ಶಹಾಬಾದ: ಸುರಕ್ಷತಾ ಉಪಕರಣ ಕಡ್ಡಾಯವಾಗಿ ಬಳಸುವುದರ ಜೊತೆಗೆ ನಿಯಮಗಳ ಸೂಕ್ತ ಪಾಲನೆ ಹಾಗೂ ಅನುಷ್ಠಾನ ಅಗತ್ಯ. ಸುರಕ್ಷತೆ ಕೇವಲ ಒಂದು ದಿನದ ಆಚರಣೆಯಾಗದೆ ನಿರಂತರ ಬದುಕಿನ ಭಾಗವಾಗಬೇಕು ಎಂದು ಕರ್ನಾಟಕ ಸರ್ಕಾರದ ಕಾರ್ಖಾನೆಗಳ ಸಹಾಯಕ ನಿರ್ದೇಶಕ ವೆಂಕಟೇಶ ರಾಥೋಡ ಒತ್ತಿ ಹೇಳಿದರು.

ಅಲ್ಸ್ಟಾಂ ಪ್ರಾಜೆಕ್ಟ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯ `ರಂಗಮಂದಿರ~ದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ 41 ನೆ ರಾಷ್ಟ್ರೀಯ ಸುರಕ್ಷತಾ ದಿನದ ಸಮಾರೋಪ ಸಮಾರಂಭದಲ್ಲಿ ಸುರಕ್ಷತಾ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ಅಲ್ಸ್ಟಾಂ ಕಾರ್ಖಾನೆ ನಿರ್ದೇಶಕ ರಾಜೀವ ಘೋಷ್, ಸುರಕ್ಷತಾ ಸಮಿತಿ ಅಧ್ಯಕ್ಷ ಎಸ್.ಆರ್. ಗುರಾಗೋಳ, ಸದಸ್ಯ ಎಂ.ಎಸ್.ಪದ್ಮಾಜಿ ಮಾತನಾಡಿದರು. ಮಾನವ ಸಂಪನ್ಮೂಲ ಇಲಾಖೆ ಮುಖ್ಯಸ್ಥ ವಿ.ಸುರೇಶ, ಇಎಚ್ಎಸ್ ಮುಖ್ಯಸ್ಥ ಸುಧೀರ ಹೂಲಿ, ಸುರಕ್ಷತಾ ಅಧಿಕಾರಿ ಸಿಂಹಾಚಲ, ಎ.ಸುರೇಶ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಉದ್ಯೋಗಿಗಳಿಗೆ ಬಹುಮಾನ ವಿತರಿಸಲಾಯಿತು. ನಾಟ್ಯ ನಿಕೇತನ ನೃತ್ಯ ಕೇಂದ್ರದ ಮಕ್ಕಳು ಸುನೀತಾ ಗಣೇಶ ನಿರ್ದೇಶನದ ಸುರಕ್ಷತಾ ನೃತ್ಯ ರೂಪಕಗಳನ್ನು ಹಾಗೂ ಸುಧಾಕರ, ಅಲೆಕ್ಸ್ ಹಾಗೂ ಅಲ್ವಿಸ್ ಸುರಕ್ಷತಾ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.