ಸಿಂಗಪುರ (ಪಿಟಿಐ): ಅಪಘಾತದಲ್ಲಿ ಸ್ವದೇಶಿ (ಭಾರತೀಯ) ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಖಂಡಿಸಿ ನಡೆಸಿದ ಪ್ರತಿಭಟನೆ ದಂಗೆ ರೂಪ ತಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಭಾರತೀಯರ ವಿರುದ್ಧ ಸಿಂಗಪುರ ನ್ಯಾಯಾಲಯವು ಮಂಗಳವಾರ ದೋಷಾರೋಪ ಹೊರಿಸಿದೆ.

ದೋಷಾರೋಪ ಎದುರಿಸುತ್ತಿರುವ ವ್ಯಕ್ತಿಗಳೆಲ್ಲ 22 ರಿಂದ 40 ವರ್ಷ ವಯಸ್ಸಿನೊಳಗಿನವರಾಗಿದ್ದಾರೆ. ಅವರನ್ನು ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ವಶಕ್ಕೆ ಒಪ್ಪಿಸಲಾಗಿದೆ. ದಂಗೆಯ ದೋಷಾರೋಪ ಹೊತ್ತ ವ್ಯಕ್ತಿಗೆ ಏಳು ವರ್ಷಗಳ ವರೆಗೂ ಜೈಲುವಾಸ ಹಾಗೂ ಛಡಿಯೇಟಿನ ಶಿಕ್ಷೆ ವಿಧಿಸಬಹುದು.

ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 17 ರಂದು ನಡೆಯಲಿದೆ.

ಭಾರತೀಯರೇ ಹೆಚ್ಚಾಗಿರುವ ಇಲ್ಲಿನ ಲಿಟ್ಲ್ ಇಂಡಿಯಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಭಾರತದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇದನ್ನು ಖಂಡಿಸಿ ಭಾರತೀಯರು ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಈ ಮಾದರಿಯ 'ದಂಗೆ' ಈ ಮೊದಲು1969ರಲ್ಲಿ ಸಂಭವಿಸಿತ್ತು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.