ಗುರುವಾರ , ಫೆಬ್ರವರಿ 25, 2021
23 °C

ಸಾಹಸಕ್ಕೆ ಜೊತೆಯಾದ ಹಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಸಕ್ಕೆ ಜೊತೆಯಾದ ಹಲ್ಲು

ವಯಸ್ಸಾದಂತೆ ದೇಹದ ಶಕ್ತಿ ಕುಂದುವುದರ ಜೊತೆಗೆ ಹಲ್ಲಿನ ಸಮಸ್ಯೆಯೂ ಬಾಧಿಸಲು ಆರಂಭವಾಗುತ್ತದೆ. ಸ್ವಲ್ಪ ಗಟ್ಟಿ ಆಹಾರ ಸೇವನೆಯೂ ಅಸಾಧ್ಯ ಎನಿಸುತ್ತದೆ. 

ಆದರೆ ಈ ವ್ಯಕ್ತಿಯನ್ನು ಕಂಡಾಗ ಛಲ ಮತ್ತು ದೃಢ ಸಂಕಲ್ಪವಿದ್ದಾಗ ಎಂತಹ ಕಠಿಣ ಕೆಲಸವನ್ನು ಸುಲಭವಾಗಿ ಮಾಡಬಹುದು ಎಂಬ ಮಾತು ನಿಜವೆನಿಸುತ್ತದೆ.

ತಮ್ಮ 51ನೇ ವಯಸ್ಸಿನಲ್ಲಿಯೂ ಇವರು ಮಾಡುವ ಸಾಹಸವನ್ನು ಕಂಡರೆ ನೀವು ಬೆರಗಾಗುವುದು ಖಂಡಿತ.ವಿಮಾ ಸಂಸ್ಥೆಯೊಂದರಲ್ಲಿ ಸೆಲ್ಸ್‌ಮನ್‌ ಆಗಿದ್ದ ಇವರು, ಒಮ್ಮೆ ಟಿವಿಯಲ್ಲಿ ಒಬ್ಬ ವ್ಯಕ್ತಿ 50 ಮೊಳೆಗಳನ್ನು ಕೈಯಿಂದಲೇ ಬಗ್ಗಿಸುವುದನ್ನು ಕಂಡರು. ಅದಕ್ಕಿಂತ ಹೆಚ್ಚಿನ ಮೊಳೆಗಳನ್ನು ಬಗ್ಗಿಸುವ ಸಾಹಸವನ್ನು ತಾನು ಮಾಡಬೇಕೆಂಬ ಹಂಬಲ ಇವರಲ್ಲಿ ಮೊಳೆಯಿತು. ಆ ಪ್ರಯತ್ನದಲ್ಲಿ ಯಶಸ್ಸನ್ನು ಸಹ ಕಂಡರು. ಎಪ್ಪತ್ತ್ಮೂರು ನಿಮಿಷದಲ್ಲಿ 250 ಮೊಳೆಗಳನ್ನು ಬಾಗಿಸಿ ಜನಮನ್ನಣೆ ಗಳಿಸಿದರು. ಹಲವು ಸಾಹಸಗಳಿಗೆ ಈ ಪ್ರೋತ್ಸಾಹವೇ ಮುನ್ನುಡಿಯಾಯಿತು.  ಏಳು ಸೆಕೆಂಡುಗಳಲ್ಲಿ ಟೆಬಲ್‌ ಮತ್ತು ಅದರ ಮೇಲೆ ಕುಳಿತ ಮಹಿಳೆಯನ್ನು 10 ಮೀಟರ್‌ವರೆಗೂ ಹಲ್ಲಿನಿಂದ ಕಚ್ಚಿ  ಮೇಲೆ ಎತ್ತುತ್ತಾರೆ. ರೈಲನ್ನು ತಮ್ಮ ಹಲ್ಲುಗಳಿಂದ ಎಳೆಯುವುದರ ಜೊತೆಗೆ  ಡೈರೆಕ್ಟರಿ (ದೂರವಾಣಿ ಸಂಖ್ಯೆಯನ್ನು ಒಳಗೊಂಡ ಪುಸ್ತಕ)ವನ್ನು ಹರಿಯುವುದು – ಹೀಗೆ ಇವರ ಸಾಹಸಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.ಶಿಲ್ಪಕಲೆಯಲ್ಲಿಯೂ ಇವರು ಪ್ರಾವೀಣ್ಯವನ್ನು ಗಳಿಸಿದ್ದಾರೆ. ಜೀವನದ ಅಂತ್ಯದವರೆಗೂ ನಾನು ಇಂತಹ ಸಾಹಸಗಳನ್ನು ಮಾಡುತ್ತಲೇ ಇರುತ್ತೇನೆ ಎನ್ನುತ್ತಾರೆ. v ಜಾರ್ಜ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.