ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಬುಧವಾರ ನಾಮಪತ್ರದ ಜತೆ ಆಸ್ತಿ ವಿವರವನ್ನೂ ಚುನಾವಣಾಧಿಕಾರಿಗೆ ಸಲ್ಲಿಸಿದರು. ಕಾರ್ಕಳದ ನೆಕ್ಲಾಜೆ ಗುತ್ತಿನ ಕಾಳಿಕಾಂಬ ದೇವಸ್ಥಾನ ಸಮೀಪದ ನಿವಾಸಿ ಸುನೀಲ್ ಕುಮಾರ್(37) ಬಿ.ಎ. ಪದವೀಧರ. ಪತ್ನಿ ಪ್ರಿಯಾಂಕಾ, ಇಬ್ಬರು ಪುತ್ರಿಯರಿದ್ದಾರೆ.

ಚರಾಸ್ತಿ ಮೌಲ್ಯ: ನಗದು ಹಣ ರೂ. 52 ಸಾವಿರವಿದ್ದು, ಪತ್ನಿ ಬಳಿ ರೂ. 30 ಸಾವಿರವಿದೆ. ಸುನೀಲ್, ವಿವಿಧ ಬ್ಯಾಂಕ್ ಖಾತೆಗಳಲ್ಲಿ ರೂ. 1.50 ಲಕ್ಷ ಠೇವಣಿಯಿದ್ದು, ಪತ್ನಿ ರೂ. 94,737 ಠೇವಣಿ ಹೊಂದಿದ್ದಾರೆ. ರೂ. 15,585 ಷೇರು ಹಣ ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ರೂ.41,983, ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ರೂ.2.65 ಲಕ್ಷ ಹಣ ಹೂಡಿದ್ದಾರೆ.

ರೂ.15.59 ಲಕ್ಷ ಮೌಲ್ಯದ ಟೊಯೋಟಾ ಇನ್ನೋವಾ(2011) ಕಾರಿದೆ. ರೂ. 2.85 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣವಿದೆ. ಪತ್ನಿ ಬಳಿ ರೂ. 44.85 ಲಕ್ಷ ಮೌಲ್ಯದ 1,725 ಗ್ರಾಂ ಚಿನ್ನಾಭರಣವಿದ್ದು ರೂ. 5.70 ಲಕ್ಷ ಬೆಲೆಯ 10 ಕೆ.ಜಿ. ಬೆಳ್ಳಿ ವಸ್ತುಗಳಿವೆ.

ಬೈಂದೂರಿನ ಮೂಕಾಂಬಿಕಾ ಟ್ರಾನ್ಸ್ಪೋರ್ಟ್ನಲ್ಲಿ 4ನೇ 1 ಭಾಗ ಪಾಲುದಾರಿಕೆ, ಪತ್ನಿ ಉಡುಪಿಯ ಶ್ರೀಕೃಷ್ಣ ಮೆಡಿಕಲ್ ಸಂಸ್ಥೆಯಲ್ಲಿ ಮೂರನೇ ಒಂದು ಭಾಗ ಪಾಲುದಾರಿಕೆ ರೂ. 4 ಲಕ್ಷ ಬಂಡವಾಳ ಹೊಂದಿದ್ದಾರೆ. ಒಟ್ಟು ಚರಾಸ್ತಿ ಮೌಲ್ಯ ರೂ. 8.10 ಲಕ್ಷ. ಪತ್ನಿ ಬಳಿ ರೂ. 55.79 ಲಕ್ಷದಷ್ಟು ಚರಾಸ್ತಿ ಇದೆ.

ಕಾರ್ಕಳದ ಕಡ್ತಲದಲ್ಲಿ 9.32 ಎಕರೆ, ನಿಟ್ಟೆಯಲ್ಲಿ 1.06 ಎಕರೆ (ರೂ. 33.32 ಲಕ್ಷ ಮೌಲ್ಯ) ಕೃಷಿಭೂಮಿ ಇದೆ. ಪತ್ನಿಗೆ ಕಡ್ತಲದಲ್ಲಿ ರೂ. 4.62 ಲಕ್ಷ ಮೌಲ್ಯದ 2.01 ಎಕರೆ ಕೃಷಿಭೂಮಿ ಇದೆ.

ಸಾಲ: ಸಿಂಡಿಕೇಟ್ ಬ್ಯಾಂಕ್ ಕಾರ್ಕಳ ಶಾಖೆಯಲ್ಲಿ ರೂ. 11.96 ಲಕ್ಷ ವಾಹನ ಸಾಲ, ರೂ. 6.79 ಲಕ್ಷ ಕೃಷಿ ಸಾಲ ಸೇರಿ ಒಟ್ಟು ರೂ.18.75 ಲಕ್ಷ ಸಾಲವಿದೆ. 2010-11ರಲ್ಲಿ ಸುನೀಲ್ ಕುಮಾರ್ ರೂ. 56,420 ಆದಾಯ ತೆರಿಗೆ ಪಾವತಿಸಿದ್ದಾರೆ.

2008ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾರ್ಕಳದಿಂದ ಸ್ಪರ್ಧಿಸುವಾಗ ಆಸ್ತಿ ಮೌಲ್ಯ ರೂ. 13.94 ಲಕ್ಷ, ಸಾಲ ರೂ. 6.50 ಲಕ್ಷವಿತ್ತು. ಈಗ ಆಸ್ತಿ ಮೊತ್ತ ರೂ. 58.17 ಲಕ್ಷಕ್ಕೇರಿದೆ. ಪತ್ನಿ ಪ್ರಿಯಾಂಕ ಒಟ್ಟು ಆಸ್ತಿ ಪತಿಗಿಂತಲೂ ಹೆಚ್ಚೇ (ರೂ. 62.67 ಲಕ್ಕ) ಇದೆ. 2008ರಲ್ಲಿ ಪ್ರಿಯಾಂಕ ಅವರ ಆಸ್ತಿ ಮೌಲ್ಯ ರೂ. 3.50 ಲಕ್ಷವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.