ಬೆಂಗಳೂರು: ತಮ್ಮ ನೆಚ್ಚಿನ ನಟರಿಗೆ ಜೈಕಾರ ಹಾಕುತ್ತಾ ಸಂಭ್ರಮಿಸಿದ ರಾಜ್ಯ ತಂಡದ ಅಭಿಮಾನಿಗಳ ಖುಷಿಗೆ ಭಾನುವಾರ ಪಾರವೇ ಇರಲಿಲ್ಲ. ಏಕೆಂದರೆ ಭರ್ಜರಿ ರನ್ ಹೊಳೆ ಹರಿಸಿದ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ಟೂರ್ನಿಯ ಚೆನ್ನೈ ರಿನ್ಹೋಸ್ ಎದುರಿನ ಪಂದ್ಯದಲ್ಲಿ ಗೆಲುವು ಪಡೆದು ಕ್ರಿಕೆಟ್ ಪ್ರೇಮಿಗಳಿಗೆ ರಜೆಯ ದಿನದ ಖುಷಿ ನೀಡಿತು.

ಮಧ್ಯಾಹ್ನ ಎರಡು ಗಂಟೆಗೆ ಪಂದ್ಯ ಆರಂಭವಾಯಿತು. ಆದರೆ ಒಂದು ಗಂಟೆ ಮೊದಲೇ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣಕ್ಕೆ ಬಂದಿದ್ದರು. ತಮ್ಮ ನೆಚ್ಚಿನ ನಟರ ಭಿತ್ತಿಚಿತ್ರವನ್ನು ಪ್ರದರ್ಶಿಸಿ ಖುಷಿಪಟ್ಟರು. ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್ ಆಕರ್ಷಣೆ ಆಗಿದ್ದರು.

ಸಿನಿ ತಾರೆಯನ್ನು ಪಂದ್ಯ ವೀಕ್ಷಿಸಲು ಹೋದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಆದ್ದರಿಂದ ಮೈದಾನದ ರಂಗು ಹೆಚ್ಚಾಗಿತ್ತು. ಕೆಲವರು ಡ್ರಮ್ ಬಾರಿಸಿದರೆ, ಇನ್ನು ಕೆಲವರು ಪ್ರತಿ ಸಿಕ್ಸರ್ ಹಾಗೂ ಬೌಂಡರಿಗಳು ಸಿಡಿದಾಗ ಕುಣಿದರು. ಚಿಯರ್ ಗರ್ಲ್ಸ್ ನೃತ್ಯದ ಮೋಡಿ ಅಭಿಮಾನಿಗಳ ಕೇಕೆಯ ಸದ್ದನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಕ್ರೀಡಾಂಗಣದಲ್ಲಿ ಆಗಾಗ ಕೇಳಿಬರುತ್ತಿದ್ದ ಕನ್ನಡ ಹಾಡುಗಳಿಗೆ ಅಭಿಮಾನಿಗಳು ನೃತ್ಯ ಮಾಡಿದರು.

ಬುಲ್ಡೋಜರ್ಸ್ಗೆ ಜಯ: ಮೊದಲು ಬ್ಯಾಟ್ ಮಾಡಿದ ಸುದೀಪ್ ನಾಯಕತ್ವದ ಬುಲ್ಡೋಜರ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಬುಲ್ಡೋಜರ್ಸ್ ತಂಡದ ಧ್ರುವ ಶರ್ಮಾ 38 ಎಸೆತಗಳಲ್ಲಿ ಏಳು ಬೌಂಡರಿಗಳನ್ನು ಒಳಗೊಂಡಂತೆ 61 ರನ್ ಗಳಿಸಿದರು.

ಬಳಿಕ ಕ್ರೀಸ್ಗೆ ಬಂದ ರಾಜೀವ್ ಕೇವಲ 12 ಎಸೆತಗಳಲ್ಲೇ ನಾಲ್ಕು ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿ 40 ರನ್ ಗಳಿಸಿ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು. 17ನೇ ಓವರ್ನಲ್ಲಿ ಕ್ರೀಸ್ಗೆ ಬಂದ ಸುದೀಪ್ಗೆ ಭರ್ಜರಿ ಸ್ವಾಗತ ಲಭಿಸಿತು.

ಬುಲ್ಡೋಜರ್ಸ್ ನೀಡಿದ್ದ ಸವಾಲಿನ ಗುರಿ ಎದುರು ಚೆನ್ನೈ ರಿನೋಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಈ ತಂಡ 19 ಓವರ್ಗಳಲ್ಲಿ ಕೇವಲ 128 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.