ಹಳೇಬೀಡು: ಇಂಗ್ಲಿಷ್ ಭಾಷಾಜ್ಞಾನ ಹೊಂದಿರುವ ಕರಿಕಟ್ಟೆಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಿರಿಗನ್ನಡ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದು, ಈಚೆಗೆ ಪ್ರಶಸ್ತಿ ಪತ್ರ ಹಾಗೂ ಪದಕ ವಿತರಿಸಿದಾಗ ಮಕ್ಕಳ ಕಲರವ ಮುಗಿಲುಮುಟ್ಟಿತ್ತು.

ಆಧುನಿಕತೆಗೆ ತಕ್ಕಂತೆ ಹಾಗೂ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ಶಾಲೆಯ ಮಕ್ಕಳು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಿ ಮಾತೃಭಾಷೆ ಕನ್ನಡವನ್ನು ಮರೆಯಬಾರದು ಎಂದು ಶಾಲೆಯ ಮುಖ್ಯಶಿಕ್ಷಕ ಅಲ್ಲಪ್ಪ ಮಕ್ಕಳಿಗೆ ಸಿರಿಗನ್ನಡ ಪರೀಕ್ಷೆ ಬರೆಸುವ ಮುಖಾಂತರ ಶಾಲೆಯಲ್ಲಿ ಕನ್ನಡ ಕಂಪು ಪಸರಿಸುವಂತೆ ಮಾಡಿರುವುದು ಅಗ್ಗಳಿಕೆ.

ಉಗನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಲಪ್ಪ ಸೇವೆ ಸಲ್ಲಿಸುತ್ತಿದ್ದಾಗ 10ವರ್ಷದಿಂದಲೂ ಮಕ್ಕಳಿಗೆ ಸಿರಿಗನ್ನಡ ಪರೀಕ್ಷೆ ಬರೆಸಿದ್ದರು. ಕನ್ನಡದ ಸೇವೆಯನ್ನು ಕೈಬಿಡಬಾರದು ಎಂಬ ಛಲ ಹೊಂದಿದ್ದ ಅವರು ಕರಿಕಟ್ಟೆಹಳ್ಳಿ ಶಾಲೆಗೆ ವರ್ಗಾವಣೆಯಾಗಿ ಬಂದ ನಂತರ ತಮ್ಮ ನಿಃಸ್ವಾರ್ಥ ಸೇವೆ ಮುಂದುವರೆಸಿದರು.

ಪ್ರತಿವರ್ಷ ತಪ್ಪದೇ ಮಕ್ಕಳನ್ನು ಪರೀಕ್ಷೆಗೆ ಕೂರಿಸಿ ಕನ್ನಡ ಭಾಷೆಯ ಆಸಕ್ತಿ ಹಾಗೂ ಸಾಹಿತ್ಯದ ಬಗ್ಗೆ ತಿಳಿವಳಿಕೆ ಮೂಡಿಸಿದ್ದರಿಂದ ಅಲ್ಲಪ್ಪ ಸಿರಿಗನ್ನಡ ಬಳಗದಿಂದ ಕನ್ನಡ ರತ್ನ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

ಪರೀಕ್ಷೆಗೆ ಕುಳಿತ 28 ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗಿದ್ದು ಮಾತ್ರವಲ್ಲದೆ, ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಂ.ಡಿ.ಹರ್ಷಿತಾ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದು ಶಾಲೆಗೆ ಕಿರೀಟ ತಂದುಕೊಟ್ಟಿದ್ದಾರೆ. ಪರೀಕ್ಷೆಯಲ್ಲಿ ಯಶಸ್ವಿಯಾದ ಕಾರಣ ವಿದ್ಯಾರ್ಥಿಗಳು ಮಾತ್ರವಲ್ಲದೆ, ಶಾಲೆಯ ಎಸ್ಡಿಎಂಸಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.