ಅರಸೀಕೆರೆ: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಿದ್ದಂತೆ. ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವವರು ಶಿಸ್ತು, ಸಂಯಮದಿಂದ ಜೀವನ ಸಾಗಿಸಿಕೊಂಡು ಹೋಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಲಹೆ ಮಾಡಿದರು.|

ಅರಸೀಕೆರೆಯಲ್ಲಿ ಇದೇ ಮೊದಲಬಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರನ್ನು ಆಶೀರ್ವದಿಸಿದ ಅವರು ‘ಜನರು ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಮೆರೆಸಲು ಆಡಂಬರ ಪ್ರದರ್ಶಿಸುತ್ತಾ ಅದ್ದೂರಿ ವಿವಾಹ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿ ಪರಿತಪಿಸುತ್ತಿದ್ದಾರೆ. ಇದು ಕೊನೆಯಾಗಬೇಕು, ಸರಳ ಸಾಮೂಹಿಕ ಆದರ್ಶ ವಿವಾಹಗಳನ್ನು ಮಾಡಿಕೊಳ್ಳುವ ಮೂಲಕ ಬದುಕನ್ನು ಸುಂದರಗೊಳಿಸಬೇಕು ಎಂದರು.

‘73 ಜೋಡಿ ಸಾಮೂಹಿಕ ವಿವಾಹಗಳ ಮೂಲಕ ಹೆಣ್ಣು ಹೆತ್ತವರ ಹೊಟ್ಟೆಯನ್ನು ತಣ್ಣಗೆ ಮಾಡುವ ಕಾರ್ಯವನ್ನು ಶಿವಲಿಂಗೇಗೌಡ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮೂಹಿಕ ವಿವಾಹಗಳು ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾದ ಕಾರ್ಯಕ್ರಮ. ಹಳೇ ಮೈಸೂರು ಭಾಗದಲ್ಲಿ ಅಷ್ಟಾಗಿ ಜನರು ಇದನ್ನು ಸ್ವಾಗತಿಸಿಲ್ಲ. ಈ ವಿಚಾರವನ್ನು ಪ್ರಸ್ತಾಪಿಸಿದ ಚಿತ್ರನಟ ದೊಡ್ಡಣ್ಣ, ‘ನಮ್ಮೂರಲ್ಲಿ ಸರಳ ವಿವಾಹಗಳು ವಿರಳ. ನಮ್ಮಕಡೆ ಜ್ಞಾನಿಗಳು ಸ್ವಲ್ಪ ಕಮ್ಮಿ ಅದಕ್ಕೇ ಸಾಮೂಹಿಕ ವಿವಾಹಗಳೂ ಅಪರೂಪ’ ಎಂದು ಹಾಸ್ಯ ಮಾಡಿದರು.

ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ, ‘ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ತಾಳ್ಮೆ, ಹೊಂದಾಣಿಕೆ ಯಿಂದ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು. ವರದಕ್ಷಿಣೆಯಂತಹ ಸಮಸ್ಯೆ ಇನ್ನೂ ಜೀವಂತವಾಗಿದೆ. ಆದ್ದರಿಂದ ಸಾಮೂಹಿಕ ವಿವಾಹಗಳಿಂದ ಮಧ್ಯಮ ವರ್ಗದವರು ಸ್ವಲ್ಪ ಮಟ್ಟಿಗಾದರೂ ನೆಮ್ಮದಿ ಪಡೆಯುವಂತಾಗಿದೆ’ ಎಂದರು.

ಶಾಸಕರಾದ ಟಿ.ಬಿ ಜಯಚಂದ್ರ, ಬಾಲಕೃಷ್ಣ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಮಾತನಾಡಿದರು. ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಸಿ.ಎಸ್. ಪುಟ್ಟೇಗೌಡ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ. ಜವರೇಗೌಡ, ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್, ಎ.ಟಿ ರಾಮಸ್ವಾಮಿ, ಆದಿಚುಂಚನಗಿರಿ ಶಾಖಾಮಠ ಹಾಸನ ಶಂಭುನಾಥ ಸ್ವಾಮೀಜಿ, ಕೆರೆಗೋಡಿ ರಂಗಾಪುರ ಗುರು ಪರದೇಶೀಕೇಂದ್ರ ಸ್ವಾಮೀಜಿ, ಡಿ. ಎಂಕುರ್ಕೆ ಬೂದಿಹಾಲ್ ವಿರಕ್ತ ಮಠದ ರಾಜಶೇಖರ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ ಶಿವಾಚಾರ್ಯ ಸ್ವಾಮೀಜಿ, ಕನಕ ಗುರುಪೀಠ ಕಾಗಿನೆಲೆ ಶಾಖಾಮಠ ಕೆ.ಆರ್. ನಗರ ಶಿವಾನಂದಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೆಕಿ ಸಂಸ್ಥಾನ ಪ್ರಸನ್ನಂದಪುರಿ ಸ್ವಾಮೀಜಿ ಚಲನಚಿತ್ರ ನಟ ದೊಡ್ಡಣ್ಣ ಉಪಸ್ಥಿತರಿದ್ದರು.

ಜೇನುಕಲ್ ಕ್ರೀಡಾಂಗಣದಲ್ಲಿ ಹಾಕಿದ್ದ ಸುಮಾರು 200 ಮೀಟರ್ ಉದ್ದದ ವೇದಿಕೆಯಲ್ಲಿ ಏಕ ಕಾಲದಲ್ಲಿ 73 ಜೋಡಿಗಳ ವಿವಾಹ ನಡೆಯಿತು. ಇದರಲ್ಲಿ ಒಂದು ಜೋಡಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾಗಿತ್ತು. ಅವರ ಧರ್ಮಗುರುಗಳು ಪಾಲ್ಗೊಂಡು ವಿವಾಹ ನಡೆಸಿಕೊಟ್ಟರು. ಶಾಸಕರ ಪುತ್ರಿ ವಿವಾಹ ಕೂಡ ಈ ಸಂದರ್ಭದಲ್ಲಿ ನಡೆಯಿತು. ಇಡೀ ಕ್ರೀಡಾಂಗಣಕ್ಕಟ ಪೆಂಡಾಲ್ ಹಾಕಿದ್ದು ಸಾವಿರಾರು ಜನರು ಬಂದು ವಧು-ವರರಿಗೆ ಶುಭ ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.