ಸಿಂದಗೇರಿಯಲ್ಲಿ ರೈತ ಆತ್ಮಹತ್ಯೆ

ಗುರುವಾರ , ಜೂಲೈ 18, 2019
22 °C

ಸಿಂದಗೇರಿಯಲ್ಲಿ ರೈತ ಆತ್ಮಹತ್ಯೆ

Published:
Updated:

ವಿಜಾಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಸಿಂದಗೇರಿ ಗ್ರಾಮದಲ್ಲಿ ಬಸವರಾಜ ಭೀಮರಾಯ ಚನ್ನಪಟ್ಟಣ (45) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ.

ಇವರು ಸಾಗುವಳಿಗಾಗಿ ಸಿಂಡಿಕೇಟ್ ಬ್ಯಾಂಕ್‌ನ ಯಾಳವಾರ ಶಾಖೆಯಲ್ಲಿ ರೂ 50,000, ಶರಣ ಸೋಮನಾಳದ ಪಿಕೆಪಿಎಸ್ ಬ್ಯಾಂಕ್‌ನಲ್ಲಿ ರೂ 35,000 ಸಾಲ ಮಾಡಿದ್ದರು. ಅಲ್ಲದೆ ಗ್ರಾಮದಲ್ಲಿ ಮೂರು ಲಕ್ಷ  ರೂಪಾಯಿ ಕೈ ಸಾಲ ಮಾಡಿದ್ದರು. ಸಕಾಲಕ್ಕೆ ಮಳೆ ಬಾರದೆ ಯಾವುದೇ ಬೆಳೆ ಬೆಳೆಯಲಿಲ್ಲ.

ಸಾಲ ತೀರಿಸುವುದು ಹೇಗೆ ಎಂದು ಹೆದರಿ ಸಿಂದಗೇರಿಯ ಪಾಳು ಬಿದ್ದ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಸವನ ಬಾಗೇವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry