ಶನಿವಾರ, ಜನವರಿ 18, 2020
20 °C

ಸಿಇಟಿ ಶುಲ್ಕ ಏರಿಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಸಿಇಟಿ ಶುಲ್ಕ ಏರಿಕೆ ಹಾಗೂ ಕಾಮೆಡ್‌– ಕೆ ಪರವಾಗಿ ನೀತಿ ರೂಪಿಸು­ತ್ತಿ­ರುವ ಕ್ರಮಗಳನ್ನು ಕೈಬಿಡಬೇಕು. ಸರ್ಕಾರ ವಿದ್ಯಾರ್ಥಿ ಪರ ನಿಲುವು ತಳೆಯಬೇಕು ಎಂದು ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಸೋಮ­ವಾರ ವಿದ್ಯಾರ್ಥಿಗಳು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು.ಸರ್ಕಾರ ಬಡವರ ಪರವಾಗಿ ನೀತಿ ರೂಪಿಸಬೇಕು. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಯ ಅನುಷ್ಠಾನ­ದಿಂದ ಖಾಸಗಿ ಶಾಲೆಗಳಿಗೆ ಅನುಕೂಲ­ವಾಗಲಿದೆ. ಇದು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಸೆ ಕಸಿಯುವ ಪ್ರಯತ್ನ ಎಂದು ಆರೋಪಿಸಿದರು.ಕಾಯ್ದೆಯ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಅಡಿ ಸೀಟ್ ಲಭ್ಯವಿರುವುದಿಲ್ಲ. ಲಕ್ಷಾಂ­ತರ ರೂಪಾಯಿ ಕ್ಯಾಪಿಟೇಷನ್ ಶುಲ್ಕ ತೆರಲು ಸಾಮರ್ಥ್ಯ ಇಲ್ಲದ ಬಡವರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಹಶೀಲ್ದಾರ್‌ ಜಿ.ಎ.ನಾರಾಯಣ­ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಮುಖಂಡ­ರಾದ ಮಂಜುನಾಥ, ಶ್ರೀಧರ್‌, ಲಕ್ಷ್ಮೀ, ಭವ್ಯಾ ಇತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)