ಬುಧವಾರ, ಜನವರಿ 29, 2020
30 °C

ಸಾತೊಡ್ಡಿ ಧಾರೆಯಲಿ ಸಂಕ್ರಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ತಾಲ್ಲೂಕಿನ ಸಾತೊಡ್ಡಿ  ಫಾಲ್ಸ್‌ನಲ್ಲಿ  ಮಕರ ಸಂಕ್ರಮಣದ ನಿಮಿತ್ತ ನದಿ ಸ್ನಾನ ಮಾಡಲು ವಿವಿದ ಜಿಲ್ಲೆಗಳ ಸಾವಿರಾರು ಜನರು ಭಾನುವಾರ ಆಗಮಿಸಿದ್ದರು.ಮಕರ ಸಂಕ್ರಮಣದದಂದು ನದಿ ಸ್ನಾನ ಮಾಡುವುದು  ಉತ್ತರ ಕರ್ನಾಟಕದ ಜನರ ಸಂಪ್ರದಾಯ. ನದಿಗೆ ಪೂಜೆ ಸಲ್ಲಿಸಿ, ಎಳ್ಳು ಮತ್ತು ಅರಿಷಿಣವನ್ನು ಮೈಗೆ ಹಚ್ಚಿಕೊಂಡು ಮಕರ ಸ್ನಾನ ಮಾಡುತ್ತಾರೆ. ಈ ಸಂಪ್ರದಾಯದ ಆಚರಣೆಗೆ ನೆರೆಯ ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ  ಜನರು ತಂಡೋಪ ತಂಡವಾಗಿ ಸಾತೊಡ್ಡಿ ಜಲಪಾತಕ್ಕೆ ಆಗಮಿಸಿ , ನದಿ ಸ್ನಾನ ಮಾಡಿ ಬುತ್ತಿ ಊಟ ಮಾಡಿ ತೆರಳಿದರು.ಪ್ರವಾಸಿಗರ ಅಸಮಾಧಾನ:  ನೂರಾರು ಕಿಲೋ ಮೀಟರ್ ದೂರ ದಿಂದ ಪ್ರವಾಸಕ್ಕಾಗಿ ನೂರಾರು ಜನರು ಆಗಮಿಸುತ್ತಾರೆ. ಅದರಲ್ಲೂ ಸಂಕ್ರಾಂತಿಯಂದು ಸಾವಿರಾರು ಜನರು ಆಗಮಿಸುತ್ತಾರೆ. ಆದರೆ  ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಾಮ ಅರಣ್ಯ ಸಮಿತಿ, ಮತ್ತು ಅರಣ್ಯ ಇಲಾಖೆ ಪ್ರತಿ ಪ್ರವಾಸಿಗನಿಂದ ಐದು ರೂಪಾಯಿ ಯಂತೆ ಸಂಗ್ರಹಿಸು ತ್ತಿದೆ. ಆದರೆ  ಪ್ರವಾಸಿಗರ ಸುರಕ್ಷತೆಗೆ  ಯಾವುದೇ ಗಮನ ನೀಡುತ್ತಿಲ್ಲ.  ಪ್ರವಾಸಿಗರಲ್ಲಿ ಅದರಲ್ಲೂ ಸಂಕ್ರಾಂತಿ ಯಂದು ಸಾವಿರಾರು ಜನರು ಆಗಮಿಸುತ್ತಿದ್ದು ಅವರಲ್ಲಿ ಮಕ್ಕಳು, ವೃದ್ಧರು ಸಾಕಷ್ಟು ಸಂಖ್ಯೆಯಲ್ಲಿ ಆಗ ಮಿಸುತ್ತಾರೆ. ಇಕ್ಕಟ್ಟಾದ ದಾರಿಯಲ್ಲಿ  ಸ್ವಲ್ಪ ಜಾಗ್ರತೆ ತಪ್ಪಿದರೂ ಕೆಳಕ್ಕೆ ಬಿದ್ದು ಅಪಾಯವಾಗುವ ಸಂಭವವಿದೆ. ಇಕ್ಕಟ್ಟಾದ ದಾರಿಯ ಎರಡೂ ಬದಿ ಗಳಲ್ಲಿ ಹಿಡಿದುಕೊಳ್ಳುವ ವ್ಯವಸ್ಥೆ ಮಾಡಿಲ್ಲವೆಂದು ಪ್ರವಾಸಿಗರಿಗೆ ಆರೋಪಿಸುತ್ತಾರೆ.ಎಂಟು ಹತ್ತು ಕಾರ್ಯಕರ್ತರನ್ನು ನೇಮಿಸಿಕೊಂಡು ಲಾಟಿ ಹಿಡಿದು ಗೇಟಿನಲ್ಲಿ ನಿಂತು, ಹಣ ಸಂಗ್ರಹಿಸುವಲ್ಲಿ ಆಸಕ್ತಿ ತೋರುವ ಗ್ರಾಮ ಅರಣ್ಯ ಸಮಿತಿ ಜಲಪಾತದ ಬಳಿ ಪ್ರವಾಸಿ ಗರಿಗೆ ಸಹಕರಿಸಲು, ಅಪಾಯವಾಗ ದಂತೆ ಸೂಚನೆ ನೀಡಲು ಒಬ್ಬನೇ ಒಬ್ಬ ಕಾರ್ಯಕರ್ತರನ್ನು   ನೇಮಿಸಿರು ವುದಿಲ್ಲ.ದೇಹಳ್ಳಿ ಬಳಿ ವಾಹನಕ್ಕೆ ಶುಲ್ಕ ಪಡೆಯುತ್ತಾರೆ. ಅದರಂತೆ ಜಲ ಪಾತದ ಬಳಿ ಒಬ್ಬರಿಗೆ 5 ರೂ.ನಂತೆ ಹಣ ಸಂಗ್ರಹಿಸುತ್ತಾರೆ. ಹಣ ಸಂಗ್ರಹಕ್ಕೆ ಆಕ್ಷೇಪವಿಲ್ಲ ಆದರೆ  ಪ್ರವಾಸಿಗರಿಂದ ಪಡೆದ ಹಣ ರಸ್ತೆ ಸುಧಾರಣೆ, ಪ್ರವಾಸಿಗರ ಅನುಕೂಲ ತೆಗಳನ್ನು ಕಲ್ಪಿಸಲು ಉಪಯೋಗಿಸು ವುದನ್ನು ಬಿಟ್ಟು ಪ್ರವಾಸಿಗರಿಂದ ಹಣ ಸುಲಿಗೆ ಮಾಡುತ್ತಾರೆ. ಆದರೆ ರಸ್ತೆಗೆ ಹಿಡಿ ಮಣ್ಣನ್ನೂ ಹಾಕುತ್ತಿಲ್ಲ ಎಂದು ಹುಬ್ಬಳ್ಳಿಯ ಚಂದ್ರಶೇಖರ ಪಾಟೀಲ, ಅರವಿಂದ ಮೊಕಾಶಿ, ಗದಗಿನ ಜಿ. ಎನ್. ದೇಶಪಾಂಡೆ,  ಹಾವೇರಿಯ ಪ್ರಕಾಶ ಹಾವನೂರ ಪತ್ರಿಕೆಯೊಂದಿಗೆ ತಮ್ಮ ಅಸಮಾಧಾನ ತೋಡಿ ಕೊಂಡರು.

ಪ್ರತಿಕ್ರಿಯಿಸಿ (+)