ಕಡಬ(ಉಪ್ಪಿನಂಗಡಿ): ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಕೃಷಿಕರ ಹಿತದೃಷ್ಟಿಯಿಂದ ಶೀಘ್ರ ಸಿಬ್ಬಂದಿ ನೇಮಕ ಮಾಡಬೇಕು ಎಂದು ಪೆರಾಬೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿ ಅದರಂತೆ ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಾರತ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳೇ ಇರುವುದಿಲ್ಲ, ಪ್ರತಿದಿನ ಬಾಗಿಲು ಹಾಕಿರುತ್ತದೆ. ಇಲಾಖೆಯಿಂದ ರೈತರಿಗೆ ಸಿಗುವ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಹಾಯಕ ಪರಶುರಾಮ, ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬ ಸಿಬ್ಬಂದಿ ಇದ್ದು 26 ಗ್ರಾಮಗಳಿಗೆ ಭೇಟಿ ನೀಡಬೇಕಾಗಿದೆ. ಜತೆಗೆ ಗ್ರಾಮಸಭೆ ಇತರೇ ಸಭೆಗಳಿಗೂ ಹಾಜರಾಗಬೇಕಾಗಿದೆ. ಆದುದರಿಂದ ಕಚೇರಿಯಲ್ಲಿ ಯಾರೂ ಇರುವುದಿಲ್ಲ, ಕಚೇರಿಯ ಬಾಗಿಲಿನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದ್ದು ರೈತರು ಸಂಪರ್ಕಿಸಿದಲ್ಲಿ ಮಾಹಿತಿ ನೀಡುತ್ತೇವೆ ಎಂದರು.

ಇದಕ್ಕೆ ಗ್ರಾಮಸ್ಥರು ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡರು. ಆಗ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ ಬಾಣಜಾಲು ಮಾತನಾಡಿ, ಕಡಬ ರೈತ ಸಂಪರ್ಕ ಕೇಂದ್ರಕ್ಕೆ ಪುತ್ತೂರು ಕೃಷಿ ಇಲಾಖೆ ಕಚೇರಿಯಿಂದ ಸಿಬ್ಬಂದಿಯೊಬ್ಬರ ನೇಮಕಕ್ಕೆ ಇಲಾಖೆಗೆ ಮನವಿ ಮಾಡುವುದಾಗಿ ತಿಳಿಸಿದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಗ್ರಾಮಕರಣಿಕರ ನೇಮಕಕ್ಕೆ ಆಗ್ರಹ: ಕೊಂತೂರು ಗ್ರಾಮಕ್ಕೆ ಕಾಯಂ ಗ್ರಾಮಕರಣಿಕರಿಲ್ಲ, ಪಡಿತರ ಚೀಟಿ ಬಿಪಿಎಲ್, ಎಪಿಎಲ್ ಸೇರಿದಂತೆ ಬಹಳಷ್ಟು ಅವ್ಯವಸ್ಥೆಗಳಿದ್ದು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ, ಇಲ್ಲಿಗೆ ಕಾಯಂ ಗ್ರಾಮಕರಣಿಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಕಡಿರಡ್ಕ, ಪಾಲೆಚ್ಚಾರು ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದ್ದು ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಎಂಬ ಬೇಡಿಕೆ ವ್ಯಕ್ತವಾಯಿತು. ಸಭೆಯಲ್ಲಿ ಆರೋಗ್ಯ, ಅರಣ್ಯ, ಕೃಷಿ, ಮೆಸ್ಕಾಂ, ಕಂದಾಯ, ಎಂಜಿನಿಯರಿಂಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಶಿಕ್ಷಣ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ದಯಾನಂದ ಗೌಡ, ಎಪಿಎಂಸಿ ಸದಸ್ಯೆ ಯಮುನ ರೈ, ಗ್ರಾಪಂ ಉಪಾಧ್ಯಕ್ಷ ವಸಂತ್, ಸದಸ್ಯರಾದ ರಾಯ್ ಅಬ್ರಾಹಂ, ಶಿವಪ್ಪ ಗೌಡ, ಪಿಡಿಒ ತನ್ವೀರ್ ಮಾತನಾಡಿದರು. ಪಶುಸಂಗೋಪನೆ ಇಲಾಖೆ ಪುತ್ತೂರು ತಾಲ್ಲೂಕು ಸಹಾಯಕ ನಿರ್ದೇಶಕ ರಾಮಚಂದ್ರ ಶೆಟ್ಟಿ ನೋಡಲ್ ಅಧಿಕಾರಿಯಾಗಿದ್ದರು. ಪಂಚಾಯಿತಿ ಸದಸ್ಯರಾದ ರತಿ, ನೇಮಿರಾಜ್, ಲಕ್ಷ್ಮಿ, ಸುಮತಿ, ಸರೋಜಿನಿ, ಲತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.