`ಸಾಧಿಸುವ ಛಲ ಮೈಗೂಡಿಸಿಕೊಳ್ಳಿ'

ಬುಧವಾರ, ಜೂಲೈ 24, 2019
27 °C

`ಸಾಧಿಸುವ ಛಲ ಮೈಗೂಡಿಸಿಕೊಳ್ಳಿ'

Published:
Updated:

ಉಡುಪಿ: `ಸಾಧಕರ ಸಾಧನೆಯ ಹಿಂದೆ ಕಠಿಣ ಪರಿಶ್ರಮ ಅಡಗಿದೆ. ಬಾಲ್ಯದಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ಉನ್ನತ ಸ್ಥಾನವನ್ನು ಪಡೆಯುವ ಛಲವನ್ನು ವಿದ್ಯಾರ್ಥಿಗಳು ಮೈಗೂಡಿಸಬೇಕು ಎಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮ ದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್ ಹೇಳಿದರು.ಉಡುಪಿಯ ಯಕ್ಷಗಾನ ಕಲಾ ರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್‌ನ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡು ತ್ತಿರುವ ವಿದ್ಯಾರ್ಥಿಗಳಿಗೆ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಸಮಾರೋ ಪದಲ್ಲಿ ಅವರು ಮಾತನಾಡಿದರು. ಮಂಗಳೂರಿನ ಇನ್ಫೋಸಿಸ್ ಅಧಿಕಾರಿಗಳಾದ ರವಿರಾಜ ಬೆಳ್ಮಣ್, ನಿತಿನ್ ಕುಮಾರ್, ರಾಮ್ ಪ್ರಸಾದ್, ರೋಬೋಸಾಫ್ಟ್ ಅಧಿಕಾರಿಗಳಾದ ಕೆ. ಶ್ರೀನಿವಾಸ ರಾವ್ ಹಾಗೂ ಜ್ಯೋತಿ ಮಹಾದೇವ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.ಮಣಿಪಾಲ ಡಾಟ್‌ನೆಟ್‌ನ ಡಾ. ಯು.ಸಿ ನಿರಂಜನ್ ಮತ್ತು  ಮಹಾ ದೇವ್ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ  ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry