ಶುಕ್ರವಾರ, ಮೇ 7, 2021
27 °C

ಸೆಕೆಂಡ್‌ಗೆ 1 ಪೈಸೆ: ಟ್ರಾಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಮೊಬೈಲ್ ಫೋನ್ ಸೇವಾ ಸಂಸ್ಥೆಗಳು ಎಲ್ಲ ಟಾರಿಫ್ ಪ್ಲಾನ್‌ಗಳ ಜತೆಗೆ, `ಸೆಕೆಂಡ್‌ಗೆ 1 ಪೈಸೆ~ ಕರೆ ದರದ ಕೊಡುಗೆಯನ್ನೂ ಗ್ರಾಹಕರಿಗೆ ಕಡ್ಡಾಯವಾಗಿ ನೀಡಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಸೂಚನೆ ನೀಡಿದೆ.  ಇದಕ್ಕೆ ಸಂಬಂಧಿಸಿ ಟಾರಿಫ್‌ನಲ್ಲಿ ತಿದ್ದುಪಡಿ ಮಾಡಿರುವ `ಟ್ರಾಯ್~,  ಪ್ರಿಪೇಯ್ಡ ಮತ್ತು ಪೋಸ್ಟ್ ಪೇಯ್ಡ ಗ್ರಾಹಕರಿಬ್ಬರಿಗೂ `ಏಕರೂಪದ ಈ ಕರೆ ದರ~  ಅನ್ವಯ ಎಂದು ಶುಕ್ರವಾರ ಹೇಳಿದೆ.ಜತೆಗೆ 25ಕ್ಕೂ ಹೆಚ್ಚಿನ ಇತರೆ ಟಾರಿಫ್ ಪ್ಲಾನ್‌ಗಳನ್ನೂ ಜಾರಿಗೊಳಿಸುವ ಸ್ವಾತಂತ್ರ್ಯವನ್ನು ಸೇವಾ ಸಂಸ್ಥೆಗಳು ಹೊಂದಿವೆ ಎಂದು `ಟ್ರಾಯ್~ ತಿಳಿಸಿದೆ.ಏಕರೂಪ ಕರೆ ದರ ನಿಗದಿ ಸಲಹೆಗೆ ಈ ಮೊದಲು ಮೊಬೈಲ್ ಫೋನ್ ಸೇವಾ ಸಂಸ್ಥೆಗಳು ಮೊದಲು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈಗ ಕಡ್ಡಾಯಗೊಳಿಸಿರುವುದರಿಂದ ಜಾರಿಗೊಳಿಸುವುದು ಅನಿವಾರ್ಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.