ಬುಧವಾರ, ಮೇ 12, 2021
19 °C

ಸಾಂಸ್ಕೃತಿಕ ಮುನ್ನೋಟ ಸೆಪ್ಟೆಂಬರ್ 17, ಶನಿವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಗಮ ಸುದಿನ

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ: ಸುಗಮ ಸಂಗೀತ ಸುದಿನ. ಕಿಕ್ಕೇರಿ ಕೃಷ್ಣಮೂರ್ತಿ, ಜೋಸೆಫ್ ಹೆರಾನಿಮಸ್, ಆನಂದ ಮಾದಲಗೆರೆ, ಸುನೀತಾ.ಎಸ್, ಡಾ.ಶಮಿತಾ ಮಲ್ನಾಡ್, ಗೀತಾ ಸತ್ಯಮೂರ್ತಿ, ವಿಜಯ ಹಾವನೂರು ಅವರಿಂದ ಬಿ.ಆರ್.ಲಕ್ಷ್ಮಣರಾವ್ ರಚನೆಯ ಗೀತೆಗಳ ಗಾಯನ. ನವನೀತ ಕೃಷ್ಣ (ಕೀಬೋರ್ಡ್), ಪ್ರಕಾಶ್ ಹೆಗಡೆ (ಕೊಳಲು), ಪ್ರೀತಂ ಹಳಿಬಂಡಿ (ತಬಲಾ), ಕೃಷ್ಣ (ರಿದಂಪ್ಯಾಡ್).

ಅತಿಥಿಗಳು: ಬಿ.ಆರ್. ಲಕ್ಷ್ಮಣರಾವ್, ವೈ.ಕೆ.ಮುದ್ದುಕೃಷ್ಣ. 

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ಸಂಜೆ 5.30.ಖರೋಖರ

ಅಭಿನಯ ತರಂಗ: ಹಳೆ ವಿದ್ಯಾರ್ಥಿಗಳಿಂದ ಚಂದ್ರಶೇಖರ ಕಂಬಾರರ `ಖರೋಖರ~ ನಾಟಕ ಪ್ರದರ್ಶನ (ನಿರ್ದೇಶನ: ಎಚ್.ಕೆ. ಮನು. ರಂಗ ಸಜ್ಜಿಕೆ: ಅಶೋಕ್. ಕಲಾವಿದರು: ಕೃಷ್ಣ, ಮನು, ದರ್ಶನ್, ಅಪೂರ್ವ, ಸುಮನ್ ಕುಮಾರ್, ಸಾಗರ್ ಶಾನಭಾಗ್, ಮೀನಾಕ್ಷಿ, ನಾಗಲಕ್ಷ್ಮಿ .

ಸ್ಥಳ: 5ನೇ ಕ್ರಾಸ್, ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ. ಸಂಜೆ 7.30. ಮಾಹಿತಿಗೆ: 98458 25217.ಮಾಯಾಬಜಾರ್

ಮ್ಯಾಜಿಕ್ರಾಫ್ಟ್:  ಜಾದೂಗಾರ್ ಕೆ.ಎಸ್. ರಮೇಶ್ ಅವರಿಂದ `ಮಾಯಾಬಜಾರ್~ ಜಾದೂ ಪ್ರದರ್ಶನ.

ಸ್ಥಳ: ಸೆಂಟ್ ಜಾನ್ಸ್ ಸಭಾಂಗಣ, ಕೋರಮಂಗಲ. ಸಂಜೆ 4 ಮತ್ತು 7ಕ್ಕೆ. ಮಾಹಿತಿಗೆ 98450 42544ಮನೆಯಂಗಳದಲ್ಲಿ ಕವಿತಾ ಗಾಯನ

ಉಪಾಸನಾ:  98ನೇ ಮನೆಯಂಗಳದಲ್ಲಿ ಕವಿತಾ ಗಾಯನ. ಅರ್ಚನಾ ಉಡುಪ, ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ ಮತ್ತು ವಿದ್ಯಾ ಅಟ್ಟಾವರ್ ಅವರಿಂದ ಗಾಯನ. ರಾಜೀವ್ ಜೋಯಿಸ್, ಎಲ್.ಎನ್. ವಸಂತ ಕುಮಾರ್, ಹನುಮಂತ ಕಾರಟಗಿ, ವಿ.ವಾದಿ (ವಾದ್ಯ ಸಹಕಾರ).

ಸ್ಥಳ: ನಂ 1010, `ಕೃಶಲ್~, 24ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್ ಸಮೀಪ, ಬನಶಂಕರಿ 2ನೇ ಹಂತ, ರಾಯರ ಮಠದ ರಸ್ತೆ. ಸಂಜೆ 6.ಆರೋಗ್ಯ ಅರಿವು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಕ್ರಿಯಾ ಸಮಿತಿ: ಡಾ.ಶಾಂತಕುಮಾರ್ ಅವರಿಂದ ಹಲ್ಲಿನ ಸುರಕ್ಷತೆ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಉಪನ್ಯಾಸ. ಅತಿಥಿಗಳು: ಎನ್. ರಮೇಶ್, ಕೆ.ಜಿ. ಕುಮಾರ್. ಅಧ್ಯಕ್ಷತೆ: ಕೆ.ಎಂ. ಬರಗೂರಯ್ಯ.

ಸ್ಥಳ: ಶಾರದಾ ಮಂದಿರ, ತೆಂಗಿನ ತೋಟದ ರಸ್ತೆ, ಟಿ. ದಾಸರಹಳ್ಳಿ. ಬೆಳಿಗ್ಗೆ 10.30.ಉದ್ಘಾಟನೆ

ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್: ಶೇಷಾದ್ರಿಪುರಂ ರಿಸರ್ಚ್ ಫೌಂಡೇಷನ್. ಉದ್ಘಾಟನೆ: ಡಾ.ಎಸ್.ಸಿ ಶರ್ಮಾ. ಅತಿಥಿ: ಪ್ರೊ.ಕೆ.ನರಹರಿ. ಅಧ್ಯಕ್ಷತೆ: ಎನ್.ಆರ್. ಪಂಡಿತಾರಾಧ್ಯ.

ಸ್ಥಳ: ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಕ್ಯಾಂಪಸ್, ಯಲಹಂಕ ನ್ಯೂಟೌನ್. ಬೆಳಿಗ್ಗೆ 9.30.ವಿಜ್ಞಾನ ನಾಟಕೋತ್ಸವ

ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು: ಬೆಳಿಗ್ಗೆ 9.30ರಿಂದ ಸಂಜೆ 5ರ ವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ 8 ವೈಜ್ಞಾನಿಕ ನಾಟಕಗಳ ಪ್ರದರ್ಶನ. ಸಂಜೆ 6ಕ್ಕೆ ಸಮಾರೋಪದ ಅತಿಥಿ: ಪ್ರೊ. ಯು.ಆರ್. ರಾವ್.

ಸ್ಥಳ: ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಕಸ್ತೂರ ಬಾ ರಸ್ತೆ.ಅರಿಶಿನ ಅಲಂಕಾರ

ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ: ಅರಿಶಿನ ಅಲಂಕಾರ. ಸ್ಥಳ: ನಂ 45, 2ನೇ ಮುಖ್ಯರಸ್ತೆ, ಅರಮನೆನಗರ. ಸಂಜೆ 6.30.`ಕೈವಲ್ಯ~ ಸಂಗೀತ

ಬಿಟಿಎಂ ಕಲ್ಚರಲ್ ಅಕಾಡೆಮಿ: ಶನಿವಾರ ರತ್ನಾ ಮೂರ್ತಿ ಸ್ಮರಣಾರ್ಥ 338ನೇ ಸಂಗೀತ ಕಛೇರಿ. ಕೈವಲ್ಯ ಕುಮಾರ್ ಗುರವ್ ಅವರಿಂದ ಹಿಂದುಸ್ತಾನಿ ಸಂಗೀತ. ವಿಶ್ವನಾಥ ನಾಕೋಡ (ತಬಲಾ), ರವೀಂದ್ರ ಕಾಟೋಟಿ (ಹಾರ್ಮೋನಿಯಂ).

ಸ್ಥಳ: ರಮಣ ಮಹರ್ಷಿ ಅಂಧರ ಅಕಾಡೆಮಿ, 3ನೇ ಕ್ರಾಸ್, ಜೆ.ಪಿ.ನಗರ 3ನೇ ಹಂತ (ರಾಗಿಗುಡ್ಡ ಸಮೀಪ). ಸಂಜೆ 5.30.ಹಾಸ್ಯದ ಹೊನಲು

ಓಂ ಚಾರಿಟಬಲ್ ಟ್ರಸ್ಟ್: ರಾಮನಾಥನ್ ಅವರಿಂದ `ಹಾಸ್ಯದ ಹೊನಲು~.

ಸ್ಥಳ: ನಂ 49/1, ಶ್ರೀರಾಜರಾಜೇಶ್ವರಿ ನಿಲಯ, ಈಸ್ಟ್ ಆಂಜನೇಯ ಬೀದಿ, ಬಸವನಗುಡಿ. ಬೆಳಿಗ್ಗೆ 11.ವಿಶ್ವಕರ್ಮ ದಿನಾಚರಣೆ

ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲ:  ವಿಶ್ವಕರ್ಮ ದಿನಾಚರಣೆ ಹಾಗೂ ಜನಜಾಗೃತಿ ಸಮಾವೇಶ. ಬೆಳಿಗ್ಗೆ 10ಕ್ಕೆ ಮೆರವಣಿಗೆ. ಸಾನ್ನಿಧ್ಯ: ಶ್ರೀ ಗುರುಶಿವಸುಜ್ಞಾನಮೂರ್ತಿ ಸ್ವಾಮೀಜಿ. ಶ್ರೀ ಸಿದ್ಧನಾಗಲಿಂಗ ಸ್ವಾಮೀಜಿ, ಶ್ರೀಕರುಣಾಕರ ಸ್ವಾಮೀಜಿ. ಉದ್ಘಾಟನೆ: ವೀರಭದ್ರಾಚಾರ್.ಮಧ್ಯಾಹ್ನ 12ಕ್ಕೆ ವಿಶ್ವಕರ್ಮ ಪ್ರಭುವಿನ ಪೂಜಾ ಕಾರ್ಯಕ್ರಮ. ಉದ್ಘಾಟನೆ: ಸಿದ್ದರಾಮಯ್ಯ. ಅಧ್ಯಕ್ಷತೆ: ಎಚ್.ಡಿ. ರೇವಣ್ಣ. ನಂತರ ಧಾರ್ಮಿಕ ಸಭೆ.  ಸಾಧಕರಿಗೆ ವಿಶ್ವಕರ್ಮ ರತ್ನ ಪ್ರಶಸ್ತಿ ಪ್ರದಾನ. ಉದ್ಘಾಟನೆ: ಡಿ.ವಿ. ಸದಾನಂದ ಗೌಡ, ಶಾರದಮ್ಮ. ಅಧ್ಯಕ್ಷತೆ: ಆರ್.ಅಶೋಕ್.

ಸ್ಥಳ: ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ, ಪದ್ಮನಾಭನಗರ.ಸಂಗೀತ `ರಂಜನಿ~

ಕೇಶವ ಸಂಸ್ಕೃತ ಸಭಾ:  ವಿದುಷಿ ರಂಜನಿ ನಾಗರಾಜ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ವಾಸುಕಿ (ಪಿಟೀಲು), ಬಿ.ಎಸ್. ಆನಂದ್ (ಮೃದಂಗ).

ಸ್ಥಳ: ಸಂಸ್ಕೃತಿ ಭವನ, ನಂ556, 11ನೇ ಮುಖ್ಯರಸ್ತೆ, ಇಸ್ರೊ ಲೇಔಟ್. ಸಂಜೆ 6.15.ಗಮಕ, ವ್ಯಾಖ್ಯಾನ

ಬಸವೇಶ್ವರನಗರ ಬ್ರಾಹ್ಮಣ ಸಭಾ: ಡಾ.ಎ.ವಿ. ಪ್ರಸನ್ನ ಅವರಿಂದ ಕುಮಾರವ್ಯಾಸ ಭಾರತದ ಆಯ್ದ ಭಾಗಗಳ ಗಮಕ. ನಿರ್ಮಲಾ ಪ್ರಸನ್ನ ಅವರಿಂದ ವ್ಯಾಖ್ಯಾನ. ಅಧ್ಯಕ್ಷತೆ: ಬಿ.ಎಸ್.ಐತಾಳ್.

ಸ್ಥಳ: ವಾಣಿ ವಿದ್ಯಾ ಕೇಂದ್ರ, 3ನೇ ಬ್ಲಾಕ್, 3ನೇ ಹಂತ, ಬಸವೇಶ್ವರನಗರ. ಸಂಜೆ 6.30.ಅಗ್ನಿಗೆ `ಪೆರಿಯಾರ್~

ವಿಚಾರವಾದಿಗಳ ವೇದಿಕೆ-ಕರ್ನಾಟಕ (ವಿವೇಕ): ವಿಚಾರವಾದಿ ದಿ. ಇ.ವಿ.ರಾಮಸ್ವಾಮಿ ನಾಯ್ಕರ್ (ಪೆರಿಯಾರ್) ಅವರ 132ನೇ ಜಯಂತಿ ಪ್ರಯುಕ್ತ ಪತ್ರಕರ್ತ ಅಗ್ನಿ ಶ್ರೀಧರ್ ಅವರಿಗೆ ಪೆರಿಯಾರ್ ಪ್ರಶಸ್ತಿ ಪ್ರದಾನ. ಉದ್ಘಾಟನೆ: ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಅಧ್ಯಕ್ಷತೆ: ಎ.ಕೆ.ಸುಬ್ಬಯ್ಯ.

ಸ್ಥಳ:ಯವನಿಕ, ನೃಪತುಂಗ ರಸ್ತೆ. ಬೆಳಿಗ್ಗೆ 11.30.ವಾರ್ಷಿಕೋತ್ಸವ

ಕನ್ನಡ ಸಹೃದಯರ ಪ್ರತಿಷ್ಠಾನ: ಪ್ರತಿಷ್ಠಾನದ 49ನೇ ವಾರ್ಷಿಕೋತ್ಸವ. ಉದ್ಘಾಟನೆ: ಪ್ರೊ.ಜಿ.ವೆಂಕಟಸುಬ್ಬಯ್ಯ. ಅತಿಥಿಗಳು: ರಾಮಚಂದ್ರ ಶರ್ಮಾ ತ್ಯಾಗಲಿ.

ಸ್ಥಳ: ಕುಮಾರವ್ಯಾಸ ಮಂಟಪ, 58ನೇ ಅಡ್ಡ ರಸ್ತೆ, 4ನೇ ಬಡಾವಣೆ, ರಾಜಾಜಿನಗರ (ಸ್ಪಂದನ ನರ್ಸಿಂಗ್ ಹೋಂ ಎದುರು). ಸಂಜೆ 6.45.ಜನಪದ ಮೇಳ

ನೆಹರು ಯುವ ಕೇಂದ್ರ: ಬೆಂಗಳೂರು ದಕ್ಷಿಣ ತಾಲ್ಲೂಕು ಜಾನಪದ ಸಾಂಸ್ಕೃತಿಕ ಮೇಳ. ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಎನ್.ಎಸ್. ರಾಮಸ್ವಾಮಿ.

ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ ಪೊಲೀಸ್ ಠಾಣೆ ಪಕ್ಕ. ಸಂಜೆ 4.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.