ಗುರುವಾರ , ಜನವರಿ 23, 2020
19 °C
ರಾಜ್ಯ ವಾರ್ತಾಪತ್ರ, ಆಂಧ್ರ ಪ್ರದೇಶ.

ಸೀಮಾಂಧ್ರ ನಾಯಕರಿಗೆ ರಾಜ್ಯ ಏಕತೆಯ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ (ಐಎಎನ್‌ಎಸ್‌): ಆಂಧ್ರ ಪ್ರದೇಶ­ದಿಂದ ತೆಲಂಗಾಣ  ವಿಭಜಿಸಿ, ಸಂಸ­ತ್ತಿನ ಚಳಿಗಾಲ ಅಧಿವೇಶನ­ದಲ್ಲಿ ಮಸೂದೆ ಮಂಡಿ­ಸಲು ಕೇಂದ್ರ ಸರ್ಕಾರ ಮುಂದಾಗ­ಲಿದ್ದರೂ  ಸೀಮಾಂಧ್ರ ಪ್ರಾಂತ್ಯದ ನಾಯಕರು ಮಾತ್ರ ತಮ್ಮ ರಾಜ್ಯ ಒಂದಾಗಿಯೇ ಉಳಿಯುವುದು ಎಂಬ ಭರವಸೆ­ಯಲ್ಲಿದ್ದಾರೆ.ಕೇಂದ್ರ ಸಚಿವರ ತಂಡವು ರಾಜ್ಯದ ವಿಭಜನೆಗೆ ಸಂಬಂಧಿಸಿದ ವರದಿ­ಯನ್ನು ಅಂತಿಮಗೊಳಿಸಿ, ಮುಂದಿನ ವಾರ ಸಂಪು­­ಟದ ಮುಂದೆ ಕರಡು ಮಸೂದೆ ಮಂಡಿಸುವ ನಿರೀಕ್ಷೆಯಿದೆ. ಆದರೂ ಸೀಮಾಂಧ್ರ (ರಾಯಲಸೀಮಾ ಮತ್ತು ಕರಾವಳಿ ಆಂಧ್ರ ಪ್ರಾಂತ್ಯ­ಗಳು) ಇನ್ನೂ ಭರವಸೆ ಕಳೆದುಕೊಂಡಿಲ್ಲ.ರಾಜ್ಯ ವಿಭಜನೆಯ ಪ್ರಕ್ರಿಯೆ ಸ್ಥಗಿತ­ಗೊಂಡು, ಇದೇ 5ರಿಂದ 20ರವರೆಗೆ ನಡೆ­ಯಲಿರುವ ಸಂಸತ್ತಿನ ಚಳಿಗಾಲದ ಅಧಿ­ವೇಶನದಲ್ಲಿ ಮಸೂದೆ ಮಂಡನೆ ಆಗ­ಲಾರದು ಎಂದು ಸೀಮಾಂಧ್ರ ನಾಯ­ಕರು ನಂಬಿ­ದ್ದಾರೆ.  ಅನೇಕ  ರಾಜಕೀಯ ಪಕ್ಷಗಳು ರಾಜ್ಯ ವಿಭಜನೆ ವಿರುದ್ಧ ಸಂಸತ್‌ನಲ್ಲಿ ಮತ ಹಾಕಬ­ಹುದು ಎಂಬ ವಿಶ್ವಾಸ ಅವರದು.ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಕರಡು ಮಸೂದೆ­ಯನ್ನು ಆಂಧ್ರ­ಪ್ರದೇಶ ವಿಧಾನಸಭೆಗೆ ತನ್ನ ಅಭಿಪ್ರಾಯ ತಿಳಿಸುವಂತೆ ಕಳುಹಿಸ­ದಿ­ರ­ಬಹುದು ಅಥವಾ ಸುಪ್ರೀಂ­ಕೋರ್ಟ್‌ ಮಧ್ಯ ಪ್ರವೇ­­ಶಿಸಿ ಪ್ರಕ್ರಿಯೆ ತಡೆ­ಹಿಡಿ­ಯ­ಬಹುದು. ಒಂದು ವೇಳೆ, ಸುಪ್ರೀಂ­ಕೋರ್ಟ್ ಮಧ್ಯ ಪ್ರವೇಶಿಸಲು ನಿರಾಕರಿ­ಸಿ­ದರೂ ಮತ್ತು ರಾಷ್ಟ್ರಪತಿ, ಆಂಧ್ರ ವಿಧಾನ­ಸಭೆ ಅಭಿ­ಪ್ರಾಯ ಪಡೆ­ಯಲು ಮಸೂದೆ ಕಳು­ಹಿಸದಿದ್ದರೂ ಸಂಸತ್‌ನಲ್ಲಿ ಅದು ಅಂಗೀಕಾರ­ವಾಗುವುದಿಲ್ಲ ಎಂದು  ಹೇಳುತ್ತಿದ್ದಾರೆ.ಆಡಳಿತಾರೂಢ ಕಾಂಗ್ರೆಸ್‌ನೊಂದಿಗೆ  ಪ್ರತಿಪಕ್ಷಗ­ಳಾದ ತೆಲುಗು ದೇಶಂ ಮತ್ತು ವೈಎಸ್‌ಆರ್‌ ಕಾಂಗ್ರೆ­ಸ್‌ನ ಸೀಮಾಂಧ್ರ ಪ್ರಾಂತ್ಯ ನಾಯಕರು, ಸರ್ಕಾರಿ ನೌಕ­ರರು, ಕೇಂದ್ರ ಸಚಿವರು ಹಾಗೂ ಇತರ ಸಂಘಟನೆ­ಗಳ ಪ್ರಮು­ಖರು ರಾಜ್ಯದ ವಿಭಜನೆ ವಿರೋ­ಧಿಸುತ್ತಿದ್ದಾರೆ. ಅಸಾಂವಿಧಾನಿಕ ಮತ್ತು ಅಪ್ರಜಾಸತ್ತಾ­ತ್ಮಕ ಮಾದರಿ­ ವಿಭಜನೆಯನ್ನು ತಡೆ­ಯುವಂತೆ ಈಗಾ­ಗಲೇ ಅವರು ರಾಷ್ಟ್ರ­ಪತಿಗೆ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)