ಬನಹಟ್ಟಿ: ಪ್ರತಿಯೊಬ್ಬರ ಸಾಧನೆಗೆ ಪರಿಶ್ರಮ ಅಗತ್ಯ. ಸತತ ಪರಿಶ್ರಮದಿಂದ ವ್ಯಕ್ತಿ ಉತ್ತುಂಗ ಮಟ್ಟಕ್ಕೆ ಏರುತ್ತಾನೆ. ಪ್ರತಿಭಾವಂತರಿಗೆ ಪಾಲಕರು ಮತ್ತು ಸಮಾಜ ಪ್ರೋತ್ಸಾಹ ನೀಡಿದರೆ ವ್ಯಕ್ತಿಯ ಉನ್ನತಿ ಸಾಧ್ಯವಾಗುತ್ತದೆ ಅಲ್ಲದೆ ವ್ಯಕ್ತಿತ್ವಕ್ಕೆ ಮೆರುಗು ಬರುತ್ತದೆ.
ಸಹಕಾರದಿಂದ ವ್ಯಕ್ತಿ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದು ಅಥಣಿಯ ತಹಶೀಲ್ದಾರ್ ಅಪರ್ಣಾ ಪಾವಟೆ ಹೇಳಿದರು.

ಭಾನುವಾರ ಸ್ಥಳೀಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಡಾ. ಸಾಗರ ಭಟ್ಟಡ ಅವರ ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಭಾರತದಲ್ಲಿರುವ ಬಹಳಷ್ಟು ಪ್ರತಿಭಾವಂತರು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವರಾಗಿದ್ದಾರೆ ಎಂದು ಜ. ಶಿ. ಸಂಘದ ಚೇರಮನ್ ಎಂ.ಜಿ. ಕೆರೂರ ತಿಳಿಸಿದರು.

ಸಾಹಿತಿ ಜಯವಂತ ಕಾಡದೇವರ, ನಿಂಗಪ್ಪ ಯಾದವಾಡ, ಮುಖ್ಯ ಶಿಕ್ಷಕಿ ಬಿ.ಆರ್. ಬಾಗಲಕೋಟ ಮತ್ತು ಸನ್ಮಾನ ಸ್ವೀಕರಿಸಿದ ಡಾ. ಸಾಗರ ಸಮಾರಂಭದಲ್ಲಿ ಮಾತನಾಡಿದರು.

ಜಮಖಂಡಿ ಅರ್ಬನ್ ಬ್ಯಾಂಕಿನ ಚೇರಮನ್ ಸುರೇಶ ಚಿಂಡಕ ಅಧ್ಯಕ್ಷತೆ ವಹಿಸಿದ್ದರು. ಋತು ಕಾಡದೇವರ ಪ್ರಾರ್ಥನೆ ಮಾಡಿದರು. ಪ್ರೊ. ಕೆ.ಎಚ್. ಸಿನ್ನೂರ ಸ್ವಾಗತಿಸಿದರು. ಬಿ.ಆರ್. ಗೊಡ್ಡಾಳೆ ನಿರೂಪಿಸಿದರು. ಪೂನಂ ಭಟ್ಟಡ ವಂದಿಸಿದರು.

ಈ ಸನ್ಮಾನ ಸಮಾರಂಭದಲ್ಲಿ ಸಿದ್ಧರಾಜ ಪೂಜಾರಿ, ಮಲ್ಲಿಕಾರ್ಜುನ ಹುಲಗಬಾಳಿ, ಡಾ. ಕಾಡು ಭದ್ರನ್ನವರ, ಪ್ರಾ. ಬಸವರಾಜ ಕೊಣ್ಣೂರ, ಮಾಧ್ವಾನಂದ ಗುಟ್ಲಿ, ಸಂಗಣ್ಣ ಗಣೇಶನವರ, ಶಂಕರಯ್ಯ ಕಾಡದೇವರ, ಡಾ.ಪ್ರಭು ಪಾಟೀಲ, ಡಾ. ಮಹಾವೀರ ದಾನಿಗೊಂಡ, ಡಾ.ಯತೀಶ ಪೂಜಾರಿ, ಡಾ.ರಾಜೇಂದ್ರ ಬಾಗಲಕೋಟ, ಪ್ರಕಾಶ ಮಂಡಿ, ಪ್ರಕಾಶ ಹೊಳಗಿ, ಮೋಹನ ಪತ್ತಾರ, ಡಾ.ಎಸ್.ಜಿ. ಸಾಬೋಜಿ. ವಿಜಯ ಹೂಗಾರ, ಡಾ.ಅವಿನಾಶ ಬಡಚಿಕರ, ವೆಂಕಟೇಶ ನಿಂಗಸಾನಿ, ಸುರೇಶ ಅಬಕಾರ ಸೇರಿದಂತೆ ಗಣ್ಯರು, ನೂರಾರು ಜನರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.