ಭಾನುವಾರ, ಮೇ 9, 2021
28 °C

ಸಾಹಸೀ ಹಗ್ಗದ ನಡಿಗೆಯ ನೇರಪ್ರಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿರುತೆರೆಯಲ್ಲೇ ಇದೇ ಮೊದಲು ಎನ್ನಬಹುದಾದ ಸಾಹಸಮಯ ಕಾರ್ಯಕ್ರಮವೊಂದು ಭಾನುವಾರ ಬೆಳಿಗ್ಗೆ 5.30ಕ್ಕೆ ಡಿಸ್ಕವರಿಯಲ್ಲಿ ನೇರಪ್ರಸಾರವಾಗಲಿದೆ. ಜಗತ್ತಿನಲ್ಲಿ ಸಾಹಸಕ್ಕೆ ಸುಪ್ರಸಿದ್ಧ ಹೆಸರು ನಿಕ್ ವಾಲ್ಲೆಂಡಾ. ಅವರು ಜಗತ್ತಿನ ಅತಿ ದೊಡ್ಡ ಕಣಿವೆ ಗ್ರ್ಯಾಂಡ್ ಕೆನೈನ್ ಅನ್ನು ಯಾವುದೇ ರಕ್ಷಣಾ ಸಲಕರಣೆಗಳಿಲ್ಲದೆ ದಾಟಲಿದ್ದಾರೆ. ಡಿಸ್ಕವರಿ ಚಾನೆಲ್ ಈ ರೋಚಕ ಘಟನೆಯ ಪ್ರತಿಕ್ಷಣವನ್ನು ಸೆರೆ ಹಿಡಿದು ನೇರ ಪ್ರಸಾರ ಮಾಡಲಿದೆ.ವಾಲ್ಲೆಂಡಾ ಅವರು ಈ ಮೊದಲು 2012ರಲ್ಲಿ ಲಿಟ್ಟಲ್ ಕೊಲರಾಡೊ ನದಿಯನ್ನು ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಎತ್ತರದಿಂದ-1500 ಅಡಿ- ದಾಟಿ ಗಮನ ಸೆಳೆದಿದ್ದರು. ಇಷ್ಟು ಮಾತ್ರವಲ್ಲದೆ ನಯಾಗರ ಜಲಪಾತವನ್ನು 200 ಅಡಿ ಎತ್ತರದಿಂದ ಕೇವಲ ಹಗ್ಗ ಬಳಸಿ ದಾಟಿದರು. ಅಮೆರಿಕದಿಂದ ಕೆನಡಾಕ್ಕೆ ಈ ರೀತಿ ಲಂಘನ ಮಾಡಿದ ಮೊದಲಿಗೆ ಎಂಬ ಹೆಗ್ಗಳಿಕೆ ಅವರದ್ದು.ಗ್ರ್ಯಾಡ್ ಕೆನೈನ್ ದಾಟುವುದನ್ನು ಜೀವಮಾನದ ಸಾಧನೆ ಎಂದು ಬಣ್ಣಿಸಿರುವ ವಾಲ್ಲೆಂಡಾ ಈ ಸಾಧನೆಯ ಮೂಲಕ 1978ರಲ್ಲಿ ಪೊರ್ಟೊ ರಿಕೊ ಎಂಬಲ್ಲಿ ಹಗ್ಗ ಬಳಸಿ ದಾಟುತ್ತ ಪ್ರಾಣ ಕಳೆದುಕೊಂಡ ಅವರ ಅಜ್ಜ ಕಾರ್ಲ್ ವಾಲ್ಲೆಂಡಾ ಅವರಿಗೆ ಗೌರವಾರ್ಪಣೆ ಮಾಡಲಿದ್ದಾರಂತೆ. ಈ ಘಟನೆಯನ್ನು ಸೆರೆಹಿಡಿಯಲು ಡಿಸ್ಕವರಿ ಚಾನೆಲ್‌ನ ನುರಿತ ಹಾಗೂ ಹಿರಿಯರ ತಂಡವೇ ಬೀಡು ಬಿಟ್ಟಿದೆ.ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಬಿಸಿ ಬಿಸಿ ಸುದ್ದಿಯಾಗಿರುವ ಈ ರೋಚಕ ದೃಶ್ಯದ ಪ್ರತಿಕ್ಷಣದ ಮಾಹಿತಿಯನ್ನು ಪಡೆಯಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.