ಸೋಮವಾರ, ಮೇ 10, 2021
21 °C

ಸಿಗರೇಟ್ ಕಳ್ಳ ಸಾಗಾಣಿಕೆ ಆರೋಪ, ಏರ್ ಇಂಡಿಯಾ ಸಿಬ್ಬಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಒಬ್ಬರನ್ನು 50 ಸಿಗರೇಟ್ ಪೆಟ್ಟಿಗೆಗಳನ್ನು ಕಳ್ಳಸಾಗಾಣಿಕೆ ಮಾಡಿದ ಆರೋಪದ ಮೇಲೆ ಲಂಡನ್ ಪೊಲೀಸರು ಬಂಧಿಸಿದ ಘಟನೆ ತಡವಾಗಿ ವರದಿಯಾಗಿದೆ.ಘಟನೆ ಕಳೆದ ಶುಕ್ರವಾರ ಸಂಭವಿಸಿದ್ದು, ಏರ್ ಇಂಡಿಯಾದ ಮುಂಬೈ-ಲಂಡನ್ ವಿಮಾನದ ಸಿಬ್ಬಂದಿ ಭಾವಿಕ್ ಷಾ ಎಂಬುವವರು 50 ಸಿಗರೇಟ್ ಪೆಟ್ಟಿಗೆಗಳನ್ನು ಕಳ್ಳಸಾಗಾಣಿಕೆ ಮಾಡಿದ ಆರೋಪದಡಿ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇವರರನ್ನು ಏರ್ ಇಂಡಿಯಾ ಅಮಾನತು ಮಾಡಿದೆ.ಘಟನೆ ವಿವರ :

ಕಳೆದ ಶುಕ್ರವಾರ ಮುಂಬೈನಿಂದ ಲಂಡನ್‌ನ ಏತ್ ರೋ ವಿಮಾನನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ವಿಮಾನದಲ್ಲಿನ ಸಿಬ್ಬಂದಿ ಹೋಟೆಲ್‌ಗೆ ಹೋಗುತ್ತಿದ್ದ ವೇಳೆ ಪೊಲೀಸರು ತಪಾಸಣೆ ನಡೆಸಿದಾಗ ಚೀಲವೊಂದರಲ್ಲಿ 50 ಸಿಗರೇಟ್ ಪ್ಯಾಕ್‌ಗಳು ದೊರೆತವು. ಚೀಲ ಯಾರಿಗೆ ಸೇರಿದ್ದು ಎಂಬುದೇ ಗೊತ್ತಾಗಲಿಲ್ಲ.ಆಗ ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿ ಅವರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ತಡೆದು ನಿಲ್ಲಿಸಿ ಪ್ರಶ್ನಿಸಲಾಯಿತು. ಆಗ ಚೀಲವು ಭಾವಿಕ್ ಷಾ ಅವರಿಗೆ ಸೇರಿದ್ದು ಎಂಬುದು ತಿಳಿದ ನಂತರ ಉಳಿದವರುನ್ನು ಬಿಟ್ಟು ಷಾ ಅವರನ್ನು ಬಂಧಿಸಲಾಯಿತು. ಸದ್ಯ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.