ಶನಿವಾರ, ಮೇ 28, 2022
27 °C

ಸಿದ್ಧ ಉಡುಪು: ಅಬಕಾರಿ ತೆರಿಗೆ ಇಳಿಕೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ  ಬ್ರಾಂಡೆಡ್ ಸಿದ್ಧ ಉಡುಪುಗಳ ಮೇಲೆ ಹೇರಲಾಗಿರುವ  ಶೇ 10ರಷ್ಟು ಅಬಕಾರಿ ತೆರಿಗೆಯನ್ನು ಸರ್ಕಾರ ಮರು ಪರಿಶೀಲಿಸಲಿದೆ ಹಾಗೂ ಕೆಲವು ಸಮತೋಲಿತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇಲ್ಲಿ ನಡೆದ ಜವಳಿ ಉದ್ಯಮ ಮೇಳದಲ್ಲಿ ಈ ಭರವಸೆ ನೀಡಿದ ಜವಳಿ ಆಯುಕ್ತ ಎ.ಬಿ ಜೋಶಿ, ಸರ್ಕಾರ ತೆರಿಗೆ ದರ  ಇಳಿಸುವ ಭರವಸೆ ವ್ಯಕ್ತಪಡಿಸಿದೆ. ಭವಿಷ್ಯದಲ್ಲಿ ಉದ್ಯಮಕ್ಕೆ ನೆರವಾಗುವಂತ ಸಮತೋಲನದ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಈಗಾಗಲೇ ಜವಳಿ ಉದ್ಯಮ ತೀವ್ರ ಸಮಸ್ಯೆ ಎದುರಿಸುತ್ತಿದೆ. ಜತೆಗೆ ತೆರಿಗೆ ಹೆಚ್ಚಿಸಿರುವುದು ಒಟ್ಟಾರೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆರೋಪಿಸಿ, ಸಿದ್ಧ ಉಡುಪು ತಯಾರಿಕಾ ಸಂಸ್ಥೆಗಳು ಎರಡು ದಿನಗಳ ಕಾಲ ದೇಶವ್ಯಾಪಿ ಮುಷ್ಕರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.