ಶನಿವಾರ, ಜೂನ್ 12, 2021
28 °C

ಸುಧಾಮನಾಗಿ ಬಂದು ಕೃಷ್ಣನಾಗಿ ಬೆಳೆದ ರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಧಾಮನಾಗಿ ಬಂದು ಕೃಷ್ಣನಾಗಿ ಬೆಳೆದ ರಾಜ್

ಬೆಂಗಳೂರು: `ಚಿತ್ರರಂಗಕ್ಕೆ ಸುಧಾಮನಾಗಿ ಬಂದು ಕೃಷ್ಣನಾಗಿ ಬೆಳೆದವರು ಡಾ.ರಾಜ್~ ಎಂದು ಹಿರಿಯ ಚಲನಚಿತ್ರ ನಿರ್ದೇಶಕ ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು.ಗರದಲ್ಲಿ ಸೋಮವಾರ ಕೃಷ್ಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಕಾಡೆಮಿ ಆಯೋಜಿಸಿದ್ದ ಡಾ.ರಾಜ್ ಕುಮಾರ್ ನೆನಪಿನ `ಅಣ್ಣಾವ್ರ ಗುಣಗಾನ~ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ರಂಗಭೂಮಿಯ ಹಿನ್ನೆಲೆಯಿಂದ ಬಂದ ರಾಜ್ ಕುಮಾರ್ ಅವರಿಗೆ ರಾಜ್ ಕುಮಾರ್ ಅವರೇ ಸಾಟಿ. ಕನ್ನಡ ಚಿತ್ರರಂಗದಲ್ಲಿ ಸಣ್ಣ ಮಟ್ಟದಿಂದ ಆರಂಭವಾದ ಅವರ ಚಿತ್ರಯಾನ ಮುಂದೆ ಬೃಹದಾಕಾರವಾಗಿ ಬೆಳೆಯಿತು. ಅವರು ಇಂದು ಭೌತಿಕವಾಗಿ ನಮ್ಮಂದಿಗೆ ಇಲ್ಲದಿದ್ದರೂ ಕನ್ನಡಿಗರ ಮನದಲ್ಲಿ ಸದಾ ಜೀವಂತವಾಗಿದ್ದಾರೆ~ ಎಂದು ಅವರು ನುಡಿದರು.`ರಾಜ್ ಅವರೊಂದಿಗೆ 55 ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಅವರ 36 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆದರೆ ಅವರ ಹಾಗೂ ನನ್ನ ಸಂಬಂಧ ಕೇವಲ ವ್ಯವಹಾರಕ್ಕಷ್ಟೇ ಸೀಮಿತವಾಗಿರಲಿಲ್ಲ. ನಮ್ಮ ಕಾರ್ಯ ಕ್ಷೇತ್ರವನ್ನೂ ಮೀರಿದ ಭಾವನಾತ್ಮಕ ಸಂಬಂಧ ನಮ್ಮಿಬ್ಬರ ನಡುವೆಯಿತ್ತು. ಅವರೊಂದಿಗಿನ ನನ್ನ ಒಡನಾಟ ನನ್ನ ಜೀವನದ ಭಾಗ್ಯ~ ಎಂದು ಅವರು ಭಾವುಕರಾದರು.ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಮಾತನಾಡಿ, `ರಾಜ್ ಕುಮಾರ್ ಅವರೊಬ್ಬ ಚಿರಂತನ ಕಲಾವಿದ. ನಟರು ಸಾಯಬಹುದು ಆದರೆ ಕಲಾವಿದರಿಗೆ ಎಂದಿಗೂ ಸಾವಿಲ್ಲ. ಕನ್ನಡ ಚಲನಚಿತ್ರ ರಂಗದಲ್ಲಿ ಇಂದು ಸಾಕಷ್ಟು ನಟರಿದ್ದಾರೆ. ಆದರೆ ನಿಜವಾದ ಕಲಾವಿದರ ಕೊರತೆಯಿದೆ. ರಾಜ್ ಕುಮಾರ್ ಕನ್ನಡದ ಮಾದರಿ ಕಲಾವಿದರಾಗಿದ್ದವರು~ ಎಂದು ಅವರು ನುಡಿದರು. ನಾಟ್ಯಾಂಜಲಿ ನೃತ್ಯ ತಂಡ ಹಾಗೂ ಅಡಿಗ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರ ಕಾರ್ಯಕ್ರಮ ನಡೆದವು.

ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್, ಗಾಯಕ ಶಶಿಧರ ಕೋಟೆ, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ್‌ಗೌಡ, ಕೃಷ್ಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಕಾಡೆಮಿಯ ಕಾರ್ಯದರ್ಶಿ ಮದ್ದೂರು ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.