ನ್ಯೂಯಾರ್ಕ್ (ಪಿಟಿಐ): ಅಲ್ಖೈದಾ ಮುಖ್ಯಸ್ಥ ಲಾಡೆನ್ ಹತ್ಯೆಗೆ ಮುನ್ನ ಅಮೆರಿಕ ಗುಪ್ತಚರ ಇಲಾಖೆ ಸಾಕಷ್ಟು ಬೆವರು ಸುರಿಸಿದೆ. ಸತತ ಏಳು ತಿಂಗಳ ನಿಗಾ ವಹಿಸಿದ ಮೇಲೆ ಅಮೆರಿಕ ಪಡೆಗಳಿಗೆ ಯಶಸ್ಸು ದೊರೆತಿದೆ.
ಏಳು ತಿಂಗಳ ಹಿಂದೆ ಸಿಐಎ ಕಾರ್ಯಕರ್ತರು ಅಬೋಟಾಬಾದ್ನ ದೊಡ್ಡ ಆವರಣಗೋಡೆಯ ಮನೆಗೆ ರವಾನೆಯಾಗುತ್ತಿದ್ದ ಕೊರಿಯರ್ ಪತ್ತೆ ಹಚ್ಚಿ ಲಾಡೆನ್ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದರು.

ಹೊರ ಜಗತ್ತಿನ ಜತೆ ದೂರವಾಣಿ, ಇಂಟರ್ನೆಟ್ ಸೌಲಭ್ಯವಿಲ್ಲದೇ, ಲಾಡೆನ್ ಹೇಗೆ ವ್ಯವಹರಿಸುತ್ತಾನೆ ಎನ್ನುವುದನ್ನು ಮನಗಂಡ ಅಮೆರಿಕ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ‘ಕೊರಿಯರ್’ನ ಮೂಲದ ಪತ್ತೆಗೆ ಆರಂಭಿಸಿದರು. ನಾಲ್ಕು ವರ್ಷಗಳ ಹಿಂದೆ ಲಾಡೆನ್ ನಿಜ ಹೆಸರು ಪತ್ತೆಯಾದ ಮೇಲೆ ಆತನ ಬಗ್ಗೆ ನಿಖರ ಮಾಹಿತಿಗಳು ಲಭ್ಯವಾಗಲಾರಂಭಿಸಿದವು.

ಬಿನ್ ಲಾಡೆನ್ ನಿಜ ಹೆಸರು ಸ್ಪಷ್ಟವಾದ ಎರಡು ವರ್ಷಗಳ ನಂತರ ಆತನ ಅಡಗುದಾಣದ ಪತ್ತೆಕಾರ್ಯ ನಡೆಯಿತು. ಇಸ್ಲಾಮಾಬಾದ್ನಿಂದ ಒಂದು ಗಂಟೆಯ ಪ್ರಯಾಣ ದೂರದ ಅಬೋಟಾಬಾದ್ನಲ್ಲಿ ದೊಡ್ಡ ಆವರಣಗೋಡೆಯ ಒಳಗಿದ್ದ ಎರಡಂತಸ್ತಿನ ಕಟ್ಟಡದಲ್ಲಿ ಆತ ಅಡಗಿರುವುದು ಕೇವಲ ಏಳು ತಿಂಗಳ ಹಿಂದೆ ಖಚಿತವಾಯಿತು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಸಿಐಎ ವಿಶ್ಲೇಷಕರು 2010ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ವಾರಗಟ್ಟಲೇ ಕಟ್ಟಡದ ಉಪಗ್ರಹ ಚಿತ್ರಗಳ ವಿಶ್ಲೇಷಣೆ ನಡೆಸಿದರು. ಸೆಪ್ಟೆಂಬರ್ ವೇಳೆಗೆ ಬಿನ್ ಲಾಡೆನ್ 2005ರಲ್ಲಿ ನಿರ್ಮಿಸಿದ್ದ ದೊಡ್ಡ ಆವರಣಗೋಡೆಯ ಒಳಗಿರುವ ಕಟ್ಟಡದಲ್ಲಿ ಅಡಗಿರುವುದು ಖಚಿತವಾಯಿತು ಎಂದೂ ತನ್ನ ವರದಿಯಲ್ಲಿ ತಿಳಿಸಿದೆ.

ಮಾಹಿತಿ ಕಲೆ ಹಾಕುವ ಸಂದರ್ಭದಲ್ಲಿ ಒಸಾಮ ‘ದೊಡ್ಡ ಬೆದರಿಕೆ’ ಎಂದು ಭಾವಿಸಲಾಗಿತ್ತು. ಆತನ (ಲಾಡೆನ್) ಸಮೀಪ ವರ್ತಿಗಳ ಚಲನವಲನದ ಮೇಲೆ ನಿಗಾ ಇಡಲಾಯಿತು. ಆತನಿಗೆ ಬರುತ್ತಿದ್ದ ಕೊರಿಯರ್ಗಳ ಮೇಲೂ ಕಣ್ಣಿಡಲಾಯಿತು. ಬಂಧಿತ ಉಗ್ರರಿಂದಲೂ ಲಾಡೆನ್ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ವಿಶೇಷವಾಗಿ ಒಂದು ಕೊರಿಯರ್ ಆತನ ಅಡಗುದಾಣದ ಬಗ್ಗೆ ಖಚಿತ ಮಾಹಿತಿ ಒದಗಿಸಿತು.

ಅಮೆರಿಕ ಪಡೆಗಳು ಈ ಹಿಂದೆ ಬಂಧಿಸಿದ್ದ ಉಗ್ರರು ಲಾಡೆನ್ ಬಗ್ಗೆ ಹಲವು ಮಾಹಿತಿಗಳನ್ನು ಒದಗಿಸಿದ್ದರು. ಆತನ ಅಡ್ಡ ಹೆಸರುಗಳು, ಆತನ ಗುರುತುಗಳ ಬಗ್ಗೆ ತಿಳಿಸಿದ್ದರು. 2001ರ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯ ಸೂತ್ರಧಾರ ಖಾಲಿದ್ ಶೇಖ್ ಮೊಹ್ಮದ್ ಮತ್ತು 2005ರಲ್ಲಿ ಸೆರೆ ಹಿಡಿದ ಲಾಡೆನ್ನ ನಂಬಿಕಸ್ತ ಸಹಾಯಕ ಅಬು ಫರಾಜ್ ಅಲ್ ಅಲ್ ಲಿಬ್ಬಿ ಅವರಿಂದ ಅಮೆರಿಕ ಗುಪ್ತಚರ ಇಲಾಖೆ ಸಾಕಷ್ಟು ಮಾಹಿತಿ ಕಲೆ ಹಾಕಿತ್ತು.

ಎರಡು ವರ್ಷಗಳ ಹಿಂದೆ ಅಮೆರಿಕ ಗುಪ್ತಚರ ಇಲಾಖೆ ಲಾಡೆನ್ ಬಗ್ಗೆ ನಿಖರ ಮಾಹಿತಿ ಕಲೆಹಾಕಿ, ಆತ ಕೊರಿಯರ್ ಮೂಲಕ ನಡೆಸುತ್ತಿದ್ದ ವ್ಯವಹಾರದ ಅಂಶಗಳನ್ನು ಸಂಗ್ರಹಿಸಿತು. ಆದರೆ ಆತ ಯಾವ ಸ್ಥಳದಿಂದ ಕಾರ್ಯಚರಣೆ ನಡೆಸುತ್ತಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ 2010ರ ಅಗಸ್ಟ್ ತಿಂಗಳಿನಲ್ಲಿ ಅಬೋಟಾಬಾದ್ನಲ್ಲಿ ಲಾಡೆನ್ ಇರುವ ನಿವಾಸದ ಗುರುತು ಪತ್ತೆ ಮಾಡುವಲ್ಲಿ ಗುಪ್ತಚರ ಇಲಾಖೆ ಯಶಸ್ವಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.