ರೋಮಾಂಚನ ಹುಟ್ಟಿಸುವ ಸುಂದರ ಪ್ರಾಕೃತಿಕ ಸೌಂದರ್ಯ, ಸಾವಿರಾರು ವರ್ಷಗಳ ಸಮೃದ್ಧ ಇತಿಹಾಸ ಹೊಂದಿರುವ ಸಂಸ್ಕೃತಿಯ ಅನಾವರಣ, ಕಲೆ ಮತ್ತು ಸಂಸ್ಕೃತಿಯನ್ನು ಸಾರುವ ಕಟ್ಟಡಗಳು, ಕೊಳ್ಳುಬಾಕರ ಮನತಣಿಸುವ ಶಾಪಿಂಗ್ ತಾಣಗಳು, ವಿಶ್ವ ಪ್ರಸಿದ್ಧಿ ಪಡೆದ ಬಿಯರ್ನ ರುಚಿ, ಅಡ್ವೆಂಚರ್ ಇಷ್ಟಪಡುವವರ ಪ್ರಾಣವನ್ನು ಪಣಕ್ಕಿಡುವಂತಹ ಸಾಹಸ ಕ್ರೀಡೆಗಳು, ಮನಮೋಹಕ ಕಡಲ ಕಿನಾರೆಗಳು. ಇವೆಲ್ಲವುಗಳ ಮೊತ್ತ ಜರ್ಮನಿ.

ಜರ್ಮನಿಯ ಪ್ರಾಕೃತಿಕ ಸೌಂದರ್ಯ ಪ್ರವಾಸಿ ಪ್ರಿಯರನ್ನು ಬರಸೆಳೆಯುತ್ತದೆ. ಹೀಗಾಗಿಯೇ ಹೆಚ್ಚಿನ ಭಾರತೀಯರು ಈಗ ತಮ್ಮ ವಿರಾಮದ ವೇಳೆಯನ್ನು ಜರ್ಮನಿಯಲ್ಲಿ ಕಳೆಯಲು ಇಷ್ಟಪಡುತ್ತಾರೆ.

ಜರ್ಮನಿಯ ಪ್ರವಾಸೋದ್ಯಮ ಸಂಸ್ಥೆ ಈ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಹಮ್ಮಿಕೊಂಡ `ಇಂಡಿಯಾ ಫೂಲ್ ಸೇಲ್ಸ್~ಗೆ ಬೆಂಗಳೂರಿನಲ್ಲಿ ಚಾಲನೆ ನೀಡಿತು. ಭಾರತೀಯರನ್ನು ಜರ್ಮನಿ ಪ್ರವಾಸ ಕೈಗೊಳ್ಳುವಂತೆ ಓಲೈಸಲು ಅದು ಭಾರತದ ಎಲ್ಲ ಮೆಟ್ರೊ ನಗರಗಳಲ್ಲಿ ಪ್ರಚಾರ ಹಾಗೂ ರೋಡ್ ಶೊ ನಡೆಸಲಿದೆ.

ಈ ಸಂದರ್ಭದಲ್ಲಿ ಜರ್ಮನಿ ಪ್ರವಾಸೋದ್ಯಮ ಸಂಸ್ಥೆ ಭಾರತೀಯರಿಗೆ ಅಲ್ಲಿನ ಪ್ರವಾಸಿ ತಾಣಗಳ ಜೊತೆಗೆ ಸಂಸ್ಕೃತಿ, ಕಲೆ, ಪ್ರಾಕೃತಿಕ ಸೌಂದರ್ಯ, ಕಡಲ ತೀರಗಳು, ಆತಿಥ್ಯ ಕುರಿತಂತೆ ಪೂರ್ಣ ಮಾಹಿತಿ ಒದಗಿಸುತ್ತಿದೆ.

ಜೊತೆಗೆ ಫ್ರಾಂಕಫರ್ಟ್ ಸಿಟಿಯ ಕಲಾವೈಭವ, ಉತ್ಸಾಹದ ಚಿಲುಮೆಯಂತಿರುವ ಬರ್ಲಿನ್, ಹ್ಯಾಂಬರ್ಗ್, ಮ್ಯೂನಿಚ್, ಹ್ಯಾನೋವರ್, ಸ್ಟುಟ್ಗಾರ್ಟ್, ಲಿಪ್ಜಿಂಗ್ ನಗರಗಳ ಪ್ರವಾಸಿ ತಾಣಗಳನ್ನು ನೋಡಿ ಅನುಭವಿಸುವಂತೆ ಕರೆ ನೀಡುತ್ತಿದೆ.
ಮಾಹಿತಿಗೆ: www.germany.travel

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.