ಭಾನುವಾರ, ಏಪ್ರಿಲ್ 11, 2021
30 °C

ಸುನಾಮಿ:ಸಿಬ್ಬಂದಿ ವಾಪಸಿಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪರಮಾಣು ವಿಕಿರಣ ಸೋರಿಕೆಯ ಭೀತಿಗೆ ಒಳಗಾಗಿರುವ ಜಪಾನ್‌ನಲ್ಲಿ ಇರುವ ತಮ್ಮ ಸಿಬ್ಬಂದಿಯ ಸುರಕ್ಷಿತ ವಾಪಸಾತಿಗೆ ದೇಶದ ಸಾಫ್ಟ್‌ವೇರ್ ದೈತ್ಯ ಸಂಸ್ಥೆಗಳು ಮುಂದಾಗಿವೆ.ಮುಂಜಾಗ್ರತಾ ಕ್ರಮಗಳ ಅಂಗವಾಗಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮರಳಿ ಸ್ವದೇಶಕ್ಕೆ ಬರಲು ಮನಸ್ಸು ಮಾಡಿದರೆ ಸೂಕ್ತ ವ್ಯವಸ್ಥೆ ಮಾಡಿಕೊಡುವುದಾಗಿಯೂ ತಿಳಿಸಿವೆ.ಮೊದಲು ತಮ್ಮ ಕುಟುಂಬದ ಸದಸ್ಯರನ್ನು ಮರಳಿ ಕಳಿಸಲು ಮತ್ತು ಸಂದರ್ಭ ಒದಗಿದರೆ ಸಿಬ್ಬಂದಿಯೂ ಮರಳುವ ಆಯ್ಕೆಯನ್ನು ಇನ್ಫೋಸಿಸ್ ಮುಂದಿಟ್ಟಿದೆ.ಸಿಬ್ಬಂದಿಯ ಸುರಕ್ಷಿತ ಸ್ಥಳಾಂತರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಕೂಡ ತಿಳಿಸಿದೆ. ಸಿಬ್ಬಂದಿಯ ಬಗ್ಗೆ ತಕ್ಷಣದ ಮಾಹಿತಿಗಾಗಿ ವಿಪ್ರೊ ಸಂಸ್ಥೆಯು ಹಾಟ್‌ಲೈನ್ ಸಂಪರ್ಕದ ವ್ಯವಸ್ಥೆ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.