೇಂದ್ರದ ವೈದ್ಯ ಶಿವದತ್ ಮಾತನಾಡಿ, ವೈದ್ಯರ ಸೇವೆ ಯಶಸ್ವಿಯಾಗ ಬೇಕಾದರೆ ಶುಶ್ರೂಷಕಿಯರ ಪಾತ್ರ ಮುಖ್ಯವಾಗಿದೆ ಎಂದರು.

ಪ್ರಮಾಣ ಪತ್ರಕ್ಕಾಗಿ ತರಬೇತಿ ಮಾಡದೆ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ನೋವಿನಿಂದ ಬರುವ ರೋಗಿಗಳಿಗೆ ಪ್ರೀತಿಯಿಂದ ಸೇವೆ ಮಾಡಲು ವೈದ್ಯರಿಗಿಂತ ಶುಶ್ರೂಷಕಿಯರ ಪಾತ್ರ ಬಹಳವಾಗಿರುತ್ತದೆ ಎಂದು ವೈದ್ಯ ಸಂತೋಷ್ ತಿಳಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರಿಗೆ ಮಾನಸಿಕ ಸ್ಥೈರ್ಯ ನೀಡಬೇಕಾಗುತ್ತದೆ ಎಂದು ಹೇಳಿದರು.

ಆಶ್ರಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್, ಪ್ರಾಂಶುಪಾಲರಾದ ಫಿಲೋಮಿನಾ ಪಿರೇರಾ, ಆಶ್ರಯ ಎಜುಕೇಶನ್ ಟ್ರಸ್ಟ್ ನಿರ್ದೇಶಕಿ ಶುಭಾ ವಿಜಯ, ರಂಜಿತಾ, ವಿಜಯಕುಮಾರ್, ರಜನಿ, ಟ್ಯೂಟರ್ ಅಶ್ವಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.