ಬುಧವಾರ, ಜೂನ್ 16, 2021
27 °C

ಸಾಗರೋತ್ತರ ಆಸ್ತಿ ಘೋಷಣೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ, (ಪಿಟಿಐ): ಕಪ್ಪು ಹಣ ವಹಿವಾಟು ನಿಗ್ರಹಿಸುವ ಕ್ರಮವಾಗಿ, ವ್ಯಕ್ತಿಗಳು ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳ ಘೋಷಣೆ ಕಡ್ಡಾಯಗೊಳಿಸಲು ಮತ್ತು 16 ವರ್ಷದವರೆಗಿನ ಆದಾಯ ತೆರಿಗೆ ರಿಟರ್ನ್ ಗಳನ್ನು ಪುನಃ ಪರಿಶೀಲಿನೆಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಶುಕ್ರವಾರ ಪ್ರಸಕ್ತ 2012-13 ಸಾಲಿನ ಬಜೆಟ್ ಮಂಡಿಸಿದ ಮುಖರ್ಜಿ ಅವರು, ಕಪ್ಪು ಹಣ ಸಂಗ್ರಹಕ್ಕೆ ಕಡಿವಾಣ ಹಾಕಲು ಹಾಗೂ ಅದರ ಬಳಕೆಯನ್ನು ನಿಗ್ರಹಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.

ಅಘೋಷಿತ ಸಾಲ ಹಾಗೂ ಹೂಡಿಕೆ ಹಣದ ಮೇಲೆ ಶೇ 30 ರಷ್ಟು ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ. ಇದಲ್ಲದೇ ತೆರಿಗೆ ತಪ್ಪಿಸುವ ಪರಿಪಾಠ ಇರುವರನ್ನು ಕಾನೂನಿನ ತೆಕ್ಕೆಗೆ ತರುವ ಉದ್ದೇಶದಿಂದ ಸಾಮನ್ಯ ತೆರಿಗೆ ತಪ್ಪಿಸುವ ಕಾನೂನನ್ನು ರಚಿಸ (ಜನರಲ್ ಆಂಟಿ ಅವೈಡನ್ಸ್ ರೂಲ್ )ಲಾಗುವುದೆಂದು ಅವರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.