ಬುಧವಾರ, ಮೇ 25, 2022
24 °C

ಸುಟ್ಟಗಾಯಕ್ಕೆ ಆಯುರ್ವೇದ ಚಿಕಿತ್ಸೆ

ಎನ್.ವಿ. ರಮೇಶ್ Updated:

ಅಕ್ಷರ ಗಾತ್ರ : | |

ನಿತ್ಯದ ಅಗತ್ಯ ಬೆಂಕಿಯನ್ನು ಉಪಯೋಗಿಸುವಾಗ ಆಕಸ್ಮಿಕವಾಗಿ ಸುಟ್ಟು, ಗಾಯಗೊಂಡು ನರಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬೆಂಕಿಯ ಉರಿ ಅದು ಸುಟ್ಟ ನಂತರ ಇನ್ನೂ ಹೆಚ್ಚಾಗಿ ಗಾಯಾಳುವನ್ನು ಬಹಳ ದಿನಗಳವರೆಗೆ ಕಾಡುತ್ತದೆ. ಹೀಗೆ ನರಳುತ್ತಿರುವವರಿಗೆ ರಾಮಬಾಣದಂತಹ ಆಯುರ್ವೇದ ಚಿಕಿತ್ಸೆ ನೀಡುತ್ತಾ ಸೇವೆ ಸಲ್ಲಿಸುತ್ತಿದ್ದಾರೆ ಬಸವಾಪಟ್ಟಣದ ಬಿ.ಇ. ಪ್ರಭಾಕರ್.25 ವರ್ಷಗಳ ಹಿಂದೆ ದಾವಣಗೆರೆಯಿಂದ ಬಸವಾಪಟ್ಟಣಕ್ಕೆ ಬಂದು ಒಂದು ಚಿಕ್ಕ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿರುವ ಅವರು, ಬಾಲ್ಯದಿಂದಲೇ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ತುಡಿತಹೊಂದಿದ್ದರು. ಸನ್ಯಾಸಿಯೊಬ್ಬರಿಂದ ಈಬಗ್ಗೆ ಪ್ರೇರಣೆ ಹೊಂದಿದ ಅವರು ಹತ್ತು ವರ್ಷಗಳ ಹಿಂದೆ ನಾಟಿ ವೈದ್ಯರೊಬ್ಬರಿಂದ ಸುಟ್ಟಗಾಯಕ್ಕೆ ಔಷಧ ಮಾಡಿಸಿ ಖರೀದಿಸಿ ತಂದು ಉಚಿತವಾಗಿ ರೋಗಿಗಳಿಗೆ ನೀಡತೊಡಗಿದರು.ಈ ಔಷಧ ಸುಟ್ಟ ಗಾಯದ ಉರಿಯನ್ನು ನಿವಾರಿಸಿ, ಗಾಯವನ್ನು ಸಂಪೂರ್ಣವಾಗಿ ಗುಣಪಡಿಸತೊಡಗಿದ್ದರಿಂದ, ದಿನೇ ದಿನೇ ಇವರಲ್ಲಿಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗತೊಡಗಿತು. ಈ ಮಧೈ ಅವರಿಗೆ ಔಷಧ ಒದಗಿಸುತ್ತಿದ್ದ ವೈದ್ಯರು ಔಷಧ ಮಾಡಿಕೊಡಲು ನಿಶ್ಯಕ್ತರಾದರು. ಅವರಿಂದ ಔಷಧ ತಯಾರಿಸುವ ವಿದ್ಯೆ ಕಲಿತು ಈಗ ಅವರೇ ಈ ಸಿದ್ಧ ಔಷಧಿಯನ್ನು ತಮ್ಮ ಮನೆಯಲ್ಲಿಯೇ ತಯಾರಿಸಿ ಗಾಯಾಳುಗಳಿಗೆ ನೀಡುತ್ತಿದ್ದಾರೆ.

ಈ ಔಷಧ ಸುಟ್ಟಗಾಯದ ಉರಿಯನ್ನು ನಿವಾರಿಸುವುದರೊಂದಿಗೆ ಕೆಲವೇ ದಿನಗಳಲ್ಲಿ ಗಾಯವನ್ನು ವಾಸಿ ಮಾಡುತ್ತಿದೆ. ಅಲ್ಲದೇ ಗಾಯದ ಕಲೆ ಉಳಿಯದಂತೆ ಮಾಡುತ್ತದೆ.ಜತೆಗೆ, ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡ ಪ್ರಭಾಕರ್, ಅದಕ್ಕಾಗಿ ನಾಟಿ ಔಷಧ ತಯಾರಕರಿಂದ ಮಧುಮೇಹ ನಿವಾರಣೆ ಔಷಧ ತಯಾರಿಕೆ ಕಲಿತು, ಅದಕ್ಕೂ ಔಷಧ ನೀಡುತ್ತಿದ್ದಾರೆ.

ಇದರಿಂದ ಅವರಲ್ಲಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿದೆ. ದೂರ ದೂರದ ಊರುಗಳಿಂದ ಸುಟ್ಟಗಾಯ ಮತ್ತು ಮಧುಮೇಹ ರೋಗ ಚಿಕಿತ್ಸೆಗಾಗಿ ಜನ ಅವರ ಬಳಿ ಬರುತ್ತಿದ್ದಾರೆ.ಉಚಿತವಾಗಿ ಕೊಡುವ ಔಷಧವನ್ನು ಉದಾಸೀನದಿಂದ ನೋಡುತ್ತಿದ್ದ ಜನರ ಧೋರಣೆ ಕಂಡ ಪ್ರಭಾಕರ್, ಮಿತ್ರರ ಸಲಹೆಯಂತೆ ಈಗ ರೋಗಿಗಳಿಂದ ಔಷಧ ತಯಾರಿಕೆಯ ಖರ್ಚನ್ನು ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಪಾರಂಪರಿಕ ವೈದ್ಯರ ಸಂಘದ ಸಕ್ರಿಯ ಸದಸ್ಯರಾಗಿರುವ ಅವರು, ವೈದ್ಯ ಸಮ್ಮಳನಗಳಲ್ಲಿ ಭಾಗವಹಿಸಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ.ಸುಟ್ಟ ಗಾಯಗಳ ನಿವಾರಣೆಗೆ ವರ್ಷಗಟ್ಟಲೇ ಆಸ್ಪತ್ರೆಗಳಿಗೆ ಅಲೆದು ಸಾವಿರಾರು ರೂ ಖರ್ಚುಮಾಡಿಕೊಂಡ ನಂತರ ಅವರ ಬಳಿ ಬಂದು ಕೆಲವೇ ದಿನಗಳಲ್ಲಿ ಗುಣಮುಖರಾಗಿರುವ ರೋಗಿಗಳ ದೊಡ್ಡ ಪಟ್ಟಿಯೇ ಇವರಲ್ಲಿದೆ.

ಹಣಗಳಿಕೆ ನನ್ನ ಉದ್ದೇಶವಲ್ಲ. ಎಷ್ಟೋ ಬಾರಿ ಬಡವರಿಗೆ ಉಚಿತವಾಗಿ ಔಷಧ ನೀಡಿ ಕಳಿಸುತ್ತೇನೆ.ಈ ಔಷಧದಿಂದ ರೋಗಿಗಳು ಗುಣಮುಖರಾಗುವಲ್ಲಿನ ನನ್ನ ಈ ಸೇವೆಯಲ್ಲಿ ಆನಂದ ಮತ್ತು ನೆಮ್ಮದಿ ಇದೆ ಎನ್ನುತ್ತಾರೆ ಪ್ರಭಾಕರ್. ಆಸಕ್ತು ಮಾಹಿತಿಗೆ ಮೊಬೈಲ್: 99016 75139 ಸಂಪರ್ಕಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.