ಮಂಗಳವಾರ, ಮೇ 18, 2021
22 °C

ಸಹಾಯಧನಕ್ಕೆ ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜೇಷ್ಠತೆ ಆಧಾರದ ಮೇಲೆ ಸಹಾಯ ಧನ ಮತ್ತು ಸೂಕ್ತ ಸಾಲ ಸೌಲಭ್ಯ ನೀಡುವಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಇಲಾಖೆಗಳು ವಿಫಲವಾಗಿವೆ ಎಂದು ಆರೋಪಿಸಿ ಜಿಲ್ಲಾ ಪಂಚಾಯ್ತಿ ಸಭಾಂಗಣದ ಎಂದರು ಮಹಿಳಾ ಸ್ವಸಹಾಯ ಸಂಘಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.ಕೇಂದ್ರ ಪುರಸ್ಕೃತ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯುವಾಗಲೇ ಸಭಾಂಗಣದ ಎದುರು ಜಮಾಯಿಸಿದ ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿಂಗಾಪುರ, ಹುಲ್ಲೂರು, ಹುಲ್ಲೂರು ನಾಯಕರಹಟ್ಟಿ ಗ್ರಾಮಗಳ ವಿವಿಧ ನಾಲ್ಕು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಜೇಷ್ಠತೆ ಆಧಾರದಲ್ಲೇ ಸಾಲ ಸೌಲಭ್ಯ ಮತ್ತು ಧನಸಹಾಯಕ್ಕಾಗಿ ಒತ್ತಾಯಿಸಿದರು.ರುಡ್‌ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ಕುರಿತ ತರಬೇತಿ ಪಡೆದಿದ್ದೇವೆ. ತರಬೇತಿ ನಂತರ ಹಸುಗಳನ್ನು ಖರೀದಿಸಿ ಹೈನುಗಾರಿಕೆ ಆರಂಭಿಸಿದ್ದೇವೆ. ತರಬೇತಿ ಅವಧಿಯಲ್ಲಿ ಒಂದು ತಿಂಗಳೊಳಗೆ ಬ್ಯಾಂಕಿನಿಂದ ಪ್ರತಿಯೊಬ್ಬರಿಗೆ ್ಙ 1.25 ಲಕ್ಷ ಸಾಲ, ಸರ್ಕಾರದ ವತಿಯಿಂದ  ್ಙ 1.25 ಲಕ್ಷ ಸಹಾಯಧನ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಸಹಾಯಧನ ನೀಡಿಲ್ಲ ಎಂದು ಮಹಿಳಾ ಸಂಘದವರು ಆರೋಪಿಸಿದರು.`ತಾಲೂಕು ಪಂಚಾಯ್ತಿ ವತಿಯಿಂದ ಈಗಾಗಲೇ ನಮಗೆ ಸಹಾಯಧನದ ಮಂಜೂರಾತಿ ಪತ್ರ ದೊರೆತಿದೆ. ಬ್ಯಾಂಕ್‌ನವರು ಸಾಲ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಸಹಾಯಧನವನ್ನು ಬ್ಯಾಂಕಿಗೆ ನೀಡಿದರೆ ಬ್ಯಾಂಕ್‌ನವರು ಹೈನುಗಾರಿಕೆಗಾಗಿ ಸಾಲವಾಗಿ ್ಙ 1.25 ಲಕ್ಷ  ನೀಡುತ್ತಾರೆ' ಎಂದು ಅವರು ವಿವರಿಸಿದರು.ಧರಣಿ ಸ್ಥಳಕ್ಕೆ ಆಗಮಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮಹಿಳಾ ಸದಸ್ಯರ ಸಮಸ್ಯೆಗಳನ್ನು ಆಲಿಸಿದರು. ನಂತರ ಅವರಿಗೆ ಸಹಾಯಧನ ಕೊಡಿಸುವ ಭರವಸೆ ನೀಡಿದರು.ಸ್ಥಳಕ್ಕೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ, ಜಿ.ಪಂ ಸಿಇಒ ಮತ್ತು ಜಿ.ಪಂ ಮುಖ್ಯ ಯೋಜನಾಧಿಕಾರಿಯನ್ನು ಕರೆಸಿದ ಶಾಸಕರು ಮಹಿಳೆಯರನ್ನು ವಿನಾಕಾರಣ ಕಚೇರಿಗೆ ಅಲೆಸಬೇಡಿ ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಂದು  ಎಚ್ಚರಿಕೆ ನೀಡಿದರು.ಸಿಇಒ ನಾರಾಯಣಸ್ವಾಮಿ ಮಾತನಾಡಿ, ಸ್ವರ್ಣಜಯಂತಿ ರೋಜ್‌ಗಾರ್ ಯೋಜನೆಯನ್ನು ಸರ್ಕಾರ ಹಿಂಪಡೆದಿದೆ. ಅದರ ಬದಲು ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಅಭಿಯಾನ (ಎನ್‌ಆರ್‌ಎಲ್‌ಎಂ) ಎಂಬ ನೂತನ ಯೋಜನೆ ಜಾರಿಗೆ ತಂದಿದ್ದು ಎರಡು ತಿಂಗಳಲ್ಲಿ ಇವರಿಗೆ ಸಹಾಯಧನದ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.ಜಿಪಂ ಮುಖ್ಯ ಯೋಜನಾಧಿಕಾರಿ ಲಕ್ಷ್ಮಿನಾರಾಯಣ ಮಾತನಾಡಿ, ಕೇಂದ್ರ ಸರ್ಕಾರದಿಂದ ಒಟ್ಟು ್ಙ 164 ಲಕ್ಷ ಅನುದಾನ ಬರಬೇಕಿದೆ. ಸ್ವಸಹಾಯ ಮಹಿಳಾ ಸಂಘಗಳ ಬ್ಯಾಂಕ್ ಖಾತೆ ಸರಿಯಿಲ್ಲದ ಕಾರಣ ಕೇಂದ್ರ ಸರ್ಕಾರ ಇವರ ಮನವಿಯನ್ನು ತಿರಸ್ಕರಿಸಿತ್ತು. ಮತ್ತೊಮ್ಮೆ ಸರಿ ಮಾಡಿ ಕಳುಹಿಸಿಕೊಡಲಾಗಿದೆ. ಶೀಘ್ರವೇ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.ಶಾರದಾ ಮಹಿಳಾ ಸ್ವಸಹಾಯ ಸಂಘ, ಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವಸಹಾಯ ಸಂಘ ಮತ್ತು  ಚಾಮುಂಡೇಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾದ ಸಾವಿತ್ರಮ್ಮ, ಮೀನಾಕ್ಷಿ, ಇಂದಿರಾ. ಶಾಂತಮ್ಮ, ಶಕುಂತಲಾ, ರತ್ನಮ್ಮ, ಗುರುಶಾಂತಮ್ಮ, ಪ್ರೇಮಕ್ಕ, ಮಂಜುಳಾ, ಪಾರ್ವತಮ್ಮ ಮತ್ತಿತರ ಮಹಿಳಾ ಸದಸ್ಯರು ಧರಣಿ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.