ಗುರುವಾರ , ಫೆಬ್ರವರಿ 25, 2021
20 °C

ಸೂಪರ್ ಡಿವಿಷನ್ ಫುಟ್‌ಬಾಲ್: ಎಂಇಜಿ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಪರ್ ಡಿವಿಷನ್ ಫುಟ್‌ಬಾಲ್: ಎಂಇಜಿ ತಂಡಕ್ಕೆ ಜಯ

ಬೆಂಗಳೂರು: ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಕಂಟ್ರೋಲರೇಟ್ ಆಫ್ ಇನ್ಸ್‌ಪೆಕ್ಷನ್ ಅಂಡ್ ಎಲೆಕ್ಟ್ರಾನಿಕ್ಸ್ (ಸಿಐಎಲ್) ತಂಡ ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯದಲ್ಲಿ ಸೋಲು ಕಂಡಿತು. ಈ ತಂಡ ಒಂಬತ್ತು ಪಂದ್ಯಗಳನ್ನಾಡಿ ಕೇವಲ ಏಳು ಪಾಯಿಂಟ್ಸ್ ಕಲೆ ಹಾಕಿ `ಎ~ ಡಿವಿಷನ್‌ಗೆ ಹಿಂಬಡ್ತಿ ಪಡೆಯಿತು.

ಅಶೋಕ ನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಐಎಲ್ 0-4 ಗೋಲುಗಳಿಂದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಎದುರು ಸೋಲು ಕಂಡಿತು.

ವಿಜಯಿ ತಂಡದ ಅಜಯ್‌ರಾಜ್ ಫಿಲಿಪ್ 35ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಚುರುಕಿನ ಪ್ರದರ್ಶನ ನೀಡಿದ ಪ್ರತಾಬ್ 60 ಹಾಗೂ 63ನೇ ನಿಮಿಷದಲ್ಲಿ ಗೋಲು ಗಳಿಸಿ ಈ ಮುನ್ನಡೆಯನ್ನು 3-0ರಲ್ಲಿ ಹೆಚ್ಚಿಸಿದರು. ಈ ತಂಡದ ಇನ್ನೊಂದು ಗೋಲನ್ನು ಜಿತೆನ್ ಮೇಟಿ 79ನೇ ನಿಮಿಷದಲ್ಲಿ ಗೋಲು ಕಲೆ ಹಾಕಿದರು.

ಈ ಗೆಲುವಿನೊಂದಿಗೆ ಎಂಇಜಿ ಪಾಯಿಂಟ್ಸ್ ಸಂಖ್ಯೆ ಹೆಚ್ಚಿಸಿಕೊಂಡಿತು. ಎಂಟು ಪಂದ್ಯಗಳನ್ನಾಡಿರುವ ಈ ತಂಡ 14 ಪಾಯಿಂಟ್ಸ್ ಹೊಂದಿದೆ. ಗುರುವಾರ ಎಎಸ್‌ಸಿ ಎದುರು ಕೊನೆಯ ಲೀಗ್ ಪಂದ್ಯವನ್ನಾಡಲಿದೆ. ಸ್ಟೂಡೆಂಟ್ಸ್ ಯೂನಿಯನ್ ಒಂಬತ್ತು ಪಾಯಿಂಟ್ಸ್ ಮಾತ್ರ ಹೊಂದಿದೆ.

ಆರ್‌ಡಬ್ಲ್ಯುಎಫ್‌ಗೆ ಜಯ: `ಎ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಆರ್‌ಡಬ್ಲ್ಯುಎಫ್ 2-0ಗೋಲುಗಳಿಂದ ಬಿಯುಎಫ್‌ಸಿ ಎದುರು ಜಯ ಸಾಧಿಸಿತು. ಆರ್‌ಡಬ್ಲ್ಯುಎಫ್ ತಂಡದ ನವೀನ್ (13ನೇ ನಿಮಿಷ) ಮತ್ತು ಎ.ಡಿ. ಕುಮಾರ್ (73ನೇ ನಿ.) ಗೋಲು ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.