ಕೋಲ್ಕತ್ತ (ಐಎಎನ್ಎಸ್): ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಎಡ ಪಂಥೀಯರ ನಡುವಿನ ರಾಜಕೀಯ ಸಮರ ದಿನೇ ದಿನೇ ರಂಗೇರುತ್ತಿದ್ದು, ಮಂಗಳವಾರ ನಡೆದ ಸಮಾರಂಭದಲ್ಲಿ ಸಚಿವರೊಬ್ಬರು `ಸಿಪಿಎಂ ದ್ವೇಷಿಸುವುದನ್ನು ಕಲಿಯಿರಿ~ ಎಂದು ತೃಣಮೂಲ ಕಾರ್ಯಕರ್ತರಿಗೆ ಬಹಿರಂಗ ಪಾಠ ಮಾಡಿದ್ದಾರೆ.

`ಸಿಪಿಎಂ~ಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿ. ಆ ಪಕ್ಷದ ಕಾರ್ಯಕರ್ತರೊಂದಿಗೆ ಬೆರೆಯಬೇಡಿ. ಒಂದು ವೇಳೆ ಎಡ ಪಂಥೀಯರು ನಿಮ್ಮನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಆಹ್ವಾನಿಸಿದರೆ ಖಂಡಿತ ಅಲ್ಲಿಗೆ ಹೋಗಬೇಡಿ. ಅವರನ್ನು ನೀವು ಸಂಪೂರ್ಣ ಸಾಮಾಜಿಕವಾಗಿ ಬಹಿಷ್ಕರಿಸದಿದ್ದರೆ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡಂತೆ ಆಗುವುದಿಲ್ಲ~ ಎಂದು ಆಹಾರ ಪೂರೈಕೆ ಸಚಿವ ಜ್ಯೋತಿಪ್ರಿಯ ಮುಲ್ಲಿಕ್ ಸಲಹೆ ನೀಡಿದ್ದಾರೆ.

ಸಚಿವರ ಈ `ನೀತಿಪಾಠ~ ಇಲ್ಲಿಗೇ ನಿಂತಿಲ್ಲ. `ಕಮ್ಯುನಿಸ್ಟರೊಂದಿಗೆ ಊಟ ಮಾಡಬೇಡಿ, ಕುಳಿತುಕೊಳ್ಳಬೇಡಿ. ಅವರನ್ನು ದ್ವೇಷಿಸುವ ಮನೋಭಾವ ಬೆಳೆಸಿಕೊಳ್ಳಿ. ಅವರನ್ನು ದ್ವೇಷಿಸದ ಹೊರತು ಸೇಡು ತೀರಿಸಿಕೊಳ್ಳಲು ಆಗದು~ ಎಂದಿದ್ದಾರೆ.

ತೀಕ್ಷ್ಣ ಪ್ರತಿಕ್ರಿಯೆ: `ಇದು ಸೈದ್ಧಾಂತಿಕ ನೆಲೆ ಇಲ್ಲದ ತೀರಾ ವೈಯಕ್ತಿಕ ದ್ವೇಷದ ಹೇಳಿಕೆ~ ಎಂದು ಸಿಪಿಎಂ ನೇತೃತ್ವದ ಎಡರಂಗ, ಸಚಿವರ ಹೇಳಿಕೆಗೆ ತೀಕ್ಷ್ಣವಾಗಿಪ್ರತಿಕ್ರಿಯಿಸಿದೆ. `ತೃಣಮೂಲ ಕಾಂಗ್ರೆಸ್ ಸಾಮಾಜಿಕ ಸಾಮರಸ್ಯ ಹಾಳು ಮಾಡಲು ಯತ್ನಿಸುತ್ತಿದೆ. ಆದರೆ, ಅದರ ಈ ಯತ್ನ ಯಶ ಕಾಣದು.

ವೈಯಕ್ತಿಕ ದ್ವೇಷದ ಹೊರತು ಈ ಪಕ್ಷಕ್ಕೆ ಯಾವುದೇ ವಿಶಾಲ ಸೈದ್ಧಾಂತಿಕ ತಳಹದಿ ಇಲ್ಲ ಎನ್ನುವುದು ಈ ಹೇಳಿಕೆಯಿಂದ ಸಾಬೀತಾಗಿದೆ~ ಎಂದು ಸಿಪಿಎಂ ಕೇಂದ್ರ ಸಮಿತಿಯ ಮೊಹಮ್ಮದ್ ಸಲೀಂ ಆರೋಪಿಸಿದ್ದಾರೆ.
ಕಾಂಗ್ರೆಸ್ ಕೂಡಾ ಸಚಿವರ ಈ ಹೇಳಿಕೆಯನ್ನು `ತೀರಾ ವಿಲಕ್ಷಣ ಮತ್ತುಬಾಲಿಶ~ ಎಂದು ಲೇವಡಿ ಮಾಡಿದೆ.

ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಮಾತ್ರ ಇಂಥ ಹೇಳಿಕೆ ನೀಡಬಲ್ಲ ಎಂದು ಕಾಂಗ್ರೆಸ್ ನಾಯಕ ಅಬ್ದುಲ್ ಮನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಟೀಕೆಗಳು ಕೇಳಿಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸಚಿವರು, ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.