ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿನ ಗೊಂದಲವನ್ನು ಇದೇ 24ರ ಒಳಗೆ ಬಗೆಹರಿಸಬೇಕು ಎಂದು ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಬೆಂಬಲಿಗರು ಎಚ್ಚರಿಸಿದ್ದಾರೆ.

ಶನಿವಾರ ನಡೆದ ಪ್ರತಿಭಟನೆಯಲ್ಲಿ ಮುಖಂಡ ಡಿ.ಕೆ.ಸಿದ್ರಾಮ ಮಾತನಾಡಿದರು. ‘ಬಿಜೆಪಿಗೆ ಸೇರುವುದು ನಾಗಮಾರಪಳ್ಳಿ ಬೆಂಬಲಿಗರಿಗೆ ಇಷ್ಟ ವಿರಲಿಲ್ಲ. ಆದರೂ ಯುಡಿಯೂರಪ್ಪ ಅವರ ಒತ್ತಾಯ ಮೇರೆಗೆ ನಾವು ಬಿಜೆಪಿ ಪಕ್ಷಕ್ಕೆ ಸೇರಿದೆವು’ ಎಂದು ಹೇಳಿದರು.

‘ಈ ಮೊದಲು ಬಿಜೆಪಿ ನಾಯಕರು ಸೂರ್ಯಕಾಂತ್ ನಾಗಮಾರಪಳ್ಳಿ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಈಗ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಿದ್ದು, ನಮಗೆ ಅನ್ಯಾಯವಾಗಿದೆ’ ಎಂದರು.

ಟಿಕೆಟ್ ಹಂಚಿಕೆ ಮಾಡುವಲ್ಲಿ ಸೂರ್ಯಕಾಂತ್ ಅವರಿಗೆ ಆಗಿರುವ ಅನ್ಯಾಯ ಬಿಜೆಪಿ ನಾಯಕರು ಮಾ. 24ರ ಒಳಗೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಗಂದಗೆ ಅವರು, ತಮ್ಮ ಬೇಡಿಕೆಯನ್ನು ಬಿಜೆಪಿ ರಾಜ್ಯ ನಾಯಕರ ಗಮನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಬೆಂಬಲಿಗರು ಪ್ರತಿಭಟನೆ ಕೈಬಿಟ್ಟರು.

ಶಾಸಕ ಗುರುಪಾರದಪ್ಪ ನಾಗಮಾರಪಳ್ಳಿ ಅವರ ಮತ್ತೊಬ್ಬ ಪುತ್ರ ಉಮಾಕಾಂತ ನಾಗಮಾರಪಳ್ಳಿ, ಉದ್ಯಮಿ ಕಾಶೆಪ್ಪ ಧನ್ನೂರು, ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ವಿಜಯಕುಮಾರ್ ಗಾದಗಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಸವಕಲ್ಯಾಣ ವರದಿ: ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾದ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಲೋಕಸಭೆ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ಅವರ ಅಭಿಮಾನಿಗಳು ಶನಿವಾರ ಇಲ್ಲಿನ ಪಕ್ಷದ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದರು.

ಬೈಕ್ ಮೂಲಕ ವಿವಿಧ ವೃತ್ತಗಳಿಗೆ ತೆರಳಿದ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಪಕ್ಷದ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷರ ಎದುರಲ್ಲಿಯೇ ಕೆಲವರು ಕುರ್ಚಿಗಳನ್ನು ಮುರಿದರು. ಸೂರ್ಯಕಾಂತ ನಾಗಮಾರಪಳ್ಳಿ ಪರ ಘೋಷಣೆಗಳನ್ನು ಕೂಗಿದರು.

ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ ಅವರ ಮೂಲಕ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಶಿವಬಸಪ್ಪ ಚನ್ನಮಲ್ಲೆ, ತುಕಾರಾಮ ಕಾಳೇಕರ ಇದ್ದರು.
ಭಾಲ್ಕಿ ವರದಿ: ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿ ಶನಿವಾರ ಭಾಲ್ಕಿಯಲ್ಲಿ ಕಾರ್ಯಕರ್ತರು ವರಿಷ್ಠರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಶಿವಾ ಲೋಖಂಡೆ, ಚಂದ್ರಕಾಂತ ಪಾಟೀಲ, ಶಿವಾಜಿರಾವ ಭೋಸ್ಲೆ ಮಾತನಾಡಿ, ಧರ್ಮಸಿಂಗ್ರಂಥ ಪ್ರಬಲ ಅಭ್ಯರ್ಥಿ ಎದುರು ಗೆಲುವು ಸಾಧಿಸಬೇಕಾದರೆ ಸೂರ್ಯಕಾಂತ ನಾಗಮಾರಪಳ್ಳಿಗೇ ಟಿಕೆಟ್ ನೀಡಬೇಕು ಎಂದರು.

ವರಿಷ್ಠರು ಜಿಲ್ಲೆಯ ಜನರ ಅಭಿಪ್ರಾಯ ಅರ್ಥ ಮಾಡಿಕೊಳ್ಳಬೇಕು. ಈಗ ಕೈಗೊಂಡಿರುವ ನಿರ್ಧಾರವನ್ನು ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ಅಧ್ಯಕ್ಷ ಅಶೋಕ ಮಡ್ಡೆ ಅವರ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದರು.

ಶಾಂತವೀರ ಕೇಸ್ಕರ್, ಸಂಗಮೇಶ ಕಾರಾಮುಂಗೆ, ಸೂರಜ್ ಮಜಗೆ, ದೀಪಕ ಸಿಂಧೆ, ಶರದ್ ದೇಶಪಾಂಡೆ, ಸೋಮನಾಥ ಏಣಕೂರ, ಪ್ರಭಾಕರ ಭಾಸ್ಕರ್, ಅಶೋಕ, ಶಿವಕುಮಾರ ವಾರದ್, ವಿಠಲರಾವ ಚಿಟಗುಪ್ಪೆ, ಅಂಬರೀಶ ಮಲ್ಲೇಶಿ, ಮನ್ಮಥ ಪಾಟೀಲ, ಸಂತೋಷ ಇದ್ದರು.

‘ವರಿಷ್ಠರ ನಿರ್ಧಾರ ಬದಲಾವಣೆ ಇಲ್ಲ’
ಔರಾದ್: ಪಕ್ಷದ ವರಿಷ್ಠರು ಅಳೆದು, ತೂಗಿ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಹೀಗಾಗಿ ಬದಲಾವಣೆ ಅಸಾಧ್ಯ ಎಂದು ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಾನ ಖೂಬಾ ಹೇಳಿದ್ದಾರೆ.

ಶನಿವಾರ ಪಟ್ಟಣದ ಅಮರೇಶ್ವರ ದೇವರ ದರ್ಶನ ಪಡೆದ ನಂತರ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. ಟಿಕೆಟ್ ವಂಚಿತರಿಗೆ ಅಸಮಾಧಾನವಾಗುವುದು ಸಹಜ. ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೂ ಅದೇ ರೀತಿಯಾಗಿದೆ. ಈಗಾಗಲೇ ಪಕ್ಷದ ನಾಯಕರು ಅವರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಅವರು ಬೇರೆ ಪಕ್ಷ ಹೋಗುವುದಾಗಲಿ, ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಲಿ ಅವರಿಗೆ ಬಿಟ್ಟ ವಿಚಾರ.
ಆದರೆ ಇಂತಹ ಯಾವುದೇ ಬೆಳವಣಿಗೆಯಿಂದ ನನ್ನ ಗೆಲುವಿಗೆ ಅಡ್ಡಿಯಾಗುವುದಿಲ್ಲ. ಪಕ್ಷದ ಕಾರ್ಯಕರ್ತರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿ ಬಿ. ಫಾರಂ ಕೂಡ ತಮಗೆ ತಲುಪಿದೆ. ಮಾ. 24 ಅಥವಾ 25ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ಶಂಕರ ಭಯ್ಯಾ ಬಿಎಸ್ಪಿ ಅಭ್ಯರ್ಥಿ
ಬೀದರ್: ಬಹುಜನ ಸಮಾಜ ಪಕ್ಷವು ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಶಂಕರ ಭಯ್ಯಾ ಅವರ ಹೆಸರು ಪ್ರಕಟಿಸಿದೆ.

ಪಕ್ಷದ ರಾಜ್ಯ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಈ ಘೋಷಣೆ ಮಾಡಿದ್ದು, ಭಯ್ಯಾ ಮಾ. 26 ರಂದು ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷ ಅಂಕುಶ್ ಗೋಖಲೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.