ಸೂಫಿ, ಶರಣರಲ್ಲಿ ಸಾಮ್ಯತೆ:ಪುಸ್ತಕ ಹೊರತರಲು ಸಲಹೆ

ಸೋಮವಾರ, ಮೇ 20, 2019
30 °C

ಸೂಫಿ, ಶರಣರಲ್ಲಿ ಸಾಮ್ಯತೆ:ಪುಸ್ತಕ ಹೊರತರಲು ಸಲಹೆ

Published:
Updated:

ಸಿಂದಗಿ (ವಿಜಾಪುರ ಜಿಲ್ಲೆ): ಸೂಫಿಗಳು ಮತ್ತು ಶರಣರಲ್ಲಿ ಸಾಮ್ಯತೆ ಇದೆ. ಇಂಥ ಮಹತ್ವದ ವಿಚಾರ ಸಂಕಿರಣಗಳ ಸಾರವನ್ನು  ಪುಸ್ತಕ ರೂಪದಲ್ಲಿ ಹೊರ ತರಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಪಲತಿ ಪ್ರೊ. ಬಿ.ಆರ್. ಅನಂತನ್ ಸಲಹೆ ನೀಡಿದರು.ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ. ಮನಗೂಳಿ ಕಲಾ ಮಹಾವಿದ್ಯಾಲಯವು ಇತಿಹಾಸ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ಯು.ಜಿ.ಸಿ ಪ್ರಾಯೋಜಕತ್ವದ ರಾಷ್ಟ್ರಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ನಾಡಿನಲ್ಲಿ 10 ಸಾವಿರ ಸೂಫಿ ಸಂತರುಗಳಾಗಿ ಹೋಗಿದ್ದಾರೆ. ದೇಶದಲ್ಲಿ 15 ಕೋಟಿ ಮುಸ್ಲಿಮರಿದ್ದಾರೆ, ಅವರು ಭಾರತೀಯ ಸಂಸ್ಕೃತಿ, ಕಲೆ, ಸಂಗೀತ, ಶಿಕ್ಷಣ ಕ್ಷೇತ್ರಕ್ಕೆ ಅಗಾಧ ಕೊಡುಗೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಬಗ್ಗೆ ಇರಬಹುದಾದ ಪೂರ್ವಾಗ್ರಹ ಪೀಡಿತ ಮನೋಭಾವ ದೂರಾಗಬೇಕಿದೆ.ವಿಜಾಪುರದ ಎರಡನೇ ಆದಿಲ್‌ಶಾಹಿ ಇಬ್ರಾಹಿಂ `ಜಗದ್ಗುರು~ ಎನಿಸಿಕೊಂಡಿದ್ದು, ಇವರ ಆಸ್ಥಾನದಲ್ಲಿ 300 ಹಿಂದೂ ಪಂಡಿತರಿದ್ದರು ಎಂದು  ಸಾನ್ನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.  ಮಾಜಿ ಸಚಿವ ಎಂ.ಸಿ.ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಸೋಮಶೇಖರ ವಾಲಿ ಹಾಜರಿದ್ದರು. ಪ್ರಾಚಾರ್ಯ ಕೆ.ಎಸ್. ಪಾಟೀಲ ಸ್ವಾಗತಿಸಿದರು. ಪ್ರೊ.ಬಿ.ಎನ್.ಪಾಟೀಲ ನಿರೂಪಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಪ್ರೊ.ಅರವಿಂದ ಮನಗೂಳಿ ವಂದಿಸಿದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry