ಶುಕ್ರವಾರ, ಜೂನ್ 18, 2021
22 °C

ಸೂಚ್ಯಂಕ 274 ಅಂಶ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಚ್ಯಂಕ 274 ಅಂಶ ಇಳಿಕೆ

ಮುಂಬೈ (ಪಿಟಿಐ): ಜಾಗತಿಕ ಸಂಗತಿಗಳು ಮತ್ತು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಒತ್ತಡಗಳಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರದ ವಹಿವಾಟಿನಲ್ಲಿ 274 ಅಂಶಗಳಷ್ಟು ಇಳಿಕೆ ದಾಖಲಿಸಿದೆ.ಪ್ರಪಂಚದ ಎರಡನೆಯ ಅತಿ ದೊಡ್ಡ ಆರ್ಥಿಕ ಶಕ್ತಿ ಚೀನಾ, ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶೇ 7.5ರಷ್ಟು `ಜಿಡಿಪಿ~ ಅಂದಾಜಿಸಿದೆ. ಈ ಸಂಗತಿಯು ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿದ್ದು, ಸೂಚ್ಯಂಕ ಕುಸಿಯುವಂತೆ ಮಾಡಿದೆ.ದಿನದ ವಹಿವಾಟಿನಲ್ಲಿ ರಿಯಾಲ್ಟಿ, ಲೋಹ, ಬ್ಯಾಂಕಿಂಗ್, ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರುಗಳು ಮಾರಾಟದ ಒತ್ತಡ ಅನುಭವಿಸಬೇಕಾಯಿತು. ದಿನದಂತ್ಯಕ್ಕೆ 17,362 ಅಂಶಗಳಿಗೆ ವಹಿವಾಟು ಕೊನೆಗೊಂಡಿತು. ಮಂಗಳವಾರ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು, ಇದಕ್ಕೆ ಸಂಬಂಧಿಸಿದ ಒತ್ತಡಗಳು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.