ಸಾಲ ಭಾದೆ: ರೈತ ಆತ್ಮಹತ್ಯೆ

7

ಸಾಲ ಭಾದೆ: ರೈತ ಆತ್ಮಹತ್ಯೆ

Published:
Updated:

ಪಾವಗಡ: ಸಾಲದ ಹೊರೆ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ನ್ಯಾಯಾಲಯದ ಮುಂದಿನ ರಸ್ತೆ ಬದಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ಬಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ವಡ್ರೇವು ಗೊಲ್ಲಜನಾಂಗದ ದೊಡ್ಡಅಂಜಿನಪ್ಪ (45) ಆತ್ಮಹತ್ಯೆಗೆ ಶರಣಾದವರು. ದೊಡ್ಡ ರೈತ ಕುಟುಂಬ ಇವರದಾಗಿದ್ದು ಕುರಿ ಸಾಕಾಣೆ ಮತ್ತು ವ್ಯವಸಾಯಕ್ಕಾಗಿ ಸಾಲ ಮಾಡಿದ್ದು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಟ್ಟಣಕ್ಕೆ ಬೆಳಿಗ್ಗೆಯೇ ಬಂದಿದ್ದ ಈತ ಸಾಯಂಕಾಲ ವಿಷ ಕುಡಿದು ರಸ್ತೆ ಬದಿಯಲ್ಲಿ ಹೊರಳಾಡುತ್ತಿದ್ದಾಗ ನೋಡಿದ ಕೆಲವರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry