ಗುರುವಾರ , ಮೇ 19, 2022
25 °C

ಸೀಟಿಗೆ ರೂ 450!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ (ಐಎಎನ್‌ಎಸ್): ಇಲ್ಲಿ ನಡೆದ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಳಸಿದ ಸೀಟಿ (ವಿಷಲ್)ಗಳ ಮಾರುಕಟ್ಟೆ ದರ ತಲಾ ರೂ 90 ಇದ್ದರೂ ಅದನ್ನು ತಲಾ ರೂ 450 ಕ್ಕೆ ಖರೀದಿಸಿರುವುದು ಸೇರಿದಂತೆ ಕ್ರೀಡಾಕೂಟಕ್ಕೆ ಬಳಸಿದ ಸಲಕರಣೆಗಳನ್ನು ಹೆಚ್ಚಿನ ದರಕ್ಕೆ ಖರೀದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಜಾಗೃತ ದಳವು ಮಂಗಳವಾರ ಸಂಘಟನಾ ಸಮಿತಿಯ ಹಿರಿಯ ಅಧಿಕಾರಿಗಳ ವಿಚಾರಣೆ ನಡೆಸಿತು.

ರಾಷ್ಟ್ರೀಯ ಕ್ರೀಡಾಕೂಟದ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹಶ್ಮಿ ಅವರನ್ನು ಜಾಗೃತ ದಳದ ಕಚೇರಿಯಲ್ಲಿ ನಾಲ್ಕು ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಯಿತು.

ವಿಚಾರಣೆಯ  ವಿವರಗಳನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಕಳೆದ ವಾರ ಜಾಗೃತ ದಳವು ಸಂಘಟನಾ ಸಮಿತಿಯ ಕಚೇರಿ ಮತ್ತು ಜಾರ್ಖಂಡ್ ಒಲಿಂಪಿಕ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹಶ್ಮಿ ಮತ್ತು ಅಸೋಸಿಯೇಶನ್‌ನ ಖಜಾಂಚಿ ಮಧುಕಾಂತ್ ಪಾಠಕ್ ಅವರ ಮನೆಗಳ ಮೇಲೆ ದಾಳಿ ನಡೆಸಿತ್ತು.

ಪಾಠಕ್ ಮತ್ತು ಸಂಘಟನಾ ಸಮಿತಿಯ ಇತರ ಅಧಿಕಾರಿಗಳನ್ನು ಶೀಘ್ರದಲ್ಲೇ ವಿಚಾರಣೆಗೆ ಗುರಿ ಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.