ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಈಚೆಗೆ ನಡೆದ `ಕವಿ ಕಾವ್ಯ~ ಹಾಗೂ `ಚುಟುಕು ಸಿಂಚನ~ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಡಾ.ಶಿವರಾಮ ಕಾರಂತ, ಡಿವಿಜಿ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಕೆ.ಎಸ್.ನರಸಿಂಹಸ್ವಾಮಿ, ಯು.ಆರ್.ಅನಂತ ಮೂರ್ತಿ ಹಾಗೂ ಮುದ್ದಣ್ಣ ಅವರ ಬದುಕು-ಬರಹದ ಕುರಿತಾದ ನುಡಿ ನಮನ ಗಮನಸೆಳೆಯಿತು.

ನಗರದ ಎಸ್ಆರ್ಇಟಿ ಶಾಲೆಯು ಮಕ್ಕಳ ಸೃಜನಶೀಲತೆ, ವಿವೇಚನ ಶಕ್ತಿ, ಮಾತಿನ ಶೈಲಿ, ಉತ್ಸಾಹಕ್ಕೆ ವೇದಿಕೆಯಾಗಿತ್ತು.

ವಿದ್ಯಾರ್ಥಿಗಳು, ಪ್ರಚಲಿತ ವಿದ್ಯಮಾ ನಗಳ ಬಗ್ಗೆ ಬೆಳಕು ಚೆಲ್ಲುವಂತಹ ಅರ್ಥ ಪೂರ್ಣ ಸ್ವ-ರಚಿತ ಚುಟುಕುಗಳನ್ನು ವಾಚಿಸಿದರು. ಪೊಲೀಸ್ ಇಲಾಖೆ ಅಧಿಕಾರಿ ಎಂ.ಸಿ. ವಿಶ್ವನಾಥ್ `ಸಂಗೊಳ್ಳಿ ರಾಯಣ್ಣ~ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿ ತೋರಿಸಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಗಾಯಕ ಮಹೇಶ್ ಕುಮಾರ್, ರವಿ ಹಾಗೂ ಚಂದ್ರಶೇಖರ್ ದೇಶಭಕ್ತಿ ಪ್ರಸ್ತುತ ಪಡಿಸಿದರು.

ಎಸ್ಆರ್ಇಟಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಎಲ್.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಕಾಗತಿ ವೆಂಕಟರತ್ನಂ ಮಾತನಾಡಿದರು.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು. ಶಾಲೆ ವ್ಯವಸ್ಥಾಪಕ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಶಿವಕುಮಾರ್, ಕನ್ನಡ ಉಪನ್ಯಾಸಕ ಕೆ.ಎಂ.ವೆಂಕಟೇಶ್, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ವಿ.ನಾರಾಯಣರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಯಲ್ ಶಿ.ಮ.ಮಂಜುನಾಥ್, ಕವಿ ದೇವರ ಮಳ್ಳೂರು ಚನ್ನಕೃಷ್ಣ ಮತ್ತಿತರರು ಹಾಜರಿದ್ದರು. ಕೆ.ಎಸ್.ನೂರುಲ್ಲಾ ನಿರೂಪಿಸಿದರು.

ಅಸ್ಸಾಂ ಗಲಭೆ: ಪ್ರತಿಭಟನೆ
ಕೋಲಾರ: ಅಸ್ಸಾಂ ಗಲಭೆಗೆ ಕಾರಣರಾದ ಬಾಂಗ್ಲಾದೇಶಿ ಅಕ್ರಮ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಮಂಗಳವಾರ ಎಬಿವಿಪಿ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.