ಬಳ್ಳಾರಿ: ನಗರದ ಸುಕೋ ಬ್ಯಾಂಕ್ ಪ್ರಧಾನ ಶಾಖೆಯ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯದ ಕೃಷಿ ಸಾಧಕರಿಗೆ ಸುಕೃತ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಈ ಉದ್ದೇಶಕ್ಕೆ ರಾಜ್ಯದ ಕೃಷಿ, ವಿಜ್ಞಾನ, ಮಾಧ್ಯಮ ಪರಿಣತಿ ಹೊಂದಿರುವ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿಯನ್ನು ರಚಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ತಿಳಿಸಿದ್ದಾರೆ.

`ಕೃಷಿಯ ಉತ್ತಮ ಮಾದರಿಗಳನ್ನು ಪ್ರೋತ್ಸಾಹಿಸುವ ಮೂಲಕ ಕೃಷಿ ರಂಗದಲ್ಲಿ ಗುಣಾತ್ಮಕ ಬದಲಾವಣೆ ತರುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಕೃಷಿ ಸಾಧಕರಿಗೆ ಕೃಷಿ ಪ್ರಶಸ್ತಿ, ತಂತ್ರಜ್ಞಾನ ಕ್ಷೇತ್ರದ ಸಾಧನೆಗೆ ತಂತ್ರಜ್ಞಾನ ಪ್ರಶಸ್ತಿ ಹಾಗೂ ಕೃಷಿ ಮಾಧ್ಯಮ ಸಂಶೋಧನೆಗೆ ಮಾಧ್ಯಮ ಫೆಲೋಶಿಪ್ ನೀಡಲು ನಿರ್ಧರಿಸಲಾಗಿದ್ದು, ಪ್ರಶಸ್ತಿಯ ಮೊತ್ತ ರೂ.1 ಲಕ್ಷ ಇರಲಿದೆ' ಎಂದು ಹೇಳಿದ್ದಾರೆ.

ಆಸಕ್ತರು ಆಗಸ್ಟ್ 31ರ ಒಳಗಾಗಿ ಸುಕೋ ಬ್ಯಾಂಕ್ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ, ಸಿಂಧೂರ 384/ಎಆರ್ಎಂವಿ ಲೇಔಟ್ 2ನೇ ಹಂತ, 2ನೆ ಬ್ಲಾಕ್ ಬೆಂಗಳೂರು-94 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

ಮಾಹಿತಿಗೆ 94497-96014, 94480-23715 ಅಥವಾ ಇ-ಮೇಲ್ sukritaaward@gmail.com ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.