ಬೆಂಗಳೂರು: ನಮ್ಮ ಬೆಂಗಳೂರು ಪ್ರತಿಷ್ಠಾನದ 2010ನೇ ಸಾಲಿನ ಪ್ರಶಸ್ತಿ ಪ್ರಕಟವಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬಿಬಿಎಂಪಿ ಆಯುಕ್ತ ಸಿದ್ದಯ್ಯ ಸೇರಿದಂತೆ ಒಟ್ಟು 10 ಮಂದಿಗೆ ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಪ್ರಕಟಿಸಿದರು.

ಶಾಸಕ ಬಿ.ಎನ್. ವಿಜಯಕುಮಾರ್ (ಜನ ಪ್ರತಿನಿಧಿ), ಆಯುಕ್ತ ಸಿದ್ದಯ್ಯ (ಸಾರ್ವಜನಿಕ ವ್ಯಕ್ತಿ), ಬಿಎಂಟಿಸಿ (ಸಾರ್ವಜನಿಕ ಸಂಸ್ಥೆ), ಚಿಲ್ಡ್ರನ್ ಮೂವ್ಮೆಂಟ್ ಫಾರ್ ಸಿವಿಕ್ ಅವೇರ್ನೆಸ್ (ಸಿಎಂಸಿಎ- ಖಾಸಗಿ ಸಂಸ್ಥೆ), ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ನ ಸ್ಥಾಪಕರಾದ ಡಾ.ರಾಧಾಮೂರ್ತಿ, ಅನಾಥರಿಗೆ ನೆರವಾಗುವ ಟಿ.ರಾಜಾ (ಖಾಸಗಿ ವ್ಯಕ್ತಿ) ಪ್ರಶಸ್ತಿಗೆ ಪಾತ್ರರಾಗಿದ್ದು, ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೆಯೇ ವಾಲಿಬಾಲ್ ಆಟಗಾರ ವಿಜಯರಾವ್ ಶಿಂಧೆ, ಮಹಿಳಾ ಹಾಕಿ ಅಂಪೈರ್ ಅನುಪಮಾ ಪುಚಿಮಾಂಡ (ಕ್ರೀಡಾಪಟು ವಿಭಾಗ), ಉದ್ಯಮಿ ವಾಸುದೇವ ಅಡಿಗ ಅವರಿಗೆ ಪ್ರಶಸ್ತಿ ವಿತರಿಸಲಾಯಿತು. ‘ಅವಾ’ (ಎವಿಎಎ) ಸಂಸ್ಥೆಯ ಸ್ಥಾಪಕ ಟ್ರಸ್ಟಿ ಅನಿತಾ ರೆಡ್ಡಿ ಅವರಿಗೆ ‘ನಮ್ಮ ಬೆಂಗಳೂರಿಗ’ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತೀರ್ಪುಗಾರರ ಸಮಿತಿ ಸದಸ್ಯರಾದ ಸಾಹಿತಿ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ, ‘ಅಗಾಧವಾಗಿ ಬೆಳೆದಿರುವ ಬೆಂಗಳೂರಿನ ಪ್ರಗತಿಗೆ ಸಾಕಷ್ಟು ಮಂದಿ ನೆರವಾಗಿದ್ದಾರೆ. ಬಹುಪಾಲು ಮಂದಿ ತೆರೆಮರೆಯಲ್ಲೇ ನಗರದ ಬೆಳವಣಿಗೆ ಹಾಗೂ ಜನತೆಗೆ ಸಹಾಯ ಮಾಡುತ್ತಿದ್ದಾರೆ. ಅಂತಹ ಅಪರೂಪದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಪ್ರಶಸ್ತಿಯ ಉದ್ದೇಶ’ ಎಂದರು.

ತೀರ್ಪುಗಾರರಾದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಮಾತನಾಡಿ, ‘ಪ್ರಶಸ್ತಿಗೆ ಸಾಧಕರ ಹೆಸರನ್ನು ಶಿಫಾರಸು ಮಾಡಿ ಸಾವಿರಾರು ಅರ್ಜಿಗಳು ಬಂದಿದ್ದವು. ಆದರೆ ಆಯ್ಕೆಗಾಗಿ ಯಾವುದೇ ರೀತಿಯ ಒತ್ತಡ ಬಂದಿರಲಿಲ್ಲ. ಸಾಧಕರ ಗುಣ ಹಾಗೂ ಸಾಧನೆಯನ್ನೇ ಮಾನದಂಡವನ್ನಾಗಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅರ್ಹರನ್ನೇ ಆಯ್ಕೆ ಮಾಡಿದ ತೃಪ್ತಿ ಇದೆ’ ಎಂದರು.

ಈ ಸಂದರ್ಭದಲ್ಲಿ ತೀರ್ಪುಗಾರರಾದ ಡಾ.ಎ.ರವೀಂದ್ರ, ರಮೇಶ್ ಅರವಿಂದ್, ಅನಿಲ್ ಕುಂಬ್ಳೆ, ಮೇಜರ್ ಜನರಲ್ ನಂಜಪ್ಪ, ತೇಜಸ್ವಿನಿ ಅನಂತಕುಮಾರ್, ಅನಿಲ್ ಮೆನನ್, ವಿನೋದ್ ಹಯಗ್ರೀವ್, ಡಾ.ಅಶ್ವಿನ್ ಮಹೇಶ್, ಸುಭಾಷಿನಿ ವಸಂತ್, ಆಶಿಶ್ ಬಲ್ಲಾಳ್, ರೀತ್ ಅಬ್ರಹಾಂ, ಸಜ್ಜನ್ ಪೂವಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.