`ಸುಪ್ರೀಂ'ನಲ್ಲಿ ಬಂಧನ ಪ್ರಶ್ನಿಸಿದ ಸುಬ್ರತೊ

ನವದೆಹಲಿ (ಪಿಟಿಐ): ನ್ಯಾಯಾಲಯ ಆದೇಶಿಸಿದರೂ ಹೂಡಿಕೆದಾರರ ಹಣ ಹಿಂದಿರುಗಿಸಲು ವಿಫಲವಾಗಿ ಬಂಧನಕ್ಕೊಳಗಾಗಿರುವ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೊ ರಾಯ್ ಅವರು ತಮ್ಮ ಬಂಧನವನ್ನು ಪ್ರಶ್ನಿಸಿ ಬುಧವಾರ ಸುಪ್ರೀಂ ಕೋರ್ಟ್ ಮೋರೆಹೋಗಿದ್ದಾರೆ.
ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ಅವರ ನೇತೃತ್ವದ ಪೀಠದ ಮುಂದೆ ಸುಬ್ರತೊ ಪರ ಹಾಜರಾದ ಹಿರಿಯ ವಕೀಲ ರಾಮ ಜೇಠ್ಮಲಾನಿ ಅವರು ತಮ್ಮ ಈ ಅರ್ಜಿಯನ್ನು ಹೇಬಿಯಸ್ ಕಾರ್ಪಸ್ ಎಂದು ಪರಿಗಣಿಸಿ ತುರ್ತಾಗಿ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಇದೇ ವೇಳೆ ಜೇಠ್ಮಲಾನಿ ಅವರು `ಕೆಲ ದೋಷಗಳನ್ನು ತಕ್ಷಣವೇ ಸರಿಪಡಿಸುವ ಅಗತ್ಯವಿದೆ' ಎಂದು ಹೇಳಿದರು. ನಂತರ ಪೀಠವು ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿತು.
ಭೋಜನ ವಿರಾಮದ ನಂತರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಪೀಠವು ಜೇಠ್ಮಲಾನಿ ಅವರ ವಾದವನ್ನು ಆಲಿಸಿ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.