ಮಂಗಳವಾರ, ಮೇ 11, 2021
21 °C

ಸಾಧನೆಯ ಶ್ರೇಯ ಕೋಚ್‌ಗೆ ಸಲ್ಲಬೇಕು: ಕೊಹ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ನನ್ನ ಕೋಚ್ ರಾಜ್‌ಕುಮಾರ್ ಶರ್ಮ ಹಾಗೂ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಅವರ ಮಾಗದರ್ಶನವೇ ಕಾರಣ. ಈ ಶ್ರೇಯ ಅವರಿಗೆ ಸಲ್ಲಬೇಕು~ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.15 ವರ್ಷದೊಳಗಿನವರ ವಿಭಾಗದ ತಂಡದಲ್ಲಿದ್ದಾಗ ಅಭ್ಯಾಸ ನಡೆಸುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಕೊಹ್ಲಿ, ಶರ್ಮ ಹಾಗೂ ಬೇಡಿ ಅವರು ಫಿಟ್‌ನೆಸ್ ಬಗ್ಗೆ ಸಾಕಷ್ಟು ಹೇಳಿ ಕೊಟ್ಟಿದ್ದಾರೆ. ನಿರಂತರವಾಗಿ ಫಿಟ್‌ನೆಸ್ ಕಾಪಾಡಿಕೊಳ್ಳುವ ಬಗ್ಗೆಯೂ ಬೇಡಿ ಸರ್ ತಿಳಿಸಿಕೊಟ್ಟರು. ಆಗಿನ್ನೂ ನಾನು ದೆಹಲಿ ತಂಡದ ಸದಸ್ಯನಾಗಿದ್ದೆ~ ಎಂದು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರೂ ಆಗಿರುವ ಅವರು ನುಡಿದರು.19 ವರ್ಷ ವಯಸ್ಸಿನೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡವನ್ನು ಕೊಹ್ಲಿ ಮುನ್ನಡೆಸಿದ್ದರು. ಈಗ ವರು ಭಾರತ ತಂಡದ ಉಪನಾಯಕ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.