ಸಾಲ ಬಾಧೆ: ರೈತ ಆತ್ಮಹತ್ಯೆ

7

ಸಾಲ ಬಾಧೆ: ರೈತ ಆತ್ಮಹತ್ಯೆ

Published:
Updated:

ಹೊಸದುರ್ಗ: ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ತಾಲ್ಲೂಕಿನ ಮತ್ತೋಡು ಹೋಬಳಿ ಸಿದ್ದಗೊಂಡನಹಳ್ಳಿಯ ರೈತನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಸಿದ್ದಗೊಂಡನಹಳ್ಳಿಯ ಎಸ್.ಟಿ. ತಿಪ್ಪಣ್ಣ (58) ಆತ್ಮಹತ್ಯೆಗೆ ಶರಣಾದ ರೈತ. ಸುಮಾರು ಏಳು ವರ್ಷಗಳಿಂದ ಮತ್ತೋಡು ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ವ್ಯವಹಾರ ಇಟ್ಟುಕೊಂಡಿದ್ದ ತಿಪ್ಪಣ್ಣ ಪ್ರಸಕ್ತ ಸಾಲಿನಲ್ಲಿ ಜಮೀನಿನಲ್ಲಿ ಬಾಳೆ ಬೆಳೆ ಹಾಕಿದ್ದರು. ಅತಿಯಾದ ಮಳೆಯಿಂದಾಗಿ ಬೆಳೆದು ನಿಂತಿದ್ದ ಬಾಳೆ ಹಾಗೂ ಇತರೆ ಬೆಳೆಗಳು ನಾಶವಾಗಿದ್ದನ್ನು ಕಂಡು ಬ್ಯಾಂಕ್ ಹಾಗೂ ಖಾಸಗಿಯವರಿಂದ ಮಾಡಿದ ಸಾಲ ತೀರಿಸಲು ದಾರಿಯಿಲ್ಲದೆ ಮನನೊಂದು ತಮ್ಮ ಜಮೀನಿನಲ್ಲಿಯೇ ಗುರುವಾರ ವಿಷ bಸೇವಿಸಿದ್ದರು ಎನ್ನಲಾಗಿದೆ.ಮೃತ ರೈತ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಸುಮಾರು 1.46 ಲಕ್ಷ ರೂ ಬಾಕಿ ಸಾಲ ಹಾಗೂ ಖಾಸಗಿಯವರಲ್ಲಿಯೂ ಸಾಲ ಮಾಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry