ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 202 ಅಂಶಗಳಷ್ಟು ಚೇತರಿಕೆ ಕಂಡಿದ್ದು, 17 ಸಾವಿರದ ಗಡಿ ದಾಟಿದೆ.

ಕಳೆದ ಆಗಸ್ಟ್ 11ರ ನಂತರ ದಾಖಲಾಗಿರುವ ಗರಿಷ್ಠ ಮಟ್ಟ ಇದಾಗಿದ್ದು, ದಿನದಂತ್ಯಕ್ಕೆ ಸೂಚ್ಯಂಕ 17,065 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಬುಧವಾರದ ವಹಿವಾಟಿನಲ್ಲಿ 60 ಅಂಶಗಳಷ್ಟು ಏರಿಕೆ ಕಂಡು 5,124 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ದಿನದ ವಹಿವಾಟಿನಲ್ಲಿ ರಿಯಲ್ ಎಸ್ಟೇಟ್ ರಂಗದ ಷೇರುಗಳು ಲಾಭ ಮಾಡಿಕೊಂಡವು.

ಜಾಗತಿಕ ಆರ್ಥಿಕ ಅಸ್ಥಿರತೆ ಮುಂದುವರೆದಿರುವುದರಿಂದ ಮುಂದಿನ ದಿನಗಳಲ್ಲಿ ಷೇರುಪೇಟೆಗಳಲ್ಲಿ ಗರಿಷ್ಠ ಮಟ್ಟದ ಏರಿಳಿತ ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.