ಮಂಗಳವಾರ, ಜೂನ್ 22, 2021
23 °C

ಸಾಮಾಜಿಕ ತಾಣಗಳಲ್ಲಿ ಅವಹೇಳನ: ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ಅಭ್ಯರ್ಥಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ವಿವರ­ಗಳನ್ನು ಪ್ರಕಟಿಸುವವರು ಹಾಗೂ ಅದನ್ನು ಇತರರ ಜತೆ ಹಂಚಿಕೊಳ್ಳು­ವವರು ಇನ್ನು ಮುಂದೆ ಕಾನೂನು ಕ್ರಮಗಳನ್ನು ಎದುರಿಸ­ಬೇಕಾಗುತ್ತದೆ.ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಕೊಡಿಯ್‌ಕುಣ್ಣಿಲ್‌ ಸುರೇಶ್‌ ಅವರು ದಾಖಲಿಸಿದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಅಳಪ್ಪುರ ಜಿಲ್ಲಾಧಿಕಾರಿ ಎನ್‌.ಪದ್ಮಕುಮಾರ್‌ ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.ರಾಜಕೀಯ ದುರುದ್ದೇಶ­ದಿಂದ ತಮ್ಮ ವರ್ಚಸ್ಸಿಗೆ ಕಳಂಕ ತರುವಂತಹ ನಕಲಿ ಹಾಗೂ ವಿರೂಪಗೊಳಿಸಿದ ಛಾಯಾ­ಚಿತ್ರಗಳನ್ನು   ಸಾಮಾಜಿಕ ಜಾಲ­ತಾಣಗಳಲ್ಲಿ ಹರಿಯಬಿಡ­ಲಾಗಿದ್ದು, ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುರೇಶ್‌ ಅವರು ದೂರು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.