ಮಡಿಕೇರಿ: ಕೊಡಗು ಜಿಲ್ಲೆಗೆ 2011-12ನೇ ಸಾಲಿನಲ್ಲಿ ಒಟ್ಟು 1527 ಕೋಟಿ ರೂಪಾಯಿಗಳ ವಾರ್ಷಿಕ ಸಾಲ ಯೋಜನೆಯನ್ನು ಲೀಡ್ ಬ್ಯಾಂಕ್ ರೂಪಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 16ರಷ್ಟು ಹೆಚ್ಚಳವಾಗಿದೆ.ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಅವರು ವಾರ್ಷಿಕ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಜಿಲ್ಲಾ ಲೀಡ್ ಬ್ಯಾಂಕ್ ಕೂಡ ಸಾಲ ಯೋಜನೆಯಡಿ ಈ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಡಿಮೆಯಿದ್ದು, ಕಾಫಿ ಆಧಾರಿತ ಸಣ್ಣ ಕೈಗಾರಿಕೆಗಳಿಗೆ ಮಾತ್ರ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ನಿಗದಿಪಡಿಸಿರುವ ಮೊತ್ತವನ್ನು ಈ ಉದ್ದೇಶಕ್ಕಾಗಿಯೇ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆದ್ಯತಾ ವಲಯಕ್ಕೆ 1372 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ 16ರಷ್ಟು ಹೆಚ್ಚಾಗಿದೆ. ಒಟ್ಟು ಸಾಲ ಯೋಜನೆಯಲ್ಲಿ ಶೇ 90ರಷ್ಟು ಆದ್ಯತಾ ವಲಯಕ್ಕೆ ಮೀಸಲಿಡಲಾಗಿದೆ. ಕೃಷಿಯಲ್ಲಿ ಬೆಳೆ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಉದ್ದೇಶಕ್ಕಾಗಿ 827 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

ಅಂತೆಯೇ, ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕಾಗಿ 114 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿದೆ. ನೀರಾವರಿ ಯೋಜನೆಗಳಿಗೆ 43 ಕೋಟಿ ರೂಪಾಯಿ ಸಾಲ ನಿಗದಿಪಡಿಸಲಾಗಿದ್ದು, ಭೂ ಅಭಿವೃದ್ಧಿ ಹಾಗೂ ಯಂತ್ರೋಕರಣಗಳ ಸಾಲ ಉದ್ದೇಶಕ್ಕಾಗಿ 74 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.

2011-12ನೇ ಸಾಲಿನಲ್ಲಿ ಕೃಷಿ ಸಾಲಕ್ಕೆ 1136 ಕೋಟಿ ರೂಪಾಯಿ, ಸಣ್ಣ ಕೈಗಾರಿಕಾ ವಲಯಕ್ಕೆ 21 ಕೋಟಿ ರೂಪಾಯಿ ಹಾಗೂ ಇತರೆ ಆದ್ಯತಾ ವಲಯಕ್ಕೆ 215 ಕೋಟಿ ರೂಪಾಯಿಗಳ ಗುರಿ ನಿಗದಿಪಡಿಸಲಾಗಿದೆ.

ತಾಲ್ಲೂಕುವಾರು ಸಾಲ ಯೋಜನೆ: ಈ ವರ್ಷದ ವಾರ್ಷಿಕ ಸಾಲ ಯೋಜನೆಯಡಿ ಮಡಿಕೇರಿ ತಾಲ್ಲೂಕಿಗೆ ರೂ. 533 ಕೋಟಿ, ವಿರಾಜಪೇಟೆ ತಾಲ್ಲೂಕಿಗೆ ರೂ. 596 ಕೋಟಿ ಹಾಗೂ ಸೋಮವಾರಪೇಟೆ ತಾಲ್ಲೂಕಿಗೆ 398 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.

ವಾರ್ಷಿಕ ಸಾಲ ಯೋಜನೆ ರೂಪಿಸುವಾಗ ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್ಗಳ ನೀತಿ, ಸ್ಥಳೀಯ ಅವಶ್ಯಕತೆ ಮತ್ತು ಹಿಂದಿನ ಪ್ರಗತಿಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. 2010-11ನೇ ಸಾಲಿನಲ್ಲಿ ವಾರ್ಷಿಕ ಸಾಲ ಯೋಜನೆಯಡಿ ಡಿಸೆಂಬರ್ ಅಂತ್ಯಕ್ಕೆ ಶೇ 54ರಷ್ಟು ಪ್ರಗತಿ ಸಾಧಿಸಲಾಗಿದೆ. ಕಳೆದ ಸಾಲಿನ ಆರ್ಥಿಕ ವರ್ಷ ಕೊನೆಗೊಂಡ 2011ರ ಮಾರ್ಚ್ ಅಂತ್ಯಕ್ಕೆ ಪ್ರತಿಶತ ಶೇ 90ರಷ್ಟು ಅನುಷ್ಠಾನ ಮಾಡಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ವಾಸುದೇವನ್ ಮಾಹಿತಿ ನೀಡಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಬಾರ್ಡ್ನ ಡಿಡಿಎಂ ಶಿವರಾಮಕೃಷ್ಣನ್, ಆರ್ಬಿಐನ ಅಧಿಕಾರಿ ಮುತ್ತುಸೆಲ್ವನ್ ಉಪಸ್ಥಿತರಿದ್ದರು. ಕಾರ್ಪೊರೇಷನ್ ಬ್ಯಾಂಕ್ನ ಹಾಸನ ವಲಯ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಲಕ್ಷ್ಮೀನಾಥರೆಡ್ಡಿ ಸ್ವಾಗತಿಸಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ವಾಸುದೇವನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.