ಶುಕ್ರವಾರ, ಮೇ 27, 2022
30 °C

ಸಿಹಿ ತರದ ರಾಜ್ಯ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಸಕ್ಕರೆ ನಗರ ಮಂಡ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಜೆಟ್‌ನಲ್ಲಿ ಸಿಹಿಗಿಂತ ಕಹಿಯೇ ಜಾಸ್ತಿಯಾಗಿದೆ.

ಬೆಂಗಳೂರು -ಮೈಸೂರು ಮಧ್ಯದಲ್ಲಿ ಬರುವ ಪಟ್ಟಣಗಳ ಸಂಚಾರ ಒತ್ತಡವನ್ನು ನಿವಾರಿಸಲು ಮೇಲು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಸಲು ಬಜೆಟ್‌ನಲ್ಲಿ ಸಿದ್ದ ರಾಮಯ್ಯ ಅವರು ಸೂಚಿಸಿದ್ದಾರೆ.ಮಂಡ್ಯದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯೋಜನಾ ವರದಿಯನ್ನು ತಯಾರಿಸಲಾಗಿದೆ. ಅದನ್ನು ಮುಖ್ಯಮಂತ್ರಿಗಳಿಗೂ ನೀಡಿ, ಈ ಪ್ರಸ್ತಾವನೆಗೆ ಬಜೆಟ್‌ನಲ್ಲಿ ಅನುಮೋದನೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಕೋರಿದ್ದರು. ಆದರೆ, ಈಗ ಯೋಜನಾ ವರದಿಗೆ ತಯಾರಿಸಲು ಹೇಳಿರುವುದರಿಂದ ಜಾರಿ ಮತ್ತಷ್ಟು ವಿಳಂಬವಾಗಲಿದೆ.ಕಾವೇರಿ ಕೊಳ್ಳದ ಆಧುನೀಕರಣಕ್ಕೆ 500 ಕೋಟಿ ರೂಪಾಯಿ ಒದಗಿ ಸಿದ್ದಾರೆ. ಇದರಲ್ಲಿ ಪೂರಿಗಾಲಿ ಏತ ನೀರಾವರಿ, ರಾಜಪರಮೇಶ್ವರಿ, ರಾಮ ಸ್ವಾಮಿ ನಾಲೆಗಳು ಇರುವುದರಿಂದ ಇದರ ಲಾಭ ಜಿಲ್ಲೆಗೂ ಒಂದಷ್ಟು ಆಗಲಿದೆ.ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಹೊರಾವರಣ ಕೇಂದ್ರವನ್ನು ಮಂಡ್ಯದಲ್ಲಿ ಆರಂಭಿಸಲು 30 ಕೋಟಿ ರೂಪಾಯಿ ನೀಡಲಾಗಿದೆ. ಇದರಿಂದ ಮಂಡ್ಯ ಸೇರಿದಂತೆ ಈ ವಿಭಾಗದ  ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿ ನಿಯರಿಗೆ ಒಂದಷ್ಟು ನೆರವಾಗಬಹುದು. ಈಗಾಗಲೇ ಶೈಕ್ಷಣಿಕ ವರ್ಷ ಕೊನೆಯ ಘಟ್ಟದಲ್ಲಿರುವುದರಿಂದ ಮುಂದಿನ ವರ್ಷದಿಂದಲೇ ಆರಂಭ ಸಾಧ್ಯವಾಗಬಹುದು.ನನಸಾಗದ ಸ್ವತಂತ್ರ ವಿಶ್ವವಿದ್ಯಾಲಯ ಕನಸು: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ದಶಕಗಳೇ ಕಳೆದಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿ.ಸಿ. ಫಾರ್ಮ್ ಮಂಡ್ಯದಲ್ಲಿದೆ. ಸ್ವತಂತ್ರ ವಿಶ್ವವಿದ್ಯಾಲಯವಿಲ್ಲ. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಸಂದರ್ಭದಲ್ಲಿ ಮಂಡ್ಯದ ಹೆಸರು ಮುಂಚೂಣಿಯಲ್ಲಿತ್ತು. ಕೊನೆ ಗಳಿಗೆಯಲ್ಲಿ ಕೈತಪ್ಪಿತ್ತು. ಎರಡು ಕೇಂದ್ರಗಳ ಜೊತೆಗೆ ಮತ್ತೊಂದು ಬಂದಿದೆ.ಬೃಹತ್ ಮಂಡ್ಯ: ನಗರದ ಹೊರವಲಯದ ಗ್ರಾಮಗಳನ್ನೂ ಸೇರಿಸಿಕೊಂಡು ಬೃಹತ್ ಮಂಡ್ಯ ನಿರ್ಮಿಸುವ ಪ್ರಸ್ತಾಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಈ ಬಜೆಟ್‌ನಲ್ಲಿ ಚಾಲನೆ ನೀಡಲಾಗುವುದು ಎಂದೇ ನಿರೀಕ್ಷಿಸ ಲಾಗಿತ್ತು.ಜಿಲ್ಲೆಯ ರೈತರ ಜೀವನಾಡಿಗಳಾದ ಮೈಷುಗರ್, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನ ಬಗೆಗೆ ಪ್ರಸ್ತಾಪವಿಲ್ಲ. ಯಾವುದೇ ಆರ್ಥಿಕ ನೆರವನ್ನೂ ಘೋಷಿಸಿಲ್ಲ.ಮಂಡ್ಯದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣದ ಪ್ರಸ್ತಾವನೆಯನ್ನೂ ನೀಡಲಾಗಿತ್ತು. ಅದರ ಬಗೆಗೂ ಪ್ರಸ್ತಾಪವಾಗಿಲ್ಲ.

ಪ್ರತಿಕ್ರಿಯೆ

ಎಸ್. ನಂಜುಂಡಸ್ವಾಮಿ ಅವರ ಅಮೃತ ಭೂಮಿಗೆ ಐದು ಕೋಟಿ ನೀಡಿರುವುದು. ಒಂದು ರೂಪಾಯಿಗೆ ಅಕ್ಕಿ ಕೊಡತ್ತಿರುವುದು ಸ್ವಾಗತಾರ್ಹ. ರೈತರ ಬೆಳೆದೆ ಧಾನ್ಯಗಳ ಬೆಲೆ ನಿಗದಿಯ ಬಗೆಗೆ ಇನ್ನಷ್ಟು ಸ್ಪಷ್ಟ ನಿರ್ಧಾರ ಕೈಗೊಳ್ಳಬೆಕಿತ್ತು. ಸಕ್ಕರೆ ಕಾರ್ಖಾನೆಗಳ ಪುನಃಶ್ಚೇತನಕ್ಕೆ ಮುಂದಾಗದಿರುವುದು ಸರಿಯಲ್ಲ.

ಕೋಣಸಾಲೆ ನರಸರಾಜು

ಜಿಲ್ಲಾ ಘಟಕದ ಅಧ್ಯಕ್ಷ ರೈತ ಸಂಘ

ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒತ್ತು ನೀಡಿರುವುದು ಸ್ವಾಗತಾರ್ಹ. ಮಹಿಳಾ ವಿಶ್ವವಿದ್ಯಾಲಯದ ಹೊರಾವರಣ ಕೇಂದ್ರ ತೆರೆಯುತ್ತಿರುವುದು ಸ್ವಾಗತಾರ್ಹ.

ಮೀರಾ ಶಿವಲಿಂಗಯ್ಯ

ಅಧ್ಯಕ್ಷೆ, ಕಸಾಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.